ಗುರುವಾರ , ಫೆಬ್ರವರಿ 25, 2021
18 °C

ಶಾಸಕ ಜಿನಾ ಹಿಕಾಕ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಸಕ ಜಿನಾ ಹಿಕಾಕ ಬಿಡುಗಡೆ

ಭುವನೇಶ್ವರ (ಪಿಟಿಐ/ಐಎಎನ್‌ಎಸ್): ತಿಂಗಳ ಹಿಂದೆ ಅಪಹರಣಕ್ಕೀಡಾಗಿದ್ದ ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಮಾವೊವಾದಿಗಳು ಗುರುವಾರ ಬೆಳಿಗ್ಗೆ ಬಿಡುಗಡೆ ಮಾಡಿದ್ದಾರೆ.ಬೆಳಿಗ್ಗೆ ಇಲ್ಲಿನ ಕೊರಾಟ್‌ಪುಟ್ ಜಿಲ್ಲೆಯ ಹಳ್ಳಿಯೊಂದರ ಮಾವಿನತೋಟದ ಬಳಿ ಮಾವೊವಾದಿಗಳು ಆದಿವಾಸಿಗಳಿಗೆ ಹಿಕಾಕ ಅವರನ್ನು ಒಪ್ಪಿಸಿದರು. ನಂತರ ಆದಿವಾಸಿಗಳು ಹಿಕಾಕ ಅವರ ಪತ್ನಿ ಹಾಗೂ ವಕೀಲ ನಿಹಾರ್ ರಂಜನ್ ಪಟ್ನಾಯಕ್ ಅವರಿಗೆ ಒಪ್ಪಿಸಿದರು ಎಂದು ಮೂಲಗಳು ತಿಳಿಸಿವೆ.ಹಸಿರು ಕುರ್ತಾ ಹಾಗೂ ಪೈಜಾಮಾ ತೊಟ್ಟಿದ್ದ ಹಿಕಾಕ ತಮ್ಮ ಪತ್ನಿಯನ್ನು ಕಂಡ ಕೂಡಲೇ ಬಿಗಿದಪ್ಪಿಕೊಂಡು ಆನಂದಬಾಷ್ಪಗಳನ್ನು ಸುರಿಸಿದರು. ನಕ್ಸಲರು ತಮ್ಮನ್ನು ತುಂಬಾ ಚೆನ್ನಾಗಿಯೇ ನೋಡಿಕೊಂಡಿದ್ದು, ತಾವು ಆರೋಗ್ಯದಿಂದ ಇರುವುದಾಗಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.ನಂತರ ಹಿಕಾಕ ಅವರನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.