ಶಾಶ್ವತ ನೀರಾವರಿ ಯೋಜನೆ: ಕೇಂದ್ರ ಸಚಿವ ಕೃಷ್ಣಗೆ ಮನವಿ

ಬುಧವಾರ, ಮೇ 22, 2019
29 °C

ಶಾಶ್ವತ ನೀರಾವರಿ ಯೋಜನೆ: ಕೇಂದ್ರ ಸಚಿವ ಕೃಷ್ಣಗೆ ಮನವಿ

Published:
Updated:

ಕೋಲಾರ: ಬಯಲು ಸೀಮೆ ಜಿಲ್ಲೆಗಳಿಗೆ  ಶಾಶ್ವತ ನೀರಾವರಿ ಯೋಜನೆ ಕಲ್ಪಿಸಬೇಕು ಎಂದು ಆಗ್ರಹಿಸಿ ರೈತ ಸಂಘ-ಹಸಿರು ಸೇನೆ ಕಾರ್ಯಕರ್ತರು ಕೋಲಾರದಲ್ಲಿ ಸೋಮವಾರ ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣಗೆ ಮನವಿ ಸಲ್ಲಿಸಿದರು.ಕುಡಿಯಲು ಹಾಗೂ ಕೃಷಿ ಚಟುವಟಿಕೆಗಳಿಗೆ ಶಾಶ್ವತ ನೀರಿನ ವ್ಯವಸ್ಥೆ ಇಲ್ಲದೆ ಸಾಮಾನ್ಯ ಜನ ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಬಯಲು ಸೀಮೆ ಪ್ರದೇಶಗಳಲ್ಲಿ ಬರಗಾಲ ಸ್ಥಿತಿ ನಿರ್ಮಾಣವಾಗಿ  ಜಾನುವಾರುಗಳು ಸಹ ಕುಡಿಯಲು ನೀರಿಲ್ಲದೆ ಹಾಗೂ ಮೇವಿಗಾಗಿ ಪರದಾಡುತ್ತಿವೆ ಎಂದು ಸೇನೆಯ ರಾಜ್ಯ ಕಾರ್ಯದರ್ಶಿ ಅಬ್ಬಣಿ ಶಿವಪ್ಪ ವಿವರಿಸಿದರು.ಪಶ್ಚಿಮ ಘಟ್ಟಗಳಿಂದ ವ್ಯರ್ಥವಾಗಿ ಸಮುದ್ರದ ಪಾಲಾಗುತ್ತಿರುವ ಸುಮಾರು 2500 ಟಿ.ಎಂ.ಸಿ ನೀರಿನ ಪೈಕಿ ಕೇವಲ 140 ಟಿ.ಎಂ.ಸಿ ನೀರು ಒದಗಿಸುವ ಪರಮಶಿವಯ್ಯ ವರದಿ ಜಾರಿಗೆ ಕ್ರಮ ಕೈಗೊಳ್ಳಬೇಕು.2003ರಲ್ಲಿಯೇ ಪರಮಶಿವಯ್ಯ ವರದಿಗೆ ಅಂದಿನ ಸರ್ಕಾರ ಅನುಮೋದಿಸಿದೆ. ಸರ್ವೆ ವರದಿ ಆಧಾರದ ಮೇಲೆ ಈಗಿನ ಸರ್ಕಾರ ಯೋಜನೆ ಅನುಷ್ಠಾನಕ್ಕೆ ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.ರಾಜ್ಯದಲ್ಲಿ ಸತತವಾಗಿ ಬರಗಾಲ ಎದುರಾಗಿರುವುದರಿಂದ ಸಹಕಾರ ಬ್ಯಾಂಕ್ ಮತ್ತು ಸಂಘಗಳಲ್ಲಿ ರೈತರು ಪಡೆದಿರುವ ರೂ 25 ಸಾವಿರದವರೆಗಿನ ಸಾಲ ಮನ್ನಾ ಮಾಡಿರುವುದರಿಂದ ಹೆಚ್ಚು ಪ್ರಯೋಜನ ಆಗುವುದಿಲ್ಲ. ಸಹಕಾರ ಸಂಘಗಳಿಂದ ಮತ್ತು ಸಹಕಾರ ಬ್ಯಾಂಕ್‌ಗಳಿಂದ ಮಾಡಿರುವ ಸಾಲಕ್ಕಿಂತ ಮೂರು ಪಟ್ಟು ಹೆಚ್ಚಿಗೆ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ರೈತರು ಕೃಷಿ ಸಾಲ ಮಾಡಿದ್ದಾರೆ. ಅದನ್ನು ಸರ್ಕಾರ ಮನ್ನಾ ಮಾಡಬೇಕು ಎಂದು ಆಗ್ರಹಿಸಿದರು.ಜಿಲ್ಲಾ ಮುಖಂಡರಾದ ಬೈಚೇಗೌಡ, ಮಂಜು, ಅಶ್ವತ್ಥರೆಡ್ಡಿ, ಜಿ.ನಾರಾಯಣಸ್ವಾಮಿ, ಮುಜೀಬ್ ಪಾಷ, ನಾಗರಾಜ್, ಚನ್ನಬಚ್ಚೇಗೌಡ, ಸುರೇಶ್, ಗಣೇಶಗೌಡ, ರಾಮೇಗೌಡ, ರಮೇಶ್, ಚನ್ನಕೇಶವ, ವೀರಭದ್ರಸ್ವಾಮಿ, ಶಾಮಣ್ಣ, ಕೆ.ಆನಂದ್‌ಕುಮಾರ್, ಚಂದ್ರಪ್ಪ, ಕೃಷ್ಣಪ್ಪ, ಚಲಪತಿ, ನರಸಿಂಹಪ್ಪ ಹಾಜರಿದ್ದರು.

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry