ಶಾಶ್ವತ ದುರಸ್ತಿಗೆ ರೂ 1.51 ಕೋಟಿ ಬೇಡಿಕೆ

7
ಕುಷ್ಟಗಿ: ಅತಿವೃಷ್ಟಿಯಿಂದ ಕೆರೆ, ರಸ್ತೆಗಳಿಗೆ ಹಾನಿ

ಶಾಶ್ವತ ದುರಸ್ತಿಗೆ ರೂ 1.51 ಕೋಟಿ ಬೇಡಿಕೆ

Published:
Updated:

ಕುಷ್ಟಗಿ: ತಾಲ್ಲೂಕಿನಲ್ಲಿ ಈಚೆಗೆ ಸುರಿದ ಮಳೆಯಿಂದಾಗಿ ನೀರಾವರಿ ಕೆರೆ, ರಸೆ್ತಗಳಿಗೆ ಸಾಕಷ್ಟು ಹಾನಿಯಾಗಿದ್ದು ಅವುಗಳ ಶಾಶ್ವತ ದುರಸ್ತಿಗೆ ರೂ 1.51ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಸಂಬಂಧಿಸಿದ ಇಲಾಖೆಗಳು ಬೇಡಿಕೆ ಸಲ್ಲಿಸಿವೆ.ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಸಾಧಕ ಬಾಧಕಳಗನ್ನು ಚರ್ಚಿಸಲು ಈಚೆಗೆ ಇಲ್ಲಿಯ ತಹಶೀಲ್ದಾರರ ಕಚೇರಿಯಲ್ಲಿ ಕರೆಯಲಾಗಿದ್ದ ತಾಲ್ಲೂಕು ಟಾಸ್ಕ್‌ಫೋರ್ಸ್‌ ಸಮಿತಿ ಸಭೆಯಲ್ಲಿ ಪಂಚಾಯತ್‌ರಾಜ್‌ ಎಂಜಿನಿಯರಿಂಗ್ ಉಪ ವಿಭಾಗ ಮತ್ತು ಸಣ್ಣ ನೀರಾವರಿ ಇಲಾಖೆ ಉಪವಿಭಾಗದ ಎಂಜಿನಿಯರ್‌ರು ಸಮಿತಿ ಅಧ್ಯಕ್ಷರಾಗಿರುವ ಶಾಸಕ ದೊಡ್ಡನಗೌಡ ಪಾಟೀಲ ಅವರಿಗೆ ವಿವರ ನೀಡಿದರು.ಅತಿವೃಷ್ಟಿಯಿಂದ ಯಲಬುರ್ತಿ, ಹಿರೇಬನ್ನಿಗೋಳ, ಶಾಖಾಪುರ, ತುಗ್ಗಲದೋಣಿ, ಅಡವಿಭಾವಿ ಗ್ರಾಮಗಳಲ್ಲಿನ ರಸೆ್ತಗಳು ಕೊಚ್ಚಿ ಹಾಳಾಗಿವೆ. ರಸೆ್ತ ಸಂಪರ್ಕ ಕಡಿದುಹೋಗಿದ್ದು ಶೀಘ್ರದಲ್ಲಿ ಶಾಶ್ವತ ದುರಸ್ತಿ ಕೈಗೊಳ್ಳಬೇಕಿದೆ ಎಂದರು.ಅಲ್ಲದೇ ಶಾಶ್ವತ ಚರಂಡಿ ನಿರ್ಮಾಣಕ್ಕೆ ಹಿರೇಬನ್ನಿಗೋಳಕ್ಕೆ ರೂ 5ಲಕ್ಷ, ಯಲಬುರ್ತಿಗೆ ರೂ 4 ಲಕ್ಷ, ಯಲಬುರ್ತಿ–ಚಿಕ್ಕನಂದಿಹಾಳ ರಸೆ್ತ ಮತ್ತು ಡೆಕ್‌ಸ್ಲ್ಯಾಬ್‌ ದುರಸ್ತಿಗೆ ರೂ 50 ಲಕ್ಷ, ಹನಮನಾಳ ಕಳ್ಳಿಬಡ್ಡಿ ಕ್ರಾಸ್‌ ಬಳಿ ಸಿಡಿಗಳ ದುರಸ್ತಿಗೆ ರೂ 7.50 ಲಕ್ಷ. ಕನ್ನಾಳ ಗ್ರಾಮದ ಬಳಿ ಹಳ್ಳಕ್ಕೆ ತಡೆಗೋಡೆ ನಿರ್ಮಾಣಕ್ಕೆ ರೂ 10 ಲಕ್ಷ ಹಾಗೂ ಹನಮಸಾಗರದಿಂದ ಕಸ್ತೂರಬಾ ಶಾಲೆಗೆ ಹೋಗುವ ರಸೆ್ತ ಮತ್ತು ಸಿ.ಡಿ ದುರಸ್ತಿಗೆ ರೂ 15 ಲಕ್ಷ ಸೇರಿ ಒಟ್ಟು ರೂ 91.50 ಲಕ್ಷ ಅನುದಾನದ ಅಗತ್ಯವಿದೆ ಎಂದು ಅಂದಾಜು ಪಟ್ಟಿ ನೀಡಿದರು.ಸಣ್ಣ ನೀರಾವರಿ: ಸಣ್ಣ ನೀರಾವರಿ ಇಲಾಖೆಗೆ ಸೇರಿದ ನಿಡಶೇಸಿ ಕೆರೆ ಏರಿಯಲ್ಲಿ ಬಿದ್ದರುವ ಮೂರು ಬೋಂಗಾಗಳ ಶಾಶ್ವತ ದುರಸ್ತಿಗೆ ರೂ 40 ಲಕ್ಷ, ತಳುವಗೇರಾ ಜಿನುಗುಕೆರೆ ಕೋಡಿ ಮೇಲಿನ ಬೋಂಗಾ ದುರಸ್ತಿಗೆ ರೂ 20 ಲಕ್ಷ ಅನುದಾನದ ಬೇಡಿಕೆ ಇದೆ ಎಂದು ತಿಳಿಸಿದರು.ರಾಜ್ಯ ಹೆದ್ದಾರಿಗಳು: ಲೋಕೋಪ­ಯೋಗಿ ಇಲಾಖೆಗೆ ಸೇರಿದ ರಾಜ್ಯ ಹೆದ್ದಾರಿಗಳಾದ ಕುರುಬನಾಳ ಕ್ರಾಸ್‌­ದಿಂದ ಸಿಂಧನೂರು ರಸ್ತೆಯ 11 ದಿಂದ 11.7 ಕಿಮೀ ಅಭಿವೃದ್ಧಿಗೆ ರೂ 5 ಲಕ್ಷ ಅಲ್ಲದೇ 11.70 ರಿಂದ 12.10 ಕಿಮೀವರೆಗಗಿನ ರಸೆ್ತ ಕಾಮಗಾರಿಗೆ ರೂ 5 ಲಕ್ಷ . ಚಿಕ್ಕಹೆಸರೂರು (ಮುದಗಲ್‌) ಮುಂಡರಗಿ ರಸ್ತೆಯ 79ನೇ ಕಿಮೀ ದಿಂದ 79.20 ಕಿಮೀ ರಸೆ್ತ ಕಾಮಗಾರಿಗೆ ರೂ 5 ಲಕ್ಷ, ತುರ್ತು ಕಾಮಗಾರಿಗಾಗಿ ರೂ 15 ಲಕ್ಷ  ಹಣ ಅಗತ್ಯ ಇರುವುದನ್ನು ಎಂಜಿನಿಯರರು ಹೇಳಿದರು.ಅತಿವೃಷ್ಟಿಯಿಂದ ಹಾಳಾಗಿರುವ ರಸೆ್ತ, ಚರಂಡಿ, ಕೆರೆ ದುರಸ್ತಿಗೆ ತುರ್ತು ಕ್ರಮ ಕೈಗೊಳ್ಳಬೇಕಿದೆ, ಈ ಎಲ್ಲ ವಿಷಯಗಳನ್ನು ಒಳಗೊಂಡಂತೆ ತಾಲ್ಲೂಕು ಸಮಿತಿ ತೆಗೆದುಕೊಂಡಿರುವ ನಿರ್ಣಯಗಳನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಶಾಸಕ ದೊಡ್ಡನಗೌಡ ಪಾಟೀಲ ಟಾಸ್ಕ್‌ಫೋರ್ಸ್‌ ಸಮಿತಿ ಸದಸ್ಯ ಕಾರ್ಯದರ್ಶಿಯಾಗಿರುವ ತಹಶೀಲ್ದಾರ್‌ ಎನ್‌.ಬಿ.ಪಾಟೀಲ ಅವರಿಗೆ ಸೂಚಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry