ಸೋಮವಾರ, ಅಕ್ಟೋಬರ್ 21, 2019
26 °C

ಶಾಲೆ ಮುಚ್ಚುವುದು ಘೋರ ಅಪರಾಧ

Published:
Updated:

ಚಿಂತಾಮಣಿ: ತಾಲ್ಲೂಕಿನ ಗೊಲ್ಲಹಳ್ಳಿಯ ಮುನಿವೆಂಕಟಪ್ಪ ಮತ್ತು ಮುನಿಯಮ್ಮನವರ ಮಗನಾಗಿ ಜನಿಸಿದ ಸಾಹಿತಿ, ಕಲಾವಿದ ಗೊಲ್ಲಹಳ್ಳಿ ಶಿವಪ್ರಸಾದ್ ತಾಲ್ಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕಲೆ ಮತ್ತು ಸಾಹಿತ್ಯ ಕ್ಷೇತ್ರಕ್ಕೆ ವಿಶಿಷ್ಟ ಕೊಡುಗೆ ಸಲ್ಲಿಸಿರುವ ಅವರು ಹಲವು ಹೋರಾಟಗಳಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಪ್ರಾಥಮಿಕ ಮತ್ತು ಪ್ರೌಢಶಾಲೆ ಶಿಕ್ಷಣವನ್ನು ತಮ್ಮ ಊರಿನಲ್ಲೇ ಪೂರೈಸಿದ ಅವರು ಬಳಿಕ ಕೋಲಾರದ ಸರ್ಕಾರಿ ಕಲಾ ಕಾಲೇಜಿನಲ್ಲಿ ಪದವಿ ಪೂರೈಸಿದರು.ಗೊಲ್ಲಹಳ್ಳಿ ಶಿವಪ್ರಸಾದ್ ಅವರು ಹಾಡು  ಗಾರಿಕೆ , ನಾಟಕ, ಸಮಾಜಸೇವೆ, ಪರಿಸರಪ್ರಜ್ಞೆ ಮುಂತಾವುಗಳ ಬಗ್ಗೆ ತುಂಬ ಆಸಕ್ತಿ ಹೊಂದಿದ್ದಾರೆ. ಇತ್ತೀಚೆಗೆ ಚಲನಚಿತ್ರ ಕ್ಷೇತ್ರಕ್ಕೂ ಕಾಲಿಟ್ಟಿರುವ ಅವರು ಪರಿಸರ, ಜಾನಪದ, ಗ್ರಾಮೀಣ ಜನರ ಬದುಕು, ಶಾಶ್ವತ ನೀರಾವರಿ ಮತ್ತು ಸಮಾನತೆ ಗಾಗಿ ಹೋರಾಟ ನಡೆಸಿದ್ದಾರೆ. ದಲಿತ ಬಂಡಾಯ ಚಳುವಳಿಯಲ್ಲಿ ಭಾಗವಹಿಸಿ ಜೀವಂತಿಕೆ ಮೂಡಿ ಸಿದ ಅವರು ನೆಲ-ಜಲ, ಜಾನಪದ, ಪ್ರಾಣಿ ಸಂಕುಲ, ಸಾಂಸ್ಕೃತಿಕ ಕ್ಷೇತ್ರದ ಉಳಿವಿಗಾಗಿ ಶ್ರಮಿಸಿದ್ದಾರೆ.ಕುವೆಂಪು, ಲಂಕೇಶ್, ದೇವನೂರು ಮಹದೇವ, ಪ್ರೋ.ಬಿ.ಕೃಷ್ಣಪ್ಪ, ಬರಗೂರು ರಾಮಚಂದ್ರಪ್ಪ, ಯು.ಆರ್.ಆನಂತಮೂರ್ತಿ ಇವರ ಮೇಲೆ ಪ್ರಭಾವ ಬೀರಿದ ವ್ಯಕ್ತಿಗಳು. ಉತ್ತಮ ಚಲನಚಿತ್ರ ಗೀತ ರಚನಾಕಾರ ಎಂದು ರಾಜ್ಯ ಪ್ರಶಸ್ತಿ, ಸಾಂಸ್ಕೃತಿಕ ಸೇವೆಗಾಗಿ ಅಂಬೇಡ್ಕರ್ ಪ್ರಶಸ್ತಿ, ಚಿತ್ರದುರ್ಗ ಮುರುಘರಾಜೇಂದ್ರ ಮಠ, ಸಾಣೇಹಳ್ಳಿ ಮಠಗಳಿಂದ ಅಭಿನಂದನೆ, ವಿವಿಧ ಸಂಘ ಸಂಸ್ಥೆಗಳು ಸನ್ಮಾನಿಸಿ ಪ್ರಶಸ್ತಿಗಳನ್ನು ನೀಡಿವೆ.ರಾಜ್ಯ ಸರ್ಕಾರದ ಜಾನಪದ ಅಕಾಡೆಮಿಯ ಸದಸ್ಯ, ವಿಶ್ವ ಕನ್ನಡ ಸಮ್ಮೇಳನದಲ್ಲಿ ಕವನವಾಚನ, ಬೆಳಗಾವಿಯಲ್ಲಿ ನಡೆದ ಸಮ್ಮೇಳನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನೀಡಿರುವುದು ಸೇರಿದಂತೆ ರಾಜ್ಯ, ಆಂಧ್ರಪ್ರದೇಶ, ಮಹಾರಾಷ್ಟ್ರ ರಾಜ್ಯಗಳಲ್ಲಿ ಅನೇಕ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಅವರ ಸಂದರ್ಶ ನದ ಆಯ್ದಭಾಗ ಇಲ್ಲಿದೆ.* ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರಾಗಿ ಆಯ್ಕೆ ಯಾಗಿ ರುವುದಕ್ಕೆ ನಿಮಗೆ ಹೇಗೆ ಅನ್ನಿಸುತ್ತಿದೆ?

ಗೊಲ್ಲಹಳ್ಳಿ ಶಿವಪ್ರಸಾದ್: ಸುಮಾರು 20-25 ವರ್ಷಗಳಿಂದ ಸಾಹಿತ್ಯ ಕ್ಷೇತ್ರದಲ್ಲಿ ತೊಡಗಿಸಿಕೊಂಡಿ ರುವುದರಿಂದ ಸಮ್ಮೇಳನಾಧ್ಯಕ್ಷರಾಗಿ ಆರಿಸಿರು ವುದು ಸಂತಸ ತಂದಿದೆ.  ಮತ್ತೊಂದೆಡೆ ಸಮಾಜದಲ್ಲಿ ಸಮಾನ ಶಿಕ್ಷಣ ವ್ಯವಸ್ಥೆ ಇಲ್ಲವೆಂಬ ದು:ಖ, ನೋವು ಕಾಡುತ್ತಿದೆ. ಅಧ್ಯಕ್ಷ ಸ್ಥಾನದಿಂದಾದರೂ ಈ ಬಗ್ಗೆ ಒತ್ತಾಯ ತಂದು ಜನರಲ್ಲಿ ಹೋರಾಟದ ಚೈತನ್ಯ ಮೂಡಿಸಬಹುದು ಎನ್ನುವ ಆಸಕ್ತಿ ಇದೆ.* ಗಡಿ ಭಾಗಗಳಲ್ಲಿ ಕನ್ನಡ ಭಾಷೆ, ಸಾಹಿತ್ಯದ ಬೆಳವಣಿಗೆ ಹೇಗಿದೆ? ಭಾಷಾಭಿವೃದ್ದಿಗೆ ತೊಂರೆಯೇ ಇದೆಯೇ?

ಗೊಲ್ಲಹಳ್ಳಿ ಶಿವಪ್ರಸಾದ್: ಕಳೆದ 15-20 ವರ್ಷಗಳಿಗೆ ಹೋಲಿಸಿದರೆ ಇಂದು ಸಾಕಷ್ಟು ಬದಲಾವಣೆಯಾಗಿದೆ.

ಕರ್ನಾಟಕ ಏಕೀಕರಣದ ಸಮಯದಲ್ಲಿ ಈ ಭಾಗಗಳು ಆಂಧ್ರಪ್ರಧೇಶಕ್ಕೆ ಸೇರಿದ್ದುದರಿಂದ ರೂಡಿ ಭಾಷೆ ತೆಲುಗಾಗಿದೆ. ಭಾಷಾ ಬೆಳವಣಿಗೆಗೆ ಯಾರಂದಲೂ ಅಡ್ಡಿಯಾಗಿಲ್ಲ. ಇತ್ತೀಚೆಗೆ ಕನ್ನಡಪರ ಸಂಘಟನೆಗಳು ಎಚ್ಚೆತ್ತುಕೊಂಡಿರುವುದು ಉತ್ತಮ ಬೆಳವಣಿಗೆಯಾಗಿದೆ.* ಕನ್ನಡ ಭಾಷೆ ಮತ್ತು ಸಾಹಿತ್ಯದ ಬೆಳವಣಿಗೆಗೆ ಯಾವ ಕ್ರಮಗಳನ್ನು ಕೈಗೊಳ್ಳಬೇಕೆಂದು ಬಯಸುವಿರಿ?

ಮನೆಗಳಲ್ಲಿ ಪೋಷಕರು ಮಕ್ಕಳೊಂದಿಗೆ ಕನ್ನದಲ್ಲಿ ಮಾತನಾಡುವ ಹವ್ಯಾಸ ಬೆಳೆಸಿಕೊಳ್ಳಬೇಕು. ಕನ್ನಡ ಕಾರ್ಯಕ್ರಮಗಳನ್ನು ಅಧಿಕವಾಗಿ ಹಮ್ಮಿಕೊಳ್ಳಬೇಕು. ಸಾವಿನೆಡೆಗೆ ಸಾಗುತ್ತಿರುವ ರಂಗಭೂಮಿ ಮೇಲೆ ಬರಲು ಯೋಜನೆಗಳನ್ನು ರೂಪಿಸಬೇಕು.* ಜಿಲ್ಲೆಯ ಅಗತ್ಯತೆ ಹಾಗೂ  ಬೇಡಿಕೆಗಳೇನು?


 ಜಿಲ್ಲೆಯಲ್ಲಿ ಯಾವುದೇ ನದಿ ನಾಲೆಗಳಿಲ್ಲದಿರು ವುದರಿಂದ ಅಂತರ್‌ಜಲ ಮಟ್ಟ ತೀವ್ರವಾಗಿ ಕುಸಿದಿದೆ. ಜಿಲ್ಲೆಯಲ್ಲಿ ಕೆರೆಗಳನ್ನು ಹಾಗೂ ತೋಪು ಗಳನ್ನು ಉಳಿಸಿ ಬೆಳೆಸಲು ಪ್ರಥಮ ಆದ್ಯತೆ ನೀಡ ಬೇಕು. ಶಾಶ್ವತ ನೀರಾವರಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಮತ್ತು ಜನಪ್ರತಿನಿಧಿಗಳು ಆತ್ಮವಿಮರ್ಶೆ ಮಾಡಿಕೊಂಡು ನಿರ್ಧರಿಸಬೇಕು ಹಳೆಯ ತಲೆ ಮಾರಿನ ಜನತೆಗೆ ಇದ್ದಂತಹ ಪ್ರಕೃ ತಿಯ ಕಾಳಜಿಯನ್ನು ಬೆಳೆಸಿಕೊಳ್ಳಬೇಕು.* ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಗೊಲ್ಲಹಳ್ಳಿ ಶಿವಪ್ರಸಾದ್: ಕನ್ನಡ ಶಾಲೆಗಳನ್ನು ಮುಚ್ಚಲು ಹೊರಟಿರುವುದು ಘೋರ ಅಪರಾಧ ವಾಗಿದೆ. ಹಳ್ಳಿಗಾಡಿನ ಮಕ್ಕಳ ಭವಿಷ್ಯ ಹಾಳಾಗು ತ್ತದೆ. ಕನ್ನಡ ಶಾಲೆಗಳನ್ನು ಮುಚ್ಚುವ ನಿರ್ಧಾರ ವನ್ನು ಹಿಂಪಡೆದು ಏಕರೂಪದ ಶಿಕ್ಷಣವನ್ನು ಜಾರಿಗೆ ತರಬೇಕು. ಸರ್ಕಾರಿ ಶಾಲೆಗಳಿಗೆ ಹೆಚ್ಚಿನ ಒತ್ತುಕೊಟ್ಟು ಉಳಿಸಲು ಮುಂದಾಗಬೇಕು.* ತಾಲ್ಲೂಕಿನ ಜನತೆಗೆ ನಿಮ್ಮ ಸಂದೇಶವೇನು?

ಗೊಲ್ಲಹಳ್ಳಿ ಶಿವಪ್ರಸಾದ್: ಮನುಷ್ಯ ಮೊದಲು ಮಾನವನಾಗಿ ಬದುಕುವುದನ್ನು ಕಲಿಯಬೇಕು. ಸಾಮಾಜಿಕ ಸಾಂಸ್ಕೃತಿಕ ಪರಂಪರೆಯ ಸಂಬಂಧ ಗಳನ್ನು ಬೆಳೆಸಿಕೊಳ್ಳುವ ಮೂಲಕ ಹೊಸ ಹೆಜ್ಜೆ ಗಳನ್ನು ಹಾಕಬೇಕು. ಕೈವಾರ, ಮುರುಗಮಲೆ, ಬುರುಡಗುಂಟೆ, ಕೈಲಾಸಗಿರಿಗಳಂತಹ ಪುಣ್ಯ ಕ್ಷೇತ್ರಗಳ ತಾಯಿ ಚಿಂತಾಮಣಿ. ಜಾತ್ಯಾತೀತ ಸಂಬಂಧಗಳನ್ನು ಉಳಿಸಿಕೊಂಡು ಸಂಬಂಧಗಳನ್ನು ಬೆಸೆಯುವ ವಾತಾವರಣ ಸೃಷ್ಠಿಯಾಗಬೇಕು. ಬಿಲ್ಲಾಂಡ್ಲಹಳ್ಳಿ, ಕಂಬಾಲಪಲ್ಲಿ, ಯರ‌್ರಕೋಟೆ, ಬಾರ‌್ಲಹಳ್ಳಿಯಲ್ಲಿ ನಡೆದಂತಹ ನರಮೇಧಗಳಿಗೆ ಅವಕಾಶ ನೀಡದೆ ಹೊಸ ಬೆಳಕನ್ನು ಚೆಲ್ಲಲಿ.

Post Comments (+)