ಶಾಸಕರಾಗಿ ಸಂಗಣ್ಣ ಪ್ರಮಾಣ

7

ಶಾಸಕರಾಗಿ ಸಂಗಣ್ಣ ಪ್ರಮಾಣ

Published:
Updated:

ಬೆಂಗಳೂರು: ಕೊಪ್ಪಳ ಕ್ಷೇತ್ರವನ್ನು ಪ್ರತಿನಿಧಿಸುತ್ತಿರುವ ಕರಡಿ ಸಂಗಣ್ಣ ಅವರು ವಿಧಾನಸಭಾ ಸದಸ್ಯರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು.ಇತ್ತಿಚೆಗೆ ನಡೆದ ಉಪಚುನಾವಣೆಯಲ್ಲಿ ಅವರು ಜಯ ಗಳಿಸಿದ್ದರು. ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ ತಮ್ಮ ಕಚೇರಿಯಲ್ಲಿ ಸಂಗಣ್ಣ ಅವರಿಗೆ ಪ್ರಮಾಣ ವಚನ ಬೋಧಿಸಿದರು. ನಂತರ ಸುದ್ದಿಗಾರರ ಜತೆ ಮಾತನಾಡಿದ ಸಂಗಣ್ಣ, `ನನ್ನ ಗೆಲುವಿಗೆ ಪಕ್ಷದ ಸಾಮೂಹಿಕ ನಾಯಕತ್ವ ಕಾರಣ. ಅದರಲ್ಲೂ ಯಡಿಯೂರಪ್ಪ ಅವರ ಶ್ರಮ ಹೆಚ್ಚು~ ಎಂದು ಹೇಳಿದರು.`ಆಡಳಿತ ಪಕ್ಷದಲ್ಲಿದ್ದರೆ ಕ್ಷೇತ್ರದ ಅಭಿವೃದ್ಧಿ ಸುಲಭ ಎನ್ನುವ ಕಾರಣಕ್ಕೆ ಜೆಡಿಎಸ್ ತೊರೆದು ಬಿಜೆಪಿ ಸೇರಿದೆ. ಕ್ಷೇತ್ರದ ಹಿತದೃಷ್ಟಿಯಿಂದ ಕೆಲವು ಯೋಜನೆಗಳಿಗೆ ಒಪ್ಪಿಗೆ ನೀಡುವಂತೆ ಕೋರಿದ್ದೇನೆ~ ಎಂದರು. ಸಚಿವರಾದ ಲಕ್ಷ್ಮಣ ಸವದಿ, ಸಿ.ಎಂ. ಉದಾಸಿ, ಬಸವರಾಜ ಬೊಮ್ಮಾಯಿ, ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಹಾಜರಿದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry