ಶಾಸಕರಿಂದ ಸಮಯಾವಕಾಶಕ್ಕೆ ಕೋರಿಕೆ

7

ಶಾಸಕರಿಂದ ಸಮಯಾವಕಾಶಕ್ಕೆ ಕೋರಿಕೆ

Published:
Updated:
ಶಾಸಕರಿಂದ ಸಮಯಾವಕಾಶಕ್ಕೆ ಕೋರಿಕೆ

ಬೆಂಗಳೂರು: `ಬ್ಲೂ ಫಿಲಂ~ ವಿವಾದಕ್ಕೆ ಸಂಬಂಧಿಸಿದಂತೆ ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ನೀಡಿದ್ದ ನೋಟಿಸ್‌ಗೆ ಉತ್ತರ ನೀಡಲು ಇನ್ನೂ ಒಂದು ವಾರ ಸಮಯಾವಕಾಶ ನೀಡುವಂತೆ ಮೂವರು ಶಾಸಕರೂ ಸಭಾಧ್ಯಕ್ಷರನ್ನು ಕೋರಿದ್ದಾರೆ.ಇದೇ 7ರಂದು ವಿಧಾನಸಭೆಯಲ್ಲಿ ಬ್ಲೂ ಫಿಲಂ ವೀಕ್ಷಿಸಿದ ಕಾರಣಕ್ಕೆ ಲಕ್ಷ್ಮಣ ಸವದಿ ಮತ್ತು ಸಿ.ಸಿ.ಪಾಟೀಲ್ ಹಾಗೂ ಈ ಮೊಬೈಲ್ ಫೋನ್ ಕೊಟ್ಟರೆನ್ನಲಾದ ಕೃಷ್ಣ ಪಾಲೆಮಾರ್ ಅವರು ಸಚಿವ ಸ್ಥಾನ ಕಳೆದುಕೊಂಡಿದ್ದರು. ಈ ಪ್ರಕರಣ ಕುರಿತು ಸೋಮವಾರ ಬೆಳಿಗ್ಗೆ 10.30ರೊಳಗೆ ಉತ್ತರ ನೀಡುವಂತೆ ಸಭಾಧ್ಯಕ್ಷರು ನೋಟಿಸ್ ನೀಡಿದ್ದರು.ಈ ಗಡುವಿನ ಒಳಗೇ ಅಂದರೆ ಸೋಮವಾರ ಬೆಳಿಗ್ಗೆ 9ಗಂಟೆಗೇ ಮೂವರು ಮಾಜಿ ಸಚಿವರ ಆಪ್ತ ಸಿಬ್ಬಂದಿ ನೋಟಿಸ್‌ಗೆ ಉತ್ತರ ನೀಡಲು ಒಂದು ವಾರ ಕಾಲಾವಕಾಶ ನೀಡುವಂತೆ ಕೋರಿ ಮನವಿ ಪತ್ರ ಸಲ್ಲಿಸಿದರು.ಮನವಿ ಪತ್ರ ಸ್ವೀಕರಿಸಿರುವ ವಿಧಾನಸಭೆ ಕಾರ್ಯದರ್ಶಿ ಓಂಪ್ರಕಾಶ್ ಅವರು `ಕಾಲಾವಕಾಶ ನೀಡುವ ಅಧಿಕಾರ ಇರುವುದು ಸಭಾಧ್ಯಕ್ಷರಿಗೆ. ಹೀಗಾಗಿ ಶಾಸಕರ ಮನವಿ ಪತ್ರದ ವಿವರಗಳನ್ನು ಸಭಾಧ್ಯಕ್ಷರಿಗೆ ತಿಳಿಸಲಾಗುವುದು~ ಎಂದರು.ಸಭಾಧ್ಯಕ್ಷ ಬೋಪಯ್ಯ ಅವರು ಬೆಂಗಳೂರಿನಲ್ಲಿ ಇಲ್ಲ. ಅವರು ಮಂಗಳವಾರ ನಗರಕ್ಕೆ ಬರುವ ಸಾಧ್ಯತೆ ಇದ್ದು, ನಂತರವೇ ಈ ಕುರಿತು ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry