ಗುರುವಾರ , ಏಪ್ರಿಲ್ 15, 2021
26 °C

ಶಾಲೆ ಬೆಳಕು ಚೆಲ್ಲುವ ಸೂರ್ಯನಂತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾಳಗಿ: ಈ ಜಗತ್ತು ನಿಂತಿರುವುದು ಸೂರ್ಯನಿಂದ. ಅವನು ಯಾವ ರೀತಿ ಜಗತ್ತಿಗೆ ಬೆಳಕು ಕೊಡುತ್ತಾನೋ ಅದೇ ರೀತಿಯಲ್ಲಿ ಶಾಲೆಗಳು ಜ್ಞಾನದ ಬೆಳಕನ್ನು ನೀಡುವ ಸೂರ್ಯನಿದ್ದಂತೆ ಎಂದು ಕೊತ್ತಲ ಬಸವೇಶ್ವರ ಭಾರತೀಯ ಶಿಕ್ಷಣ ಸಮಿತಿ ಅಧ್ಯಕ್ಷ ಹಾಗೂ ಮಾಜಿ ಸಂಸದ ಡಾ.ಬಸವರಾಜ ಪಾಟೀಲ ಸೇಡಂ ಹೇಳಿದರು.ಸೋಮವಾರ ಇಲ್ಲಿನ ಶಿವಬಸವೇಶ್ವರ ದಕ್ಷಿಣ ಕಾಶಿ ವಿದ್ಯಾಭಿವೃದ್ಧಿ ಟ್ರಸ್ಟಿನ ದಶಮಾನೋತ್ಸವದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಕ್ಕಳು ದೇವರಿಗೆ ಸಮಾನವಾಗಿದ್ದರಿಂದ ಅವರನ್ನು ದೇವರಂತೆ ಬೆಳೆಸಬೇಕು. ಜನರು ತಮಗೆ ಸಾಧ್ಯವಾದಷ್ಟು ಪ್ರಮಾಣದಲ್ಲಿ ಶಾಲೆಗಳಿಗೆ ಸಹಾಯ ಮಾಡಬೇಕು ಎಂದರು.ಮುಖ್ಯ ಅತಿಥಿಗಳಾಗಿದ್ದ ಗುಲ್ಬರ್ಗ ಜಿಲ್ಲಾ ಪಂಚಾಯತಿ ಅಧ್ಯಕ್ಷ ಶಿವಪ್ರಭು ಪಾಟೀಲ, ಉಪಾಧ್ಯಕ್ಷ ಹರ್ಷಾನಂದ ಗುತ್ತೇದಾರ ಮಾತನಾಡಿ, ಸಮಾಜ ಪರಿವರ್ತನೆಯ ಉದ್ದೇಶ ಹೊಂದಿರುವ ಈ ಶಿಕ್ಷಣ ಸಂಸ್ಥೆ ಬೆಳೆದಷ್ಟು ದೇಶಕ್ಕೆ ಸಹಕಾರಿಯಾಗಲಿದೆ. ಇಂಥ ಸಂಸ್ಥೆಗಳ ಅಭಿವೃದ್ಧಿಗೆ ಯಾವಾಗಲೂ ತಮ್ಮ ಸಹಕಾರ ದೊರೆಯಲಿದೆ ಎಂದರು.cಮಾತನಾಡಿದರು. ಸಂಸ್ಥೆಯ ಅಧ್ಯಕ್ಷ ಶಿವಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು. ಶಿಕ್ಷಕಿ ಶಿವಲೀಲಾ ಅಷ್ಟಗಿ ಪ್ರಾರ್ಥಿಸಿದಳು. ಭೀಮರಾಯ ಮಲಘಾಣ ವಾರ್ಷಿಕ ವರದಿ ಮಂಡಿಸಿದರು. ಗುಂಡಪ್ಪ ಕರೆಮನೋರ ಸ್ವಾಗತಿಸಿದರು. ಈರಮ್ಮ ಬಣಗಾರ ನಿರೂಪಿಸಿದಳು. ಪ್ರಿಯಾಂಕಾ ಕದ್ದರಗಿ ವಂದಿಸಿದಳು. ಮಕ್ಕಳ ಸಾಂಸ್ಕೃತಿಕ ಚಟುವಟಿಕೆಗಳ ‘ಸಂಸ್ಕಾರ ಭಾರತಿ’ ಕಾರ್ಯಕ್ರಮವನ್ನು ನಿವೃತ್ತ ಪ್ರಾಚಾರ್ಯ ಎಸ್.ಕೆ.ಸುಬೇದಾರ ಮತ್ತು ದೀಪಿಕಾ ಮಹೀಂದ್ರಕರ್ ನಿರ್ವಹಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.