ಶನಿವಾರ, ಏಪ್ರಿಲ್ 17, 2021
27 °C

ಶಾಲೆಯಲ್ಲಿ ರಾತ್ರಿ ಕಳೆದ ಐದು ಕುಟುಂಬ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸಿದ್ದಾಪುರ: ಸಿದ್ದಾಪುರ ಪರಿಸರದಲ್ಲಿ ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಪರಿಸರದ ನದಿಗಳು ಉಕ್ಕಿ ಹರಿಯುತ್ತಿವೆ.ಹಳ್ಳಿಹೊಳೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದೇವರಬಾಳು ಕಟ್ಟಿನಾಡಿ ಸಮೀಪ ಇರುವ ಚಕ್ರಾ ಡ್ಯಾಂ ನಿಂದ ನೀರು ಹೆಚ್ಚಾಗಿ ಹರಿದು ಪರಿಸರದಲ್ಲಿ ಕೃತಕ ನೆರೆ ಉಂಟಾಗಿದೆ. ಈ ನೆರೆಯಿಂದ ಕಟ್ಟಿನಾಡಿಯ ಗಿರಿಜಮ್ಮ, ಕುಳ್ಳ ಹಸಲ, ರಾಮ ಮೊಗವೀರ, ಮಾಸ್ತಿ ಮೊಗವೀರ, ಬಸವ ನಾಯ್ಕ ಎಂಬುವರ ಮನೆಗೆ ನೀರು ಹರಿದಿದ್ದು, ಈ ಕುಟುಂಬಗಳ 20ಕ್ಕೂ ಹೆಚ್ಚು ಮಂದಿ ಮಂಗಳವಾರ ರಾತ್ರಿಯಿಂದ ದೇವರಬಾಳು ಶಾಲೆಯಲ್ಲಿ ಆಶ್ರಯ ಪಡೆದಿದ್ದಾರೆ.ಬುಧವಾರ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಗಿದ್ದು, ನಕ್ಸಲ್ ಪೀಡಿತ ದೇವರ ಬಾಳು ಪ್ರದೇಶ ಸಂಪರ್ಕ ರಸ್ತೆಯು ಮಂಜಪ್ಪಯ್ಯರ ನಿವಾಸದ ಬಳಿಯಿಂದ ಕಡಿದಿದೆ. ಪರಿಣಾಮ ಕಬ್ಬಿನಾಲೆ, ಮೂಡಹಿತ್ಲು, ಕಬ್ಬಿನಾಲೆ, ಸಂಪರ್ಕ ಸ್ಥಗಿತಗೊಂಡಿದೆ. ಇಲ್ಲಿನ 5 ಪ್ರಮುಖ ನದಿಗಳಾದ ಸೌಪರ್ಣಿಕ, ರೆರಾಟ, ವಾರಾಹಿ, ಕುಬ್ಜಾ, ಚಕ್ರಾ ನದಿಗಳು ತುಂಬಿ ಹರಿಯುತ್ತಿದ್ದು, ಸಮೀಪದ ಕಮಲಶಿಲೆ ದುರ್ಗಾಪರಮೇಶ್ವರಿ ದೇವದ ಒಳಭಾಗಕ್ಕೆ ಬಂದು ಆತಂಕ ಸೃಷ್ಟಿಯಾಗಿತ್ತು. ಬುಧವಾರ ಬಹುತೇಕ ಕಡೆ ಮಳೆಯ ಆರ್ಭಟ ಸ್ವಲ್ಪ ಕಡಿಮೆಯಾಗಿದೆ. ಪರಿಸರದ ಹಾಲಾಡಿ ಪೇಟೆಯಲ್ಲಿ ಹಾಲಾಡಿ ನದಿ ತುಂಬಿ ಹರಿಯುತ್ತಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.