ಬುಧವಾರ, ನವೆಂಬರ್ 13, 2019
25 °C

ಶಾಸಕರ ಆದಾಯಕ್ಕೆ ಲೆಕ್ಕ ಕೇಳುವರೆ?

Published:
Updated:

ಪ್ರಜೆಗೆ ಹಣಗಳಿಸುವ ಹಕ್ಕಿದೆ ಏಕೆ ಎಂದು ಪ್ರಶ್ನೆ ಮಾಡುವಂತಿಲ್ಲ. ಆದರೆ ಕಾನೂನು ರೀತ್ಯಾ ಸಂಪಾದನೆಗೆ ಇಷ್ಟು ದಾಟಿದರೆ ಇಷ್ಟಿಷ್ಟು ತೆರಿಗೆ ಕೊಡಬೇಕು ಮತ್ತು ಅದು ಹೇಗೆ ಬಂತು ಎನ್ನುವುದರ ಲೆಕ್ಕವನ್ನೂ ಒಪ್ಪಿಸಬೇಕು. ಇದು ಅವನ ಕರ್ತವ್ಯವೂ ಹೌದು.ಈಗ ಐದು ವರ್ಷದ ಹಿಂದೆ 3 ಲಕ್ಷ 9 ಲಕ್ಷ ಆಸ್ತಿ ಹೊಂದಿದ್ದ ಶಾಸಕರು ಈಗ 3 ಕೋಟಿ, 30 ಕೋಟಿ ಹೊಂದಿದ್ದಾರೆ. ಅದನ್ನು ಅವರೇ ಘೋಷಿಸಿದ್ದಾರೆ.ಇಷ್ಟು ಹಣ ಹೇಗೆ ಸಂಪಾದಿಸಿದರು ಮತ್ತು ತೆರಿಗೆ ಕಟ್ಟಿದ್ದಾರೆಯೇ ಎಂದು ಅವರನ್ನು ಆಯ್ಕೆ ಮಾಡುವ ನಾವು ಕೇಳಬಹುದು. ಹಾಗೆಯೇ ಆದಾಯ ತೆರಿಗೆ ಇಲಾಖೆಯು ಇದರತ್ತ ಗಮನ ಹರಿಸಬೇಕೆಂದು ವಿನಂತಿ.

 

ಪ್ರತಿಕ್ರಿಯಿಸಿ (+)