ಮಂಗಳವಾರ, ಜೂನ್ 15, 2021
27 °C

ಶಾಸಕರ ಶಾಮೀಲು: ಜೆಡಿಎಸ್ ಆರೋಪ:ಕೊಪ್ಪಳ: ತೋಡು ಕಬಳಿಕೆ-ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೆಜಮಾಡಿ (ಪಡುಬಿದ್ರಿ): ಹೆಜಮಾಡಿ ರಾಷ್ಟ್ರೀಯ ಹೆದ್ದಾರಿ 66ರ ಪೆಟ್ರೋಲ್ ಬಂಕ್ ನಿರ್ಮಾಣಕ್ಕಾಗಿ ನೀರು ಹರಿಯುವ ತೋಡನ್ನೇ ಮುಚ್ಚಿರುವುದು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.ಹೆಜಮಾಡಿಯ ರಾಹೆ 66ರ ಕೊಪ್ಪಳ ಎಂಬಲ್ಲಿ ಶಶಿಕಲಾ ಜನಾರ್ದನ್ ಅವರಿಗೆ ಸೇರಿದ ಖಾಸಗಿ ಜಾಗದಲ್ಲಿ ಪೆಟ್ರೋಲ್ ಬಂಕ್ ನಿರ್ಮಿಸಲು ಉದ್ದೇಶಿಸಲಾಗಿತ್ತು.ಆದರೆ, ಜಾಗ ಸಮತಟ್ಟು ಮಾಡುವ ವೇಳೆ ಸರ್ವೆ ನಂ. 99/2 ಮತ್ತು 95/5ಎ-1ರಲ್ಲಿ ನೀರು ಹರಿಯುವ ತೋಡನ್ನೇ ಮುಚ್ಚಲಾಗಿದೆ. ಈ ಪರಿಸರದಲ್ಲಿ ಸುಮಾರು 200ಕ್ಕೂ ಅಧಿಕ ಮನೆಗಳಿದ್ದು, ನೂರಾರು ಎಕರೆ ಕೃಷಿ ಭೂಮಿ ಇದ್ದು, ಇದರಿಂದ ನದಿ ಪ್ರದೇಶದ ಕೊಪ್ಪಳ ಜನ ಮಳೆಗಾಲದಲ್ಲಿ ನೆರೆ ಉಂಟಾಗುವ ಬಗ್ಗೆ ಆತಂಕ್ಕೀಡಾಗಿದ್ದಾರೆ.ಜಲಾನಯನ ಇಲಾಖೆಯು ಇತ್ತೀಚೆಗೆ ಈ ತೋಡನ್ನು ಹೂಳೆತ್ತುವ ಮೂಲಕ ಯಾವುದೇ ಪ್ರಕೃತಿ ಹಾನಿ ಆಗದಂತೆ ಕಾಮಗಾರಿ ನಡೆಸಿದ್ದರು. ಆದರೆ ಇದೀಗ ಆ ತೋಡನ್ನು ಸಂಪೂರ್ಣ ಮುಚ್ಚಿ ಮೋರಿ ಹಾಕಿರುವುದರಿಂದ ಮುಂದಿನ ಮಳೆಗಾಲದಲ್ಲಿ ನೆರೆ ಉಂಟಾಗುವ ಭೀತಿ ಎದುರಾಗಿದೆ.ಈ ಪ್ರದೇಶಲ್ಲಿ ಶಾಂಭವಿ ನದಿಯೂ ಹರಿಯುತ್ತಿದ್ದು, ನದಿಯ ನೀರು ಹೋಗಲು ಇದ್ದ ತೋಡನ್ನು ಸಂಪೂರ್ಣ ಮುಚ್ಚಿರುವುದರಿಂದ ನೀರು ಹೋಗಲು ಸರಿಯಾದ ವ್ಯವಸ್ಥೆ ಇಲ್ಲದೆ ಈ ಪ್ರದೇಶ ಸಂಪೂರ್ಣ ಮುಳುಗಡೆಯಾಗುವ ಸಾಧ್ಯತೆ ಇದೆ~ ~ ಎಂದು ಸ್ಥಳೀಯರು ದೂರಿದ್ದಾರೆ.ಶಾಸಕರು ಶಾಮೀಲು ಆರೋಪ: `ನೀರು ಹರಿಯುವ ತೋಡನ್ನು ಮುಚ್ಚುವುದಕ್ಕಾಗಿ ಉದ್ದಿಮೆದಾರರೊಂದಿಗೆ ಶಾಸಕರು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಶಾಮೀಲಾಗಿದ್ದಾರೆ~ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷ ದೇವಿಪ್ರಸಾದ್ ಶೆಟ್ಟಿ ಆರೋಪಿಸಿದ್ದಾರೆ.ಸ್ಥಳೀಯರ ದೂರಿನ ಹಿನ್ನಲೆಯಲ್ಲಿ ಜೆಡಿಎಸ್ ಮುಖಂಡರು ಈ ಪ್ರದೇಶಕ್ಕೆ ಶನಿವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ತೋಡು ಮುಚ್ಚಿದ್ದರಿಂದ ಆಗಬಹುದಾದ ಸಮಸ್ಯೆಯ ಬಗ್ಗೆ ಸ್ಥಳೀಯರು ದೇವಿಪ್ರಸಾದ್ ಶೆಟ್ಟಿ ಅವರ ಗಮನಕ್ಕೆ ತಂದರು.`ಸರ್ಕಾರಿ ಜಾಗವನ್ನು ಖಾಸಗಿ ವ್ಯಕ್ತಿಯೊಬ್ಬರು ಪೆಟ್ರೋಲ್ ಬಂಕ್‌ಗಾಗಿ ಕಬಳಿಸಲು ಕಾಂಗ್ರೆಸ್-ಬಿಜೆಪಿ ಪಕ್ಷವು ಬೆಂಬಲ ನೀಡುತ್ತಿದೆ. ಬಿಜೆಪಿ-ಕಾಂಗ್ರೆಸ್‌ನ ಭೂಕಬಳಿಕೆ ಇದೀಗ ಗ್ರಾಮೀಣ ಮಟ್ಟಕ್ಕೂ ತಲುಪಿದೆ~ ಎಂದು ದೇವಿಪ್ರಸಾದ್ ಶೆಟ್ಟಿ ಅವರು ಆರೋಪಿಸಿದರು.`ಕಬಳಿಕೆಗೆ ಒಳಗಾದ ತೋಡನ್ನು ಕೂಡಲೇ ತೆರವುಗೊಳಿಸದಿದ್ದಲ್ಲಿ ಸ್ಥಳೀಯರೊಂದಿಗೆ ಸೇರಿ ನಾವೇ ತೆರವು ಗೊಳಿಸುತ್ತೇವೆ~ ಎಂದು ಅವರು ಅಧಿಕಾರಿಗಳಿಗೆ ಎಚ್ಚರಿಸಿದರು.ನಾರಾಯಣ ಪೂಜಾರಿ,ಅಬ್ಬಾಸ್ ಕನ್ನಂಗಾರ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.