ಶುಕ್ರವಾರ, ಮೇ 14, 2021
35 °C

ಶಾಸಕ ಹಿಕಾಕ ಬಿಡುಗಡೆಗೆ ಹಿನ್ನಡೆ: ಮಾವೊವಾದಿಗಳಲ್ಲೇ ಭಿನ್ನಾಭಿಪ್ರಾಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭುವನೇಶ್ವರ (ಪಿಟಿಐ): ಒಡಿಶಾದ ಬಿಜೆಡಿ ಶಾಸಕ ಜಿನಾ ಹಿಕಾಕ ಅವರನ್ನು ಅಪಹರಿಸಿರುವ ಮಾವೊವಾದಿಗಳಲ್ಲೇ ಒತ್ತೆಯಾಳು ಬಿಡುಗಡೆಯ ಬಗ್ಗೆ ಭಿನ್ನಾಭಿಪ್ರಾಯ ಉಂಟಾಗಿದೆ.ಜೈಲಿನಲ್ಲಿರುವ ಛಸಿ ಮುಲಿಯಾ ಆದಿವಾಸಿ ಸಂಘದ (ಸಿಎಂಎಎಸ್) ಸದಸ್ಯರೆಲ್ಲರನ್ನು ಬಿಡುಗಡೆ ಮಾಡಬೇಕು ಎಂದು `ಶ್ರೀಕಾಕುಳಂ- ಕೊರಪುಟ್ ಸಿಪಿಐ (ಮಾವೊವಾದಿ)~ ಗುಂಪು ಹೇಳಿದೆ. ಆದರೆ, `ಆಂಧ್ರ ಒಡಿಶಾ ಗಡಿ ವಿಶೇಷ ವಲಯ ಸಮಿತಿ (ಎಒಬಿಎಸ್‌ಜೆಡ್‌ಸಿ) ಸಿಪಿಐ (ಮಾವೊವಾದಿ)~ ಗುಂಪು ಶಾಸಕರನ್ನು ಜನರ ಎದುರಿನಲ್ಲಿ (ಪ್ರಜಾ ಕೋರ್ಟ್) ಏ 25ರಂದು ವಿಚಾರಣೆಗೆ ಗುರಿಪಡಿಸಬೇಕು ಎಂದಿದೆ. ಇದರಿಂದ ಶಾಸಕ ಹಿಕಾಕ ಬಿಡುಗಡೆ ಮತ್ತಷ್ಟು ಕಗ್ಗಂಟ್ಟಾಗಿದೆ.`ಶ್ರೀಕಾಕುಳಂ- ಕೊರಾಪುಟ್ ಸಂಘಟನೆಯ ದಯಾ ಜೈಲಿನಲ್ಲಿರುವ ಸಿಎಂಎಎಸ್ ಸದಸ್ಯರನ್ನು ಬಿಡುಗಡೆ ಮಾಡಿ ಎಂದು ಪತ್ರದ ಮೂಲಕ ಬೇಡಿಕೆ ಇಟ್ಟರೆ, ಎಒಬಿಎಸ್‌ಜೆಡ್‌ಸಿ ಜಗಬಂಧು ಪ್ರಜಾ ಕೋರ್ಟ್‌ನಲ್ಲಿ ಶಾಸಕರನ್ನು ವಿಚಾರಣೆಗೆ ಒಳಪಡಿಸಬೇಕು ಎಂಬ ಬೇಡಿಕೆಯ ಧ್ವನಿಮುದ್ರಿಕೆಯನ್ನು ಕಳುಹಿಸಿದ್ದಾರೆ. ಇವೆರಡರಲ್ಲಿ ಯಾವುದನ್ನು ನಂಬುವುದು ಎಂಬುದೇ ತಿಳಿಯುತ್ತಿಲ್ಲ ಎಂದು ಶಾಸಕರ ಬಿಡುಗಡೆಗಾಗಿ ರಚಿಸಲಾಗಿರುವ ತಂಡದ ಅಧಿಕಾರಿಗಳು ಹೇಳಿದ್ದಾರೆ.

ನಕ್ಸಲರ ವಿರುದ್ಧ ಕ್ರಮಕ್ಕೆ ಒತ್ತಾಯ

ನವದೆಹಲಿ/ರಾಯ್‌ಪುರ (ಐಎಎನ್‌ಎಸ್):
ನಕ್ಸಲರು ನಡೆಸುತ್ತಿರುವ ಅಪಹರಣಗಳಿಗೆ ಕಡಿವಾಣ ಹಾಕಬೇಕಿದ್ದರೆ ಮೊದಲು ಆ ದುರುಳರ ವಿರುದ್ಧ ಕಠಿಣವಾದ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.`ಮಾವೊವಾದಿಗಳು ಇಂತಹ ಕೃತ್ಯಕ್ಕೆ ಇಳಿಯದಂತೆ ನಿಯಂತ್ರಿಸಲು ಕೇಂದ್ರ ಸರ್ಕಾರ ಕಟ್ಟುನಿಟ್ಟಿನ ಕಾನೂನು ಜಾರಿಗೆ ತರುವ ಅಗತ್ಯವಿದೆ. ಶಾಸಕರು,  ನಕ್ಸಲ್ ಪೀಡಿತ ಪ್ರದೇಶದಲ್ಲಿ ಶಾಸಕರು, ವಿದೇಶಿ ಪ್ರಜೆಗಳು, ಜಿಲ್ಲಾಧಿಕಾರಿಗಳ ಅಪಹರಣ ನಡೆಯುತ್ತಲೇ ಇದೆ. ಇಂತಹ ಘಟನೆ ಎಲ್ಲಿ ನಡೆದರು ಖಂಡನಾರ್ಹವಾದುದು~ ಎಂದು ಕಾಂಗ್ರೆಸ್ ವಕ್ತಾರ ರಶೀದ್ ಅಲ್ವಿ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.