ಶಾಲೆಗೆ ರಸ್ತೆ ಬೇಕು:ಮಕ್ಕಳ ಬೇಡಿಕೆ

ಶನಿವಾರ, ಜೂಲೈ 20, 2019
22 °C

ಶಾಲೆಗೆ ರಸ್ತೆ ಬೇಕು:ಮಕ್ಕಳ ಬೇಡಿಕೆ

Published:
Updated:

ಸೇಡಂ: ತಾಲ್ಲೂಕಿನ ಆಂಧ್ರಗಡಿ ಭಾಗದ ರಿಬ್ಬನ್‌ಪಲ್ಲಿ ಗ್ರಾಮದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಯ ಕಟ್ಟಡವನ್ನು ಗ್ರಾಮದ ಎಲ್ಲರ ವಿರೋಧವಿದ್ದರೂ ಹೊಲಗಳ ಮಧ್ಯೆ ನಿರ್ಮಿಸಿರುವುದರಿಂದ ಮಳೆಗಾಲದಲ್ಲಿ ಮಕ್ಕಳು ಮಗ್ಗಲಿನ ಎರಡು ಭಾಗದಲ್ಲಿಯ ಜಮೀನುಗಳ ಕೆಸರಿನಲ್ಲಿಯೇ ಹೋಗಬೇಕಾಗಿದೆ.ಸಂಬಂಧಪಟ್ಟ ಇಲಾಖೆ ಈ ಕೂಡಲೇ ಶಾಲೆಗೆ ತೆರಳಲು ಸರ್ವ ಋತು ರಸ್ತೆ ನಿರ್ಮಿಸಿ ಮಕ್ಕಳಿಗೆ ಅನುಕೂಲತೆ ಕಲ್ಪಿಸಿಕೊಡ ಬೇಕು ಎಂದು ಗ್ರಾಮದ ಹರ್ಷವರ್ಧನರೆಡ್ಡಿ ವಿನಂತಿಸಿದ್ದಾರೆ.ಹುದ್ದೆ ಖಾಲಿ: ಗ್ರಾಮ ಪಂಚಾಯಿತಿ ವ್ಯಾಪ್ತಿಯ ಖಂಡೇರಾಯನಪಲ್ಲಿ ಆರೋಗ್ಯ ಉಪ-ಕೇಂದ್ರದ ವ್ಯಾಪ್ತಿಗೆ 5 ಗ್ರಾಮಗಳು 2 ತಾಂಡಾಗಳು ಬರುತ್ತವೆ. ಅಲ್ಲಿನ ಜನಸಂಖ್ಯೆ 7600. ಜನಸಂಖ್ಯೆ ಅನುಗುಣವಾಗಿ ಒಬ್ಬ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಮತ್ತು ಇಬ್ಬರು ಪುರಷ ಆರೋಗ್ಯ ಸಹಾಯಕರು ಇರಬೇಕು.ಆದರೆ, ಆರೋಗ್ಯ ಉಪಕೇಂದ್ರದಲ್ಲಿ ಇರುವ ಒಬ್ಬ ಪುರುಷ ಆರೋಗ್ಯ ಸಹಾಯಕರ ಹುದ್ದೆಯನ್ನೆ ತುಂಬಿಲ್ಲ. ಅದನ್ನು ಭರ್ತಿ ಮಾಡಬೇಕು ಎಂದು ಹರ್ಷವರ್ಧನರೆಡ್ಡಿ ಆಗ್ರಹಿಸಿದ್ದಾರೆ.ಕಳೆದ ವರ್ಷ ಇದೇ ಸಮಯದಲ್ಲಿ ಇಲ್ಲಿನ ಜನರು ಕರಳು ಬೇನೆ, ಆನೆಕಾಲು ರೋಗ, ಮಲೇರಿಯಾ ಕಾಲರಾ, ಶಿಶು ಮತ್ತು ತಾಯಿ ಮರಣ ಪ್ರಕರಣಗಳಿಂದ ಗ್ರಾಮಸ್ಥರು ಬಸವಳಿದಿದ್ದರು ಎಂದು ಅವರು ವಿವರಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry