ಶನಿವಾರ, ಮೇ 8, 2021
26 °C

ಶಾಸಕರ ಬಿಡುಗಡೆಗೆ ಹಿಂಬಾಗಿಲ ಸಂಧಾನಕ್ಕೆ ಪಟ್ನಾಯಕ್ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ಮಾವೊವಾದಿಗಳು ಅಪಹರಿಸಿರುವ ಬಿಜೆಡಿ ಶಾಸಕ ಜಿನಾ ಹಿಕಾಕ ಅವರ ಬಿಡುಗಡೆಗೆ ಒಡಿಶಾ ಸರ್ಕಾರ ಶತಾಯಗತಾಯ ಪ್ರಯತ್ನ ನಡೆಸುತ್ತಿದ್ದು, ಮಾವೊವಾದಿ ಗುಂಪಿನ ಜೊತೆ ಹಿಂಬಾಗಿಲ ಸಂಧಾನ ನಡೆಸಲು ಯತ್ನಿಸುತ್ತಿದೆ.ಶುಕ್ರವಾರ ಕೊರಾಪುಟ್‌ಗೆ ಭೇಟಿ ನೀಡಿದ್ದ ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಸ್ಥಳೀಯ ನಾಯಕರ ಜೊತೆ ಮಹತ್ವದ ಮಾತುಕತೆ ನಡೆಸಿದ್ದು, ಆ ಸಭೆಯಲ್ಲಿ ಮಾವೊವಾದಿಗಳೊಂದಿಗೆ ತೆರೆಮರೆಯ ಸಂಧಾನ ನಡೆಸುವ ವಿಚಾರ ಪ್ರಸ್ತಾಪವಾಗಿದೆ.ಹಿಕಾಕ ಅವರನ್ನು ಅಪಹರಿಸಿರುವ ಆಂಧ್ರಪ್ರದೇಶ ಗಡಿ ವಿಶೇಷ ವಲಯ ಸಮಿತಿ ಜೊತೆ ಮಾತುಕತೆ ನಡೆಸಲು ಮಾವೊವಾದಿಗಳ ಮುಖವಾಣಿ ಸಂಸ್ಥೆ ಚಾಸಿ ಮುಲಿಯಾ ಆದಿವಾಸಿ ಸಂಘಯೊಂದಿಗೆ ಸಂಪರ್ಕ ಸಾಧಿಸುವಂತೆ ಕೊರಾಪುಟ್ ಭಾಗದ ಜನಪ್ರತಿನಿಧಿಗಳಿಗೆ ಸರ್ಕಾರ ಸೂಚಿಸಿದೆ.ಹಿಕಾಕ ಅವರ ಬಿಡುಗಡೆಗೆ 55 ಪೊಲೀಸರನ್ನು ಕೊಂದಿರುವ ಮಾವೊವಾದಿ ನಾಯಕ ಚೆಂಡ ಭೂಷಣಮ್ ಅಲಿಯಾಸ್ ಘಾಸಿ ಸೇರಿದಂತೆ 30 ಕೈದಿಗಳನ್ನು ಬಿಡುಗಡೆ ಮಾಡುವಂತೆ ಮಾವೊವಾದಿಗಳು ಬೇಡಿಕೆ ಮುಂದಿಟ್ಟಿದ್ದಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.