ಗುರುವಾರ , ಆಗಸ್ಟ್ 13, 2020
27 °C

ಶಾಲೆ ಪುಸ್ತಕದಲ್ಲಿ ಮಹಾಪುರುಷರ ಚಿತ್ರವಿರಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕುಕ್ಕುಂದೂರು (ಬಜಗೋಳಿ): ಶಾಲಾ ವಿದ್ಯಾರ್ಥಿಗಳು ಬರೆಯುವ ಪುಸ್ತಕಗಳ ಮುಖಪುಟದಲ್ಲಿ ಮಹಾ ಪುರುಷರ, ಚಾರಿತ್ರಿಕ ಮಹತ್ವಗಳ ಮತ್ತು ಐತಿಹಾಸಿಕ ಸಂಗತಿಗಳನ್ನು ನೆನಪು ಮಾಡುವ ಚಿತ್ರಗಳನ್ನು ಪ್ರಕಟಿಸಬೇಕು  ಎಂದು ಕಾರ್ಕಳ ತಾಲ್ಲೂಕು ಸನಾತನ ಸಂಸ್ಥೆಯ ಪ್ರಚಾರ ಸೇವಕಿ ಡಾ. ಶ್ರೀಕಲಾ ಜೋಷಿ ಸಲಹೆ ನೀಡಿದರು.ತಾಲ್ಲೂಕಿನ ಕುಕ್ಕುಂದೂರು ಜಯಂತಿನಗರ ಹಿರಿಯ ಪ್ರಾಥಮಿಕ ಶಾಲೆಯ 85 ಮಂದಿ ವಿದ್ಯಾರ್ಥಿಗಳಿಗೆ ಸನಾತನ ಸಂಸ್ಥೆಯ ವತಿಯಿಂದ ನೀಡಲಾದ ನೋಟ್ ಪುಸ್ತಕಗಳನ್ನು ಸೋಮವಾರ ವಿತರಿಸಿ ಅವರು ಮಾತನಾಡಿದರು.ಚಲನಚಿತ್ರ ನಟ ನಟಿಯರು, ಕ್ರಿಕೆಟ್ ಆಟಗಾರರ ಚಿತ್ರಗಳನ್ನಷ್ಟೆ ಈಗ ಈ ಪುಸ್ತಕಗಳಲ್ಲಿ ನೋಡುವಂತಾಗಿದೆ. ವಿದ್ಯಾರ್ಥಿಗಳಿಗೆ ಜ್ಞಾನ ಒದಗಿಸುವ ಹಲವು ಅವಕಾಶಗಳನ್ನು ನಾವು ಸದುಪಯೋಗಪಡಿಸಿಲ್ಲ ಎಂದು ಅವರು ವಿಷಾದಿಸಿದರು.ಸುಭಾಷಿತದ ಸಾಲುಗಳನ್ನು, ಸನ್ನಡತೆಯ ವಿಷಯಗಳನ್ನು, ಸ್ವಾತಂತ್ರ್ಯ ಹೋರಾಟಗಾರರ ಜೀವನ ಚರಿತ್ರೆಯ ಮಹತ್ವದ ಅಂಶಗಳನ್ನು ಮುದ್ರಿಸುವುದು ಜಾಗೃತಿಗೆ ಬಲ ನೀಡಬಲ್ಲದು ಎಂದು ಅವರು ಅಭಿಪ್ರಾಯಪಟ್ಟರು. ಶಾಲಾ ಮುಖ್ಯ ಶಿಕ್ಷಕಿ ಇಂದಿರಾ, ಸುಮಿತ್ರಾ ಆಚಾರ್ ಇದ್ದರು.ಕುಂಜೂರು: ಬಾವಿಗೆ ಬಿದ್ದು ಸಾವು

ಪಡುಬಿದ್ರಿ:
ಆಕಸ್ಮಿಕವಾಗಿ ಕಾಲು ಜಾರಿ ವ್ಯಕ್ತಿಯೊಬ್ಬರು ಬಾವಿಗೆ ಬಿದ್ದು ಮೃತಪಟ್ಟ ಘಟನೆ ಎಲ್ಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಜೂರು ಎಂಬಲ್ಲಿನ ಪಣಿಯೂರಿನಲ್ಲಿ ಸೋಮವಾರ ನಡೆದಿದೆ.

ಮೃತರನ್ನು ಬೂದ ಶೆಟ್ಟಿ (55) ಎಂದು ಗುರುತಿಸಲಾಗಿದೆ.ಅವರು ನೆರಮನೆಯ ವತ್ಸರಾವ್ ಎಂಬವರ ಅಡಿಕೆ ತೋಟದ ಬಾವಿಗೆ ಪಂಪ್‌ಸೆಟ್ ಜೋಡಿಸಿ ಹಿಂತಿರುಗಿ ಬರುತ್ತಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ನೀರಿನಲ್ಲಿ ಮುಳುಗಿದರು. ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಡಿಕ್ಕಿ: ಇಬ್ಬರಿಗೆ ಗಾಯ

ಬೈಂದೂರು:
ಇಲ್ಲಿನ ಜಾಮಿಯಾ ಮಸೀದಿ ಬಳಿ ಹೆದ್ದಾರಿಯಲ್ಲಿ ಭಾನುವಾರ ಬೈಕ್‌ಗೆ ಕಾರ್ ಡಿಕ್ಕಿಯಾಗಿ ಬೈಕ್ ಸವಾರರಿಗೆ ಗಾಯಗಳಾಗಿವೆ.ಬೈಂದೂರಿನಿಂದ ಉಪ್ಪುಂದದತ್ತ ಹೋಗುತ್ತಿದ್ದ ರಕೀಬ್ ಮತ್ತು ಮಾರೂಫ್ ಗಾಯಗೊಂಡವರು. ಎದುರಿನಿಂದ ಮಂಜುನಾಥ ದೇವಾಡಿಗ ಚಲಾಯಿಸಿಕೊಂಡು ಬಂದ ಕಾರು ಲಾರಿಯನ್ನು ಹಿಂದಿಕ್ಕಲು ಯತ್ನಿಸಿದಾಗ ಬೈಕ್‌ಗೆ ಡಿಕ್ಕಿ ಹೊಡೆಯಿತು. ಈ ಬಗ್ಗೆ ರಕೀಬ್ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.