ಶುಕ್ರವಾರ, ಫೆಬ್ರವರಿ 26, 2021
31 °C

ಶಾಲೆಯ ಆವರಣದಲ್ಲಿ ಕೈತೋಟದ ಅರಿವು

ಕೆ.ಎಚ್.ನಾಯಕ Updated:

ಅಕ್ಷರ ಗಾತ್ರ : | |

ಶಾಲೆಯ ಆವರಣದಲ್ಲಿ ಕೈತೋಟದ ಅರಿವು

ಹಿರೇಕೆರೂರ ತಾಲ್ಲೂಕಿನ ಗಂಗಾಪುರ ಪುಟ್ಟ ಗ್ರಾಮದಲ್ಲಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ ಇದೆ. ಶಾಲೆಯ ಎದುರು  ಇರುವ  ಖಾಲಿ ಜಾಗದಲ್ಲಿ ಶಿಕ್ಷಕರು ವಿವಿಧ ಬಗೆಯ ಸೊಪ್ಪುಗಳನ್ನು ಬೆಳೆಯುತ್ತಿದ್ದಾರೆ. ಈ ಮೂಲಕ ಕೈತೋಟದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸುತ್ತಿದ್ದಾರೆ.ಹರಬಿ ಸೊಪ್ಪು, ಸಬ್ಬಸಿಗೆ ಸೊಪ್ಪು, ಪಾಲಕ್ ಸೊಪ್ಪು, ಹುಳಿಚಿಕ್ಕಿ ಸೊಪ್ಪು ಮತ್ತು ಮೂಲಂಗಿಯನ್ನು ಮಡಿಮಾಡಿ ನೀರೆರೆದು ಬೆಳೆಸುತ್ತಿದ್ದಾರೆ. ಸೊಪ್ಪುಗಳಿಗೆ ಸ್ವತಃ ತಾವೇ  ನೀರು ಹೊತ್ತು ತಂದು  ಬೆಳೆಸುತ್ತಿದ್ದು, ತಾಜಾ ಸೊಪ್ಪುಗಳನ್ನು ಮಕ್ಕಳ ಬಿಸಿಯೂಟಕ್ಕ ಬಳಸುತ್ತಿದ್ದಾರೆ. ‘ನಮ್ಮ ಸ್ವಂತ ಖರ್ಚಿನಲ್ಲಿ ರಾಣೇಬೆನ್ನೂರಿನಿಂದ ಬೀಜಗಳನ್ನು ತಂದು ಹಾಕಿ ಮಡಿ ಮಾಡಿದ್ದೇವೆ. ಶಾಲೆಯ ಅವಧಿಯ ನಂತರ ಇವುಗಳ ಆರೈಕೆ ಮಾಡಿ, ಶಾಲೆಯಲ್ಲಿಯೇ ಸೊಪ್ಪುಗಳ ಬಳಕೆ ಮಾಡುತ್ತಿದ್ದೇವೆ’ ಎಂದು ಮುಖ್ಯ ಶಿಕ್ಷಕ ಎಲ್.ಬಿ.ಓಲೇಕಾರ ಹಾಗೂ ಶಿಕ್ಷಕ ವಿ.ಎಸ್.ಗೂಳೇರ, ‘ಪ್ರಜಾವಾಣಿ’ಗೆ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.