ಶನಿವಾರ, ಮಾರ್ಚ್ 6, 2021
20 °C

ಶಾಸಕರ ಅರೆಬೆತ್ತಲೆ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಸಕರ ಅರೆಬೆತ್ತಲೆ ಪ್ರತಿಭಟನೆ

ಶ್ರೀನಗರ/ಲಖನೌ (ಪಿಟಿಐ): ಜಮ್ಮು ಮತ್ತು ಕಾಶ್ಮೀರ ಹಾಗೂ ಉ. ಪ್ರ­ದೇಶದ ವಿಧಾನಸಭೆಗಳಲ್ಲಿ ಬುಧ­ವಾರ ಅಪರೂಪದ ಘಟನೆಗಳು ನಡೆದವು.ಉತ್ತರಪ್ರದೇಶ ವಿಧಾನಸಭೆಯಲ್ಲಿ ಕೋಲಾಹಲದ ವಾತಾವರಣ ಸೃಷ್ಟಿಯಾಗಿತ್ತು.ರಾಜ್ಯಪಾಲರ ಭಾಷಣದ ಜಂಟಿ ಅಧಿವೇಶನದ ವೇಳೆ ಬಿಎಸ್‌ಪಿ ಹಾಗೂ ಆರ್‌ಎಲ್‌ಡಿ (ರಾಷ್ಟ್ರೀಯ ಲೋಕದಳ) ಶಾಸಕರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.ಸದನದೊಳಗೆ  ಕುರ್ತಾ ತೆಗೆದ ಆರ್‌ಎಲ್‌ಡಿ ಶಾಸಕರು, ಸರ್ಕಾರ ರೈತ ವಿರೋಧಿ ಎಂದು ಪ್ರತಿಭಟನೆ ನಡೆಸಿದರು.ಕಲಾಪ ಬಹಿಷ್ಕಾರ:   ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪ ಹೊತ್ತಿದ್ದ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಚಿವ ಶಬೀರ್‌ ಅಹಮದ್‌ ಖಾನ್‌ ಪ್ರಕರಣದ  ತನಿಖಾಧಿಕಾರಿ­ವರ್ಗಾ­ವಣೆ ಮಾಡಿದ ಸರ್ಕಾರದ ಕ್ರಮ­ವನ್ನು ವಿರೋಧಿಸಿ ವಿರೋಧಪಕ್ಷ ಪಿಡಿಪಿ ಸದಸ್ಯರು ಕಲಾಪವನ್ನು ಬಹಿಷ್ಕರಿಸಿದರು.ಮಾರ್ಷಲ್‌ಗೆ ಕಪಾಳಮೋಕ್ಷ:  ಸರ್ಕಾರದ ವಿರುದ್ಧ ಘೋಷಣೆ ಕೂಗು­ತ್ತಿದ್ದ ಶಾಸಕ ಸೈಯದ್‌ ಬಷೀರ್‌ ಅಹ­ಮದ್‌ ಅವರನ್ನು ಸದನದಿಂದ ಹೊರ ಹಾಕುವಂತೆ ಸ್ಪೀಕರ್‌ ಆದೇಶ ನೀಡಿದರು.ಮಾರ್ಷಲ್‌ಗಳು ಶಾಸಕ ಬಷೀರ್‌ ಅವ­ರನ್ನು ಹೊರಹಾಕಲು ಮುಂದಾ­ದಾಗ ಅವರು ಮಾರ್ಷಲ್‌­ ವೊಬ್ಬರ ಕೆನ್ನೆಗೆ ಹೊಡೆದು ಆಕ್ರೋಶ ವ್ಯಕ್ತಪಡಿಸಿ­ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.