ಬುಧವಾರ, ನವೆಂಬರ್ 13, 2019
28 °C
`ವೋಟಿಗಾಗಿ ನೋಟು' ಹಗರಣ

ಶಾಸಕರ ನಿವಾಸದ ಮೇಲೆ ಸಿಬಿಐ ದಾಳಿ

Published:
Updated:

ರಾಂಚಿ (ಐಎಎನ್‌ಎಸ್): ಎರಡು ವರ್ಷಗಳ ಹಿಂದೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಹಣ ಪಡೆದು ಮತ ಚಲಾಯಿಸಿದ ಆರೋಪದಲ್ಲಿ ಜಾರ್ಖಂಡ್‌ನ 11 ಶಾಸಕರ ನಿವಾಸದ ಮೇಲೆ ಸಿಬಿಐ ಗುರುವಾರ ದಾಳಿ ನಡೆಸಿದ್ದು, ಶೋಧ ಕಾರ್ಯ ಕೈಗೊಂಡಿದೆ.`ವೋಟಿಗಾಗಿ ನೋಟು' ಹಗರಣದಲ್ಲಿ ರಾಂಚಿ, ಜಾಮ್ತಾರಾ, ಕೊಡೆರ್ಮಾ, ಗಿರಿಧ್ ಮತ್ತು ಇತರ ಜಿಲ್ಲೆಗಳಲ್ಲಿ 15ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಲಾಗಿದೆ. ಜಾರ್ಖಂಡ್ ಮುಕ್ತಿ ಮೋರ್ಚಾದ ಶಾಸಕರಾದ ವಿಷ್ಣು ಭಯ್ಯಾ, ಸುರೇಶ್ ಪಾಸ್ವಾನ್, ಆರ್‌ಜೆಡಿಯ ಸಂಜಯ್ ಯಾದವ್ ಮತ್ತು ಕೆಲ ಕಾಂಗ್ರೆಸ್ ಶಾಸಕರ ಮೇಲೆ ಹಣ ಪಡೆದು ಮತ ಚಲಾಯಿಸಿದ ಆರೋಪವಿದೆ.ದಾಳಿ ನಡೆಸಿದ ಸಂದರ್ಭದಲ್ಲಿ ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸಿಬಿಐ ಮೂಲಗಳು ತಿಳಿಸಿವೆ. ಜಾರ್ಖಂಡ್ ಹೈಕೋರ್ಟ್ ಸೂಚನೆ ಮೇರೆಗೆ 2010ರ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ನಡೆದ `ವೋಟಿಗಾಗಿ ನೋಟು' ಪ್ರಕರಣದ ತನಿಖೆಯನ್ನು ಜಾರ್ಖಂಡ್ ಜಾಗೃತ ದಳದ ಕೈಯಿಂದ ತಪ್ಪಿಸಿ ಸಿಬಿಐಗೆ ನೀಡಲಾಗಿದೆ. ಈ ಪ್ರಕರಣ ಆಮೆವೇಗದಲ್ಲಿ ತೆರಳುತ್ತಿರುವ ಬಗ್ಗೆ ಹೈಕೋರ್ಟ್ ಅಸಮಾಧಾನ ವ್ಯಕ್ತಪಡಿಸಿತ್ತು.

ಪ್ರತಿಕ್ರಿಯಿಸಿ (+)