ಶಾಸಕರಿಂದ ಅನಾಥ ಹೆಣ್ಣು ಶಿಶು ದತ್ತು

ರಾಯಚೂರು: ಎರಡು ದಿನಗಳ ನವಜಾತ ಮತ್ತು ಅನಾಥ ಹೆಣ್ಣು ಶಿಶುವನ್ನು ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ತಿಪ್ಪರಾಜು ಹವಾಲ್ದಾರ ದತ್ತು ಪಡೆಯುವುದಾಗಿ ಹೇಳಿದರು.
ನಗರದ ನಗರದ ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಶುವಿನ ಆರೋಗ್ಯ ವಿಚಾರಿಸಲು ಶುಕ್ರವಾರ ಭೇಟಿ ನೀಡಿದ್ದ ಶಾಸಕ ತಿಪ್ಪರಾಜು, ಮಗುವನ್ನು ದತ್ತು ಸ್ವೀಕರಿಸುವುದಾಗಿ ತಿಳಿಸಿದರು.
ನಿಯಮಾನುಸಾರ ದತ್ತು ಪಡೆಯುವಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿಗಳು ಶಾಸಕರಿಗೆ ಸಲಹೆ ನೀಡಿದರು.
ಮಾನ್ವಿ ತಾಲ್ಲೂಕಿನ ಜಂಗಮರಹಳ್ಳಿ ಮತ್ತು ಯದ್ದಲದಿನ್ನಿ ಗ್ರಾಮಗಳ ನಡುವಣ ಹಳ್ಳದ ಸೇತುವೆ ಕೆಳಗೆ ಮುಳ್ಳುಕಂಟಿ ನಡುವೆ ನವಜಾತ ಹೆಣ್ಣು ಶಿಶು ಅನಾಥವಾಗಿ ಬಿದ್ದಿತ್ತು. ಗ್ರಾಮಸ್ಥರಿಂದ ವಿಷಯ ತಿಳಿದ ಅಂಗನವಾಡಿ ಕಾರ್ಯಕರ್ತೆ ಶಿಶುವನ್ನು ಗುರುವಾರ ರಿಮ್ಸ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಮಗುವಿಗೆ ಚಿಕಿತ್ಸೆ ನೀಡಲಾಗಿದ್ದು, ಆರೋಗ್ಯವಾಗಿದೆ ಎಂದು ರಿಮ್ಸ್ ವೈದ್ಯರು ತಿಳಿಸಿದ್ದಾರೆ.
ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.