ಭಾನುವಾರ, ಏಪ್ರಿಲ್ 18, 2021
23 °C

ಶಾಲೆಗೆ ಹೋದ ಬಾಲಕ ಶವವಾಗಿ ಪತ್ತೆ: ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಳ್ಳಾರಿ: ಶಾಲೆಗೆ ಹೋದ ಬಾಲಕ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟ ಬಗ್ಗೆ ಸೂಕ್ತ ತನಿಖೆ ನಡೆಸ ಬೇಕು ಎಂದು ಆಗ್ರಹಿಸಿ ತಾಲ್ಲೂಕಿನ ಕುಡುತಿನಿ ಗ್ರಾಮದಲ್ಲಿ ಮೃತ ಬಾಲಕನ ಪಾಲಕರು ಮತ್ತು ಸಾರ್ವಜನಿಕರು ಶವದೊಂದಿಗೆ ಮಂಗಳವಾರ ಪ್ರತಿಭಟನೆ ನಡೆಸಿದರು. ಗ್ರಾಮದ ನೇತಾಜಿ ಆಂಗ್ಲ ಮಾಧ್ಯಮ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿ, ಅಲೆಮಾರಿ ಬುಡ್ಗ ಜಂಗಮ ಸಮುದಾಯದ ಬಸವರಾಜ್ (7) ಸೋಮವಾರ ಬೆಳಿಗ್ಗೆ ಶಾಲೆಗೆ ಹೋದವ ಸಂಜೆ ಸಮೀಪದ ಪಾಳು ಬಾವಿಯಲ್ಲಿ ಶವವಾಗಿ ಬಿದ್ದಿದ್ದ.ತಲೆ ಮತ್ತು ಮುಖಕ್ಕೆಕಲ್ಲಿನಿಂದ ಬಲವಾಗಿ ಜಜ್ಜಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದ್ದರಿಂದ ಸಾವಿನ ಬಗ್ಗೆ ಶಂಕೆ ಮೂಡಿದೆ.  ಈ ಕುರಿತು ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಗ್ರಾಮದ ವಿವಿಧೆಡೆ ಶವದೊಂದಿಗೆ ಸಂಚರಿಸಿದರು. ಶಾಲೆಯ ವಾಹನಕ್ಕೆ ಕಲ್ಲೆಸೆದು, ಪೀಠೋಪಕರಣಗಳನ್ನು ಧ್ವಂಸಗೊಳಿಸಿ ಆಕ್ರೋಶ ವ್ಯಕ್ತಪಡಿಸಿದರು. ಶಾಲೆಯ ಆಡಳಿತ ಮಂಡಳಿ ಬಾಲಕನ ಸಾವಿನ ಬಗ್ಗೆ ದಿವ್ಯ ನಿರ್ಲಕ್ಷ್ಯ ತಾಳಿದೆ. ವಾಮಾಚಾರ ಮತ್ತಿತರ ಕಾರಣಗಳಿಂದಲೇ ಬಾಲಕನನ್ನು ಬಲಿ ನೀಡಿದ ಸಾಧ್ಯತೆಗಳಿದ್ದು, ಪೊಲೀಸರು ಈ ಕುರಿತು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರನ್ನು ಪತ್ತೆ ಮಾಡಿ ಬಂಧಿಸಬೇಕು ಎಂದು ಪ್ರತಿಭಟನಾಕಾರರು ಕೋರಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.