ಸೋಮವಾರ, ಏಪ್ರಿಲ್ 12, 2021
27 °C

ಶಾಸಕರಿಂದ ಕಾಮಾಗಾರಿಗಳ ಪರಿಶೀಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಾಲಹಳ್ಳಿ: ಪಟ್ಟಣದಲ್ಲಿ (ಎನ್‌ಆರ್‌ಬಿಸಿ ಇಲಾಖೆಯ) ಗಿರಿಜನ ಕಲ್ಯಾಣ ಉಪಯೋಜನೆಯಡಿ ಸುಮಾರು 15 ಕೋಟಿ ರೂಪಾಯಿ ವೆಚ್ಚದಲ್ಲಿ ಹಮ್ಮಿಕೊಂಡ ವಿವಿಧ ಕಾಮಾಗಾರಿಗಳ ಪರಿಶೀಲನೆಗೆ ಭಾನುವಾರ ಶಾಸಕ ಕೆ.ಶಿವನಗೌಡ ನಾಯಕ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಕಳೆದ ಒಂದು ತಿಂಗಳಿಂದ ಭಾರದಿಂದ ಸಾಗಿದ ಸುಮಾರು 22 ಕಾಮಗಾರಿಗಳಲ್ಲಿ 8 ಕಾಮಗಾರಿಗಳು ಮಾತ್ರ ಸಾಗಿದ್ದು ಉಳಿದ ಕಾಮಗಾರಿಗಳು ಸ್ಥಗಿತವಾಗಿರುವುದನ್ನು ಗಮನಿಸಿ ಶಾಸಕರು ಭೇಟಿ ನೀಡಿ ಸ್ಥಳದಲ್ಲಿದ್ದ ಸಂಬಂಧಿಸಿ ಎನ್‌ಆರ್‌ಬಿಸಿ ಅಧಿಕಾರಿಗಳಿಗೆ ಬೇಗನೆ ಕಾಮಗಾರಿಗಳನ್ನು ಪ್ರಾರಂಭಿಸಲು ತಾಕಿತು ಮಾಡಿದರು.ಘಂಟಿ ಬುಡ್ಡಪ್ಪನ ಹಳ್ಳದ ಗುಮ್ಮಟದಿಂದ ಊರ ಕೇರಿಯ ವರೆಗೆ ನಡೆದ ಕಾಮಗಾರಿಯನ್ನು ಪರಿಶೀಲಿಸಿದರು. ನಂತರ ಶಾಸಕರು ಸುದ್ದಿಗಾರೊಂದಿಗೆ ಮಾತನಾಡಿ ಪ್ರಸಕ್ತ ವರ್ಷ ದೇವದುರ್ಗ ತಾಲ್ಲೂಕಿಗೆ ವಿವಿಧ ಹಳ್ಳಿಗಳಿಗೆ ಸುಮಾರು 100 ಕೋಟಿ ರೂಪಾಯಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ವಿವಿಧ ಗ್ರಾಮಗಳಗೆ ರಸ್ತೆ ಡಾಂಬರೀಕಾರಣ ಮಾಡಲು ಹಣ ಮುಂಜೂರಾಗಿದೆ ಅದು ಟೆಂಡರ್ ಅಂತದಲ್ಲಿದೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಎನ್‌ಆರ್‌ಬಿಸಿ ಕಾರ್ಯನಿರ್ವಾಹಕ ಅಧಿಕಾರಿ ಶಿವಶಂಕರಪ್ಪ ಜೆಇ ಆಶೋಕ ಕುಮಾರ, ಶಶಿಧರ, ಗ್ರಾ.ಪಂ ಅಧ್ಯಕ್ಷ ಜಿ.ಬಸವರಾಜ ನಾಯಕ, ಬಿಜೆಪಿ ಮುಖಂಡರಾದ ಅಮರೇಶ ಪಾಟೀಲ್,  ಗುರುರಾಜರಾವ್ ದೇಸಾಯಿ, ವೀರಣ್ಣ ಪಾಣಿ, ಈರಣ್ಣ ಬಳೆ, ಬಸವರಾಜ ಅಮರಪೂರ,ಗೋವಿಂದರಾಜ ತಿಂಪೂರ, ಗೋಯಪ್ಪ ಹಲಗೇರಿ, ಸಾಲಬಣ್ಣಸೌದ್ರಿ ಸೇರಿದಂತೆ ಇತರರು ಇದ್ದರು.  

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.