ಶನಿವಾರ, ಏಪ್ರಿಲ್ 10, 2021
32 °C

ಶಾಲೆ ಛಾವಣಿ ದುರಸ್ಥಿ; ಶಿಕ್ಷಕನ ಸೊಂಟ ಮುರಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮಾಗಡಿ: ಮಳೆ ಬಂದು ಸೋರುತ್ತಿದ್ದ ತಾಲ್ಲೂಕಿನ ಗೊಲ್ಲರಪಾಳ್ಯದ ಸರ್ಕಾರಿ ಕಿರಿಯ ಶಾಲೆಯ ಛಾವಣಿ ದುರಸ್ಥಿ ಮಾಡಲು ಹೋದ ಶಿಕ್ಷಕ ಕೆ.ಪಿ.ರೆಣುಕಾರಾಧ್ಯ ಮೇಲಿದ್ದ ಜಾರಿ ಬಿದ್ದು ಸೊಂಟ ಮುರಿದು ಕೊಂಡ ಘಟನೆ ಶುಕ್ರವಾರ ನಡೆದಿದೆ.ಗುರುವಾರ ರಾತ್ರಿ ಸುರಿದ ಮಳೆಯಿಂದಾಗಿ ಶಾಲಾ ಕೊಠಡಿ ಒಳಗೆ ನೀರು ಸೋರುತ್ತಿತ್ತು. ಶುಕ್ರವಾರ ತರಗತಿ ಪ್ರಾರಂಭವಾದಗ ಶಿಕ್ಷಕ ಶಾಲಾ ಕಟ್ಟಡದ ಮೇಲೇರಿ ಸೋರುತ್ತಿದ್ದ ನೀರನ್ನು ಕೆಳಗೆ ಸರಾಗವಾಗಿ ಹರಿಯುವಂತೆ ಮಾಡುತ್ತದ್ದರು. ಆಭದ್ರವಾಗಿದ್ದ ಛಾವಣಿಯ ತೊಲೆ ಮುರಿದದ್ದರಿಂದ ಅವರು ಕೆಳಗೆ ಬಿದ್ದು ಸೊಂಟ ಮುರಿದಿದೆ.ಸುದ್ದಿ ತಿಳಿದ ತಕ್ಷಣ ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೆ.ಎಚ್.ಲೋಕೇಶ್, ಶಾಲೆಗೆ ಬೇಟಿ ನೀಡಿ ಗಾಯಗೊಂಡ ಶಿಕ್ಷಕರನ್ನು ಮಾಗಡಿಯ ಸರ್ಕಾರಿ ಆಸ್ಪತ್ರೆಗೆ ಸೇರಿಸಿದರು.ಬಿಇಒ ಎ.ಆರ್.ರಂಗಸ್ವಾಮಿ ವೈದ್ಯಾಧಿಕಾರಿ ಡಾ. ವೀರೇಶ ಅವರೊಂದಿಗೆ ಮಾತನಾಡಿ ಚಿಕಿತ್ಸೆ ಕೊಡಿಸಿದರು. ಜಿಲ್ಲಾ ಪ್ರಾ.ಶಾ.ಶಿ. ಸಂಘದ ನಿರ್ದೇಶಕ ರೇಣುಕಾರಾಧ್ಯ, ತಾಲ್ಲೂಕು ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಪ್ರಭುದೇವರು, ಕಾರ್ಯದರ್ಶಿ ವೆಂಕಟೇಶ ಮೂರ್ತಿ, ತಾಲ್ಲೂಕು ಪ್ರೌಢಶಾಲಾ ಹಿಂದಿ ಶಿಕ್ಷಕರ ಸಂಘದ ಅಧ್ಯಕ್ಷ ಎಚ್.ಶಿವಕುಮಾರ, ಬಿ.ಆರ್.ಸಿ. ಪರಮೇಶ ಇತರರು ಆಸ್ಪತ್ರೆಗೆ ಭೇಟಿ ನೀಡಿ ಗಾಯಗೊಂಡ ಶಿಕ್ಷಕರೊಂದಿ ಮಾತನಾಡಿ ಚಿಕಿತ್ಸೆಗೆ ಸಹಕರಿಸುವುದಾಗಿ ಭರವಸೆ ನೀಡಿದರು. ಉರುಳಿ ಬಿದ್ದ ಕಾರು: ಮಾಗಡಿ- ಬೆಂಗಳೂರು ರಸ್ತೆಯ ಜ್ಯೋತಿ ಪಾಳ್ಯದ ತಿರುವಿನಲ್ಲಿ ಉರುಳಿ ಬಿದ್ದ ಕಾರು ಪೂರ್ತಿ ಜಖಂಗೊಂಡಿದೆ. ಕಾರು ಚಾಲನೆ ಮಾಡುತ್ತಿದ್ದ ಬೆಂಗಳೂರಿನ ಸಂಜೀವ ಶೆಟ್ಟಿ ಪ್ರಾಣಪಾಯದಿಂದ ಪಾರಾಗಿದ್ದಾರೆ. ಅವರ ಬಲ ಮೊಳಕೈ ಮುರಿದಿದೆ. ಮಾಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.