ಸೋಮವಾರ, ಮೇ 16, 2022
27 °C

ಶಾಸಕರ ಖರೀದಿಯಲ್ಲಿ ಜಗನ್: ಟಿಡಿಪಿ ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 

 ಹೈದರಾಬಾದ್ (ಐಎಎನ್ಎಸ್): ವೈಎಸ್ ಆರ್ ಕಾಂಗ್ರೆಸ್ ಪಕ್ಷದ ನಾಯಕ ವೈ.ಎಸ್. ಜಗನ್ ಮೋಹನ್ ರೆಡ್ಡಿ ಅವರು ಶಾಸಕರ ಖರೀದಿ ಹಾಗೂ ನ್ಯಾಯಾಂಗ ಮತ್ತು ಶಾಸಕಾಂಗ ವ್ಯವಸ್ಥೆಯನ್ನು ಭ್ರಷ್ಟಗೊಳಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಆಂಧ್ರ ವಿಧಾನ ಸಭೆಯ ಮುಖ್ಯ ವಿರೋಧ ಪಕ್ಷವಾದ ಟಿಡಿಪಿ ಪಕ್ಷ ಸೇರಿದಂತೆ ಕಾಂಗ್ರೆಸ್ ಪಕ್ಷವು ನೇರವಾಗಿ ಆರೋಪಿಸಿವೆ.

ಕಡಪಾ ಸಂಸದ ಜಗನ್ ಮೋಹನ್ ರೆಡ್ಡಿ ಅವರು ಶಾಸಕರನ್ನು ತಮ್ಮ ಪಕ್ಷದ ತೆಕ್ಕೆಗೆ ಸೆಳೆಯುವಲ್ಲಿ ಅವರಿಗೆ ಹಣದ ಆಮಿಷವನ್ನು ನೀಡುತ್ತಿದ್ದಾರೆ ಎಂದು ರಾಜ್ಯ ಕಾಂಗ್ರೆಸ್ ನಾಯಕ ಬಿ. ಸತ್ಯನಾರಾಯಣ್ ಅವರು ಆರೋಪಿಸಿದರು.

ಪಶ್ಚಿಮ ಗೋಧಾವರಿ ಜಿಲ್ಲೆಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಾ ಅವರು,  ಜಗನ್ ಅಕ್ರಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿಂತೆ ನ್ಯಾಯಾಧೀಶರ ಮೇಲೆ ಕೂಡ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದರು.

ಕರ್ನಾಟಕದ ಮಾಜಿ ಸಚಿವ ಗಾಲಿ ಜನರ್ದಾನ ರೆಡ್ಡಿ ತನ್ನ ಪ್ರಕರಣಕ್ಕೆ ಸಂಬಂಧಿಸಿಂತೆ ನ್ಯಾಯಾಧೀಶರ ಮೇಲೆ ಹಣದ ಪ್ರಭಾವ ಬೀರಿದಂತೆ ಜಗನ್ ಕೂಡ ನ್ಯಾಯಾಧೀಶರ ಮೇಲೆ ಹಣದ ಪ್ರಭಾವ ಬೀರುತ್ತಿದ್ದಾರೆ ಎಂದು ವಿಜಯವಾಡದ ಕಾಂಗ್ರೆಸ್ ಸಂಸದ  ಎಲ್. ರಾಜಗೋಪಾಲ್ ಕೂಡ ಆರೋಪಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.