ಶುಕ್ರವಾರ, ನವೆಂಬರ್ 15, 2019
21 °C

`ಶಾಲೆಯಿಂದ ಹೊರಗುಳಿದ ಮಕ್ಕಳಿಗೆ ಶಿಕ್ಷಣಕ್ಕೆ ಕ್ರಮ'

Published:
Updated:

ಉಡುಪಿ: `ಮಕ್ಕಳನ್ನು ಶಾಲೆಗೆ ಸೇರಿಸಲು ಗುತ್ತಿಗೆದಾರರು ಹಾಗೂ ಮಣಿಪಾಲ ವಿಶ್ವ ವಿದ್ಯಾಲಯ ಸೂಕ್ತ ಕ್ರಮ ಕೈಗೊಂಡರೆ ಇಲಾಖೆ ಶಿಕ್ಷಣ ನೀಡಲು ಎಲ್ಲಾ ರೀತೀಯ ಕ್ರಮ ಕೈಗೊಳ್ಳಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಎಸ್. ನಾಗೇಂದ್ರ ಮಧ್ಯಸ್ಥ ಹೇಳಿದರು.ಮಣಿಪಾಲ ಎಂಐಟಿ 10ನೆ ಬ್ಲಾಕ್ ಪ್ರದೇಶದಲ್ಲಿ ಶಾಲೆಯಿಂದ ಹೊರಗು ಳಿದಿರುವ ವಲಸೆ ಕೂಲಿ ಕಾರ್ಮಿಕರ ಮಕ್ಕಳು ಇರುವ ಪ್ರದೇಶಕ್ಕೆ ಸೋಮ ವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಮೀಪ ದಲ್ಲಿರುವ ಸರ್ಕಾರಿ ಶಾಲೆ ಅಥವಾ ಅವರು ವಾಸಿಸುತ್ತಿರುವ ಪ್ರದೇಶದಲ್ಲಿ ಅನುಕೂಲತೆ ಕಲ್ಪಿಸಬೇಕು. ಸಣ್ಣ ಮಕ್ಕಳಿಗೆ ಈ ಪ್ರದೇಶದಲ್ಲಿಯೇ ಗುತ್ತಿಗೆದಾರರು ಅಂಗನವಾಡಿ ನಿರ್ಮಿಸಿ ಕೊಡಬೇಕು ಎಂದು ಅವರು ಹೇಳಿದರು.ಮಕ್ಕಳಿಗೆ ಬಿಸಿಯೂಟ ಹಾಗೂ ಶಿಕ್ಷಣಕ್ಕೆ ಬೇಕಾದ ವ್ಯವಸ್ಥೆಯನ್ನು ಸರ್ವ ಶಿಕ್ಷಾ ಅಭಿಯಾನದ ಮೂಲಕ ಕಲ್ಪಿಸಲಾ ಗುವುದು ಸರ್ವ ಶಿಕ್ಷಾ ಅಭಿಯಾನದ ಅಧಿಕಾರಿ ನಾಗರಾಜ್ ತಿಳಿಸಿದರು.ಮಕ್ಕಳು ಶಾಲೆಯಿಂದ ಹೊರಗೆ ಉಳಿದಿರುವ ಬಗ್ಗೆ `ಪ್ರಜಾವಾಣಿ' ಶನಿವಾರ ವರದಿ ಪ್ರಕಟಿಸಿತ್ತು. ಮೂಲ ಸೌಕರ್ಯದ ಕೊರತೆ: ಕಾರ್ಮಿಕರು ವಾಸಿಸುತ್ತಿರುವ ಈ ಪ್ರದೇಶದಲ್ಲಿ ಸಮರ್ಪಕ ಮೂಲಭೂತ ಸೌಕರ್ಯಗಳಿಲ್ಲ. ಸುಮಾರು 13 ಗುತ್ತಿಗೆದಾರರ ಕಂಪನಿಗಳಲ್ಲಿ ಕೆಲಸ ನಿರ್ವಹಿಸುವ 1016 ಕಾರ್ಮಿಕರು ಇಲ್ಲಿ ತಾತ್ಕಾಲಿಕ ಶೆಡ್‌ಗಳಲ್ಲಿ ವಾಸವಾಗಿದ್ದಾರೆ. ಸುಮಾರು 200 ಮಕ್ಕಳು ಈ ಪ್ರದೇಶದಲ್ಲಿದ್ದಾರೆ.ಶೆಡ್‌ಗಳ ಸುತ್ತ ಸ್ವಚ್ಚತೆ ಇಲ್ಲ, ಸಂಚಾರಕ್ಕೆ ಸಮರ್ಪಕ ರಸ್ತೆ ಇಲ್ಲ, ಕುಡಿ ಯುವ ನೀರು, ಶೌಚಾಲಯದ ವ್ಯವಸ್ಥೆ ನೋಡಿದರೆ ರೋಗಗಳಿಗೆ ಆಹ್ವಾನ ನೀಡುವಂತಿದೆ.ಆಂಧ್ರ, ಅಸ್ಸಾಂ, ರಾಯಚೂರು ಸಹಿತ ಉತ್ತರ ಭಾರತದ ಕಾರ್ಮಿಕರು ಇಲ್ಲಿ ವಾಸವಾಗಿದ್ದಾರೆ. ಬ್ರಹ್ಮಾವರ ವಲಯ ಕ್ಷೇತ್ರ ಶಿಕ್ಷಣಾ ಧಿಕಾರಿ ನಾಗೇಶ್ ಶ್ಯಾನುಭೋಗ್, ಶಿಕ್ಷಣ ಇಲಾಖೆಯ ಅಧಿಕಾರಿ ರಾಘ ವೇಂದ್ರ ಉಪಾಧ್ಯಾಯ, ಬಾಲಕಾರ್ಮಿಕ ಯೋಜನಾ ಸಂಘದ ಪ್ರಭಾಕರ ಆಚಾರ್ಯ ಇತರರು ಭೇಟಿ ನೀಡಿದ ಸಂದರ್ಭ ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)