`ಶಾಸ್ತ್ರೀಯ ನೃತ್ಯ: ಹೊಸ ಸಂಶೋಧನೆ ಅಗತ್ಯ'

7

`ಶಾಸ್ತ್ರೀಯ ನೃತ್ಯ: ಹೊಸ ಸಂಶೋಧನೆ ಅಗತ್ಯ'

Published:
Updated:
`ಶಾಸ್ತ್ರೀಯ ನೃತ್ಯ: ಹೊಸ ಸಂಶೋಧನೆ ಅಗತ್ಯ'

ಬೆಂಗಳೂರು: ಶಾಸ್ತ್ರೀಯ ನೃತ್ಯಗಳಲ್ಲಿ ಹೊಸ-ಹೊಸ ಸಂಶೋಧನೆಗಳನ್ನು ಕೈಗೊಳ್ಳಬೇಕು. ಇಂತಹ ಸಂಶೋಧನೆಗಳಿಗೆ ಸರ್ಕಾರ ಪ್ರೋತ್ಸಾಹವನ್ನು ನೀಡಬೇಕು ಎಂದು ಸಂಸದ ಅನಂತಕುಮಾರ್ ಹೇಳಿದರು.ನೂಪುರ ಭ್ರಮರಿ ನೃತ್ಯ ಸಂಶೋಧಕರ ಚಾವಡಿ, ಭಾರತೀಯ ವಿದ್ಯಾಭವನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ `ಅಖಿಲ ಭಾರತೀಯ ನೃತ್ಯ ಸಂಶೋಧನಾ  ಸಮ್ಮೇಳನದ ಸಮಾರೋಪ ಸಮಾರಂಭ ಹಾಗೂ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ರಾಜ್ಯದ ವಿವಿಧ ಶಾಲಾ ಕಾಲೇಜುಗಳ ಬಯಲು ರಂಗಮಂದಿರಗಳಲ್ಲಿ ಕರ್ನಾಟಕ ಶಾಸ್ತ್ರೀಯ ನೃತ್ಯಗಳು ಪ್ರದರ್ಶನವಾಗಬೇಕು. ಈ ಪ್ರದರ್ಶನಗಳು ನಮ್ಮ ಯುವಜನತೆಗೆ ಸ್ಫೂರ್ತಿದಾಯಕವಾಗಬೇಕು ಎಂದು ಹೇಳಿದರು.ನಮ್ಮ ರಾಜ್ಯದ ಐಹೊಳೆ, ಬಾದಾಮಿ, ಪಟ್ಟದಕಲ್ಲು, ಹಂಪಿ, ಬೇಲೂರು, ಹಳೇಬೀಡು ಇವು ನಮ್ಮ ಸಾಂಸ್ಕೃತಿಕ ಕ್ಷೇತ್ರಗಳು. ಇವುಗಳನ್ನು ಶಾಸ್ತ್ರೀಯ ನೃತ್ಯದ ವೇದಿಕೆಗಳನ್ನಾಗಿ ಪರಿವರ್ತಿಸಬೇಕು ಎಂದರು.ಕಾರ್ಯಕ್ರಮದಲ್ಲಿ ಶ್ರೇಷ್ಠ ನೃತ್ಯ ವಿಮರ್ಶಾ ಪ್ರಶಸ್ತಿ-2012 `ವಿಮರ್ಶಾ ವಾಙ್ಮಯಿ' ಪ್ರಶಸ್ತಿಯನ್ನು ವಿದ್ವಾನ್ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯ ಅವರಿಗೆ ನೀಡಿ ಸನ್ಮಾನಿಸಲಾಯಿತು. ಭರತನಾಟ್ಯ ನೃತ್ಯ ತಂಡಗಳು ಸಂಶೋಧನಾಧಾರಿತವಾದ ನೃತ್ಯ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry