ಬುಧವಾರ, ಜೂನ್ 16, 2021
23 °C

ಶಾಸಕರ ಭರವಸೆ: ವಿದ್ಯಾರ್ಥಿಗಳ ಧರಣಿ ಅಂತ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾದಾಮಿ: ವಿದ್ಯಾರ್ಥಿಗಳ ಅಧ್ಯಯನಕ್ಕೆ ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡವನ್ನು ಒದಗಿಸಲಾಗುವುದು. ಸರ್ಕಾರಿ ಪದವಿ ಕಾಲೇಜು ಕಟ್ಟಡಕ್ಕೆ ನಿವೇಶನ ಪಡೆದು ಶೀಘ್ರದಲ್ಲೇ ಕಾಲೇಜು ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಲಾಗುವುದು ಎಂದು ಶಾಸಕ ಎಂ.ಕೆ.ಪಟ್ಟಣ ಶೆಟ್ಟಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಧರಣಿ ಸತ್ಯಾಗ್ರಹವನ್ನು ಹಿಂದಕ್ಕೆ ಪಡೆದರು.ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕಳೆದ 10 ದಿನಗಳಿಂದ ಕಾಲೇಜು ಕಟ್ಟಡಣಕ್ಕೆ ನಿವೇಶನ ಮಂಜೂರು ಮಾಡುವಂತೆ ಪ್ರತಿಭಟೆ ನಡೆಸುತ್ತಿದ್ದರು.ಹಿಂದುಳಿದ ತಾಲ್ಲೂಕಿನ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣ ಸೌಲಭ್ಯ ದೊರೆಯಲು ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪದವಿ ಕಾಲೇಜನ್ನು ಮಂಜೂರು ಮಾಡಿದ್ದಾರೆ. ನಿವೇಶನ ದೊರೆಯದ ಕಾರಣ ಕಟ್ಟಡ ಕಾಮಗಾರಿ ವಿಳಂಬವಾಗಿದೆ. ದಾನಿಗಳು ನಿವೇಶನ ಕೊಡಲು ಒಪ್ಪಿಗೆ ನೀಡಿದ್ದಾರೆ. ಸೂಕ್ತ ಸ್ಥಳವನ್ನು ಆಯ್ಕೆಮಾಡಿ ಕಟ್ಟಡ ಕಾಮಗಾರಿಯನ್ನು ಆರಂಭಿಸ ಲಾಗುವುದು ಎಂದು ಶಾಸಕರು ಹೇಳಿದರು.ಸರ್ಕಾರ ನಿವೇಶನಕ್ಕೆ ಈಗಾಗಲೆ ರೂ. 60ಲಕ್ಷ ಮಂಜೂರು ಮಾಡಿದೆ.  ಕಟ್ಟಡ ಕಾಮಗಾರಿಗೆ ಇನ್ನೂ ಹೆಚ್ಚಿನ ಅನುದಾನ ಬಿಡುಗಡೆ ಮಾಡುವಂತೆ ಸರ್ಕಾರಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು. ಈರಣ್ಣ ಹುನಗುಂಡಿ, ಎಸ್.ಡಿ. ಜೋಗಿನ, ಅಡಿವೆಪ್ಪ ಢಾಣಕಶಿರೂರ, ಲಕ್ಷ್ಮಣ ಮರಡಿ ತೋಟ, ತಹಶೀಲ್ದಾರ  ಮಹೇಶ ಕರ್ಜಗಿ, ಪ್ರಾಚಾರ್ಯ ಎಸ್.ಬಿ .ರಾಯನಗೌಡರ,  ಪಿಎಸ್‌ಐ ಡಿ.ಡಿ. ಧೂಳಖೇಡ, ಎಬಿವಿಪಿ  ಸಂಚಾಲಕ ಬಿ.ಎಚ್. ವಡ್ಡರ, ಹನಮಂತ ಅಪ್ಪನ್ನವರ, ಶರಣು ಪಟ್ಟಣಶೆಟ್ಟಿ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.