ಶುಕ್ರವಾರ, ಮೇ 7, 2021
26 °C

ಶಾಸಕ, ಪುತ್ರ ಗುಂಡೇಟಿಗೆ ಬಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಾಚಿ (ಪಿಟಿಐ): ಪ್ರಾರ್ಥನೆ ಮುಗಿಸಿಕೊಂಡು ಮಸೀದಿಯಿಂದ ಹೊರಬಂದ ಒಬ್ಬ ಶಾಸಕ ಮತ್ತು ಆತನ ಪುತ್ರನನ್ನು ದುಷ್ಕರ್ಮಿಗಳು ಗುಂಡಿಟ್ಟು ಹತ್ಯೆ ಮಾಡಿದ ಹಾಗೂ ನಂತರ ಉಂಟಾದ ಹಿಂಸಾಚಾರಕ್ಕೆ ನಾಲ್ವರು ಬಲಿಯಾದ ಘಟನೆ ಇಲ್ಲಿ ನಡೆಯಿತು.ಸಿಂಧ್ ಪ್ರಾಂತ್ಯದ ವಿಧಾನಸಭೆಗೆ ಮುತ್ತಾಹಿದ ಕ್ವಾಮಿ ಮೂವ್‌ಮೆಂಟ್ ಪಕ್ಷದಿಂದ (ಎಂಕ್ಯುಎಂ)  ಆಯ್ಕೆಯಾಗಿದ್ದ 50 ವರ್ಷ ಆಸುಪಾಸಿನ ಸಾಜಿದ್ ಖುರೇಷಿ ಮತ್ತು ಅವರ ಪುತ್ರ 26 ವರ್ಷದ ಒವಾಯಿಸ್ ದುಷ್ಕರ್ಮಿಗಳ ಗುಂಡಿಗೆ ಬಲಿಯಾದವರು.ನಂತರ ನಗರದಲ್ಲಿ ನಡೆದ ಹಿಂಸಾಚಾರಕ್ಕೆ ನಾಲ್ವರು ಬಲಿಯಾಗುವ ಜತೆಗೆ ಇಡೀ ನಗರ ವ್ಯಾಪಾರ-ವಹಿವಾಟು ಇಲ್ಲದೆ ಸ್ತಬ್ಧವಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.