ಸೋಮವಾರ, ಆಗಸ್ಟ್ 19, 2019
21 °C

ಶಾಸಕರಿಂದ ಪರಿಹಾರಧನ ವಿತರಣೆ

Published:
Updated:

ಔರಾದ್: ತಾಲ್ಲೂಕಿನ ವಿವಿಧೆಡೆ ಕೃಷಿ ಚಟುವಟಿಕೆ ವೇಳೆ ಹಾವು ಕಡಿದು ಮೃತರಾದವರ ಕುಟುಂಬದವರಿಗೆ ಶುಕ್ರವಾರ ತಲಾ ರೂ. 1 ಲಕ್ಷದ ಪರಿಹಾರಧನ ಚೆಕ್ ವಿತರಿಸಲಾಯಿತು.ಕೃಷಿ ಇಲಾಖೆಯಿಂದ ಮಂಜೂರಾದ ಚೆಕ್ ಅನ್ನು ಶಾಸಕ ಪ್ರಭು ಚವ್ಹಾಣ್ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ವಿತರಿಸಿದರು.ತಾಪಂ. ಅಧ್ಯಕ್ಷ ರಾಜಕುಮಾರ ಪಾಟೀಲ, ಸ್ಥಾಯಿ ಸಮಿತಿ ಅಧ್ಯಕ್ಷ ಚನ್ನಬಸಪ್ಪ ಬಿರಾದಾರ, ಮುಖ್ಯಾಧಿಕಾರಿ ಗದಗೆಪ್ಪ, ಸಹಾಯಕ ಕೃಷಿ ನಿರ್ದೇಶಕ ಸೋಮಶೇಖರ ಬಿರಾದಾರ ಉಪಸ್ಥಿತರಿದ್ದರು.ಪರಿಹಾರ ಪಡೆದವರು: ಲಲಿತಾ ಕಾಶಿರಾಮ ಜಾಧವ್ (ರಾಮತಾಂಡಾ), ಕಮಳಾಬಾಯಿ ಬೀರಗೊಂಡ (ಎಕಲಾರ), ಶೋಭಾಬಾಯಿ ವಿಠಲರಾವ, ಶಾಲಿಕಾ ಮಲ್ಲಿಕಾರ್ಜುನ, ಮಾಣಿಕ ಭೀಮಪ್ಪ (ಕೌಠಾ (ಬಿ)ಗ್ರಾಮ), ಮಾಣಿಕ ಶಿವಪ್ಪ (ಖಾನಾಪುರ), ವಿಠಲ ನಾಗಪ್ಪ (ನಾಗಮಾರಪಳ್ಳಿ), ಮುಕ್ತಮ್ಮ ಮುಕ್ತಪ್ಪ (ಸುಂದಾಳ), ಶಾಂತಾಬಾಯಿ ಸೋಪಾನ (ಹುಲ್ಯಾಳ ಗ್ರಾಮ) ಅವರಿಗೆ ಪರಿಹಾರದ ಚೆಕ್ ವಿತರಿಸಲಾಯಿತು.

Post Comments (+)