ಶಾಸಕರ ಕೆಟ್ಟ ನಡವಳಿಕೆ

7

ಶಾಸಕರ ಕೆಟ್ಟ ನಡವಳಿಕೆ

Published:
Updated:

 ಕರ್ನಾಟಕ ವಿಧಾನ ಸಭೆಯ ಇತ್ತೀಚಿನ ಕಲಾಪಗಳನ್ನು ನೋಡಿದರೆ ಆತಂಕವಾಗುತ್ತದೆ. ಕೆಲವು ಶಾಸಕರು ಪದೇ ಪದೇ  ಗದ್ದಲ, ಬೈಗುಳ ಇತ್ಯಾದಿಗಳಲ್ಲಿ ಮುಳುಗಿರುತ್ತಾರೆ.

ಕರ್ನಾಟಕ ವಿಧಾನ ಸಭೆಯ ಕಲಾಪಗಳು ಮೇಲ್ಮಟ್ಟದ ಚರ್ಚೆಗೆ ಮಾದರಿಯಾದ ಕಾಲವೊಂದಿತ್ತು. ಈಗ ಅದು ಕೆಟ್ಟ ನಡವಳಿಕೆಗಳಿಗೆ ಉದಾಹರಣೆ ಆಗುತ್ತಿದೆ.ಇತ್ತೀಚೆಗೆ ಮುಗಿದ ಅಧಿವೇಶನದಲ್ಲಿ ರಾಜ್ಯಪಾಲರಿಗೆ ಧಿಕ್ಕಾರ ಹಾಕುವ ಫಲಕ ಹಿಡಿದು ಘೋಷಣೆ ಕೂಗಿದ ಶಾಸಕ ಬೇಳೂರು ಗೋಪಾಲಕೃಷ್ಣರ ನಡವಳಿಕೆ ಸರ್ವಥಾ ಸಮರ್ಥನೀಯವಲ್ಲ. ಹಿಂದೆ ಅವರು ತಮ್ಮ `ನಾಯಕರ~ ಬಗ್ಗೆ ವಿಶ್ವಾಸ ಇಲ್ಲ ಎಂಬ ಪತ್ರ ನೀಡಿ ನಂತರ ರಾಜಕೀಯ ಕುತಂತ್ರಗಳಿಗೆ ಬಲಿಯಾಗಿ ಸದಸ್ಯತ್ವದಿಂದ ಅನರ್ಹರಾಗಿದ್ದರು.ಅಂಥವರಿಗೆ  ರಾಜ್ಯಪಾಲರು `ರೆಡ್ ಕಾರ್ಪೆಟ್~ ಸ್ವಾಗತ ನೀಡಬೇಕಿತ್ತೇ? ಅವರಿಗೆ ಮತದಾರರೇ ಸರಿಯಾದ ಪಾಠ ಕಲಿಸುವ ದಿನ ದೂರವಿಲ್ಲ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry