ಶಾಸಕರ ನಿಧಿಯಿಂದ ಬೈಸಿಕಲ್ ವಿತರಣೆ

7

ಶಾಸಕರ ನಿಧಿಯಿಂದ ಬೈಸಿಕಲ್ ವಿತರಣೆ

Published:
Updated:

ಚಿಕ್ಕಮಗಳೂರು: ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿ ಅವರ ವಿವೇಚನಾ ನಿಧಿಯಿಂದ ಅಂಗವಿಕಲರಿಗೆ ಟ್ರೈಸಿಕಲ್ ವಿತರಣೆ ಸೋಮವಾರ ಇಲ್ಲಿನ ತಾಲ್ಲೂಕು ಪಂಚಾಯತ್ ಆವರಣದಲ್ಲಿ ನಡೆಯಿತು.9 ಮಂದಿ ಅಂಗವಿಕಲರಿಗೆ ಟ್ರೈಸಿಕಲ್ ವಿತರಿಸಿ ಮಾತನಾಡಿದ ಸಚಿವರು, ತನ್ನ ವಿವೇಚನಾ ನಿಧಿಯಿಂದ ಅಂಗವಿಕಲರಿಗೆ ಟ್ರೈಸಿಕಲ್ ವಿತರಿಸುತ್ತಿರುವುದು ಹೆಚ್ಚು ಸಂತಸ ತಂದಿದೆ. ಇದರಿಂದ ಅಂಗವಿಕಲರಿಗೆ ಸ್ವಾವಲಂಬಿ ಬದುಕು ನಡೆಸಲು ಉತ್ಸಾಹ ಬರಲಿದೆ ಎಂದರು.ಅಂಗವಿಕಲರು ಪರಾ ವಲಂಬಿ ಗಳಾಗದೆ ಆತ್ಮವಿಶ್ವಾಸದಿಂದ ಎಲ್ಲ ವನ್ನೂ ಎದುರಿಸಬೇಕು. ದೃಢನಿಶ್ಚ ಯ ದಿಂದ ಜೀವನ ನಡೆಸಬೇಕು. ಮುಂದಿನ ದಿನಗಳಲ್ಲಿಯೂ ತನ್ನ ವಿವೇಚನಾ ನಿಧಿಯ ಸ್ವಲ್ಪಭಾಗವನ್ನು ಅಂಗವಿಕಲರ ಕಲ್ಯಾಣಕ್ಕೆ ಮೀಸಲಿಡುತ್ತೇನೆ ಎಂದರು.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಚಂದ್ರಶೇಖರಯ್ಯ, ನಿರೂಪಣಾಧಿಕಾರಿ ಬಸವರಾಜು, ಸಿಡಿಪಿಒ ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry