ಶಾಸಕ ರೋಷನ್ ಬೇಗ್ ವಿರುದ್ಧ ದೂರು

7

ಶಾಸಕ ರೋಷನ್ ಬೇಗ್ ವಿರುದ್ಧ ದೂರು

Published:
Updated:

ಬೆಂಗಳೂರು:  `ಶಾಸಕ ಆರ್.ರೋಷನ್‌ಬೇಗ್ ಹಾಗೂ ಅವರ ಪತ್ನಿ ಸಬಿಹಾ ಫಾತಿಮಾ ಅವರು ನನಗೆ ಸೇರಿದ ಫ್ಲಾಟ್‌ನ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ಬೇರೆಯವರಿಗೆ ಮಾರಾಟ ಮಾಡಿದ್ದಾರೆ~ ಎಂದು ಆರೋಪಿಸಿ ಜಿಯಾವುಲ್ಲಾ ಷರೀಫ್ ಎಂಬುವರು ಭಾರತಿನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.ಜಿಯಾವುಲ್ಲಾ ಅವರು `ಷರೀಫ್ ಕನ್‌ಸ್ಟ್ರಕ್ಷನ್ಸ್~ ಎಂಬ ಸಂಸ್ಥೆಯ ಪಾಲುದಾರರಾಗಿದ್ದಾರೆ. ಕೋಲ್ಸ್ ಪಾರ್ಕ್ ಬಳಿಯ ಹೇನ್ಸ್ ರಸ್ತೆಯಲ್ಲಿ ರುವ `ಪೆಂಟ್ ಹೌಸ್ ಫ್ಲಾಟ್‌ನ~ ಹೆಸರಿನ ಕಟ್ಟಡವನ್ನು 50 ಲಕ್ಷ ರೂಪಾಯಿಗೆ ಖರೀದಿಸಲು (ಸೆಂಚುರಿ ಬಿಲ್ಡರ್ಸ್‌ನ ಮಾಲೀಕ ಪಿ.ದಯಾನಂದ ಪೈ ಅವರ ಮಧ್ಯಸ್ಥಿಕೆಯಲ್ಲಿ) ಬೇಗ್ ಅವರು ಮುಂದಾದರು.ಮುಂಗಡ ಹಣವಾಗಿ ಐದು ಲಕ್ಷ ರೂಪಾಯಿ ಗಳನ್ನು ನೀಡಿದ್ದರು. ಉಳಿದ ರೂ 45 ಲಕ್ಷ ಣವನ್ನು ಖರೀದಿ (ಸೇಲ್ ಡೀಡ್) ಸಮಯದಲ್ಲಿ ನೀಡುವುದಾಗಿ ಹೇಳಿದ್ದರು. ಆದರೆ ಈವರೆಗೂ ಕೊಟ್ಟಿಲ್ಲ. ಈ ವ್ಯವಹಾರದ ಬಗ್ಗೆ ಜಿಪಿಎ ಆಗಲೀ, ಬರವಣಿಗೆ ರೂಪದ ಒಪ್ಪಂದವಾಗಲೀ ಆಗಿಲ್ಲ ಎಂದು ಷರೀಫ್ ದೂರಿನಲ್ಲಿ ತಿಳಿಸಿದ್ದಾರೆ.`ಲಿಖಿತ ಒಪ್ಪಂದ ಮಾಡಿಕೊಳ್ಳದ ಬೇಗ್ ನನ್ನ ಗಮನಕ್ಕೆ ಬರದಂತೆ ಫ್ಲಾಟ್‌ನಲ್ಲಿ ಅಕ್ರಮ ಪ್ರವೇಶ ಮಾಡಿ ಅಲ್ಲಿ ಅನಧಿಕೃತ ಕಟ್ಟಡವನ್ನು ನಿರ್ಮಿ ಸಿದ್ದಾರೆ. ಬಾಕಿ ಹಣವನ್ನು ಕೇಳಲು ಹೋದಾಗ ಬೆದರಿಕೆ ಹಾಕಿದ್ದಾರೆ. ನನಗೆ ಗೊತ್ತಿಲ್ಲದ ಹಾಗೆ 1998ರಲ್ಲೇ ನಕಲಿ ಜಿಪಿಎ ಸೃಷ್ಟಿ ಮಾಡಿ ಆ ದಾಖಲೆಗಳಿಗೆ ನನ್ನ ಮತ್ತು ನನ್ನ ಪತ್ನಿಯ (ಶರ್ಫುನ್ನೀಸಾ) ಸಹಿ  ಮಾಡಿದ್ದಾರೆ.ಅಲ್ಲದೇ ತಮ್ಮ ಪತ್ನಿ ಸಬಿಹಾ ಫಾತಿಮಾ ಅವರ ಹೆಸರಿಗೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಈ ನಕಲಿ ದಾಖಲೆಗಳ ಆಧಾರದ ಮೇಲೆ ವೈಜ ಯಂತಿ ಮಾಲಾ ಎಂಬು ವರಿಗೆ 8 ಅಕ್ಟೋಬರ್ 2009ರಲ್ಲಿ ಮಾರಾಟ ಮಾಡಿ ನನಗೆ ಮೋಸ ಮಾಡಿದ್ದಾರೆ ಪ್ರಾಣ ಬೆದರಿಕೆ ಹಾಕಿದ್ದಾರೆ~ ಎಂದು ಷರೀಫ್ ದೂರಿನಲ್ಲಿ ದಾಖಲಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry