ಶಾಸಕ ಸ್ಥಾನದಿಂದ ಅನೂರ್ಜಿತ ಇಲ್ಲ

7

ಶಾಸಕ ಸ್ಥಾನದಿಂದ ಅನೂರ್ಜಿತ ಇಲ್ಲ

Published:
Updated:

ತುಮಕೂರು: ಬೇರೆ ಪಕ್ಷದವರು ಏನಾದರೂ ಮಾಡಿಕೊಳ್ಳಲಿ, ಸದನದಲ್ಲಿ ಅಶ್ಲೀಲ ಚಿತ್ರ ನೋಡಿ ಸಚಿವ ಸ್ಥಾನ ಕಳೆದುಕೊಂಡ ಲಕ್ಷ್ಮಣ ಸವದಿ, ಸಿ.ಸಿ.ಪಾಟೀಲ, ಕೃಷ್ಣಪಾಲೇಮಾರ್ ಅವರ ಶಾಸಕ ಸ್ಥಾನದಿಂದ ಅನೂರ್ಜಿತಗೊಳಿಸುವ ಪ್ರಶ್ನೆಯೇ ಇಲ್ಲ. ಪಕ್ಷದಿಂದಲೂ ಉಚ್ಚಾಟಿಸುವುದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ ಹೇಳಿದರು.ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪ್ರಶ್ನೆಗಳಿಗೆ ಸಿಡುಕಿನಿಂದಲೇ ಉತ್ತರಿಸಿದರು. ವಿರೋಧ ಪಕ್ಷಗಳಿಗೆ ಅವಕಾಶ ಸಿಕ್ಕಿರುವುದರಿಂದಲೇ ಸರ್ಕಾರ, ಪಕ್ಷದ ವಿರುದ್ಧ ಟೀಕಾಪ್ರಹಾರದಲ್ಲಿ ತೊಡಗಿವೆ. ಅಶ್ಲೀಲ ಚಿತ್ರ ವೀಕ್ಷಿಸಿದ ಘಟನೆ ದುರಾದೃಷ್ಟಕರ ಎಂದರು.ಪಕ್ಷದ ಮರ್ಯಾದೆ ಕಳೆದಿರುವ ಮೂವರು ಶಾಸಕರನ್ನು ಪಕ್ಷದಿಂದ ಉಚ್ಚಾಟನೆ ಮಾಡುತ್ತೀರಾ ಎಂಬ ಪ್ರಶ್ನೆಗೆ ಸಿಡುಕಿದ ಅವರು ಪಕ್ಷದಿಂದ ಉಚ್ಚಾಟಿಸುವ ಪ್ರಶ್ನೆಯೇ ಇಲ್ಲ. ಸದನ ಸಮಿತಿ ತನಿಖೆಗೆ ವಹಿಸಲಾಗಿದೆ. ಸದನ ಸಮಿತಿ ವರದಿ ಬಂದ ಬಳಿಕ ಮುಂದಿನ ನಿರ್ಧಾರ ಎಂದು ಹೇಳಿದರು. ಸಂಪುಟ ವಿಸ್ತರಣೆ ಮಾಡಲು ಶೀಘ್ರವೇ ಪಕ್ಷದ ಕೋರ್ ಸಮಿತಿ ಸಭೆ ಕರೆಯಲಾಗುವುದು. ಸಭೆಯ ತೀರ್ಮಾನವನ್ನು ಅಂತಿಮವಾಗಿ ಹೈಕಮಾಂಡ್‌ಗೆ ಸಲ್ಲಿಸಿ ಒಪ್ಪಿಗೆ ಪಡೆಯುವುದಾಗಿ ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry