ಶಾಹಿದ್ ಕಪೂರ್‌ನ ಕೇರಂ ಪ್ರೀತಿ

7

ಶಾಹಿದ್ ಕಪೂರ್‌ನ ಕೇರಂ ಪ್ರೀತಿ

Published:
Updated:
ಶಾಹಿದ್ ಕಪೂರ್‌ನ ಕೇರಂ ಪ್ರೀತಿ

ಸಾಮಾನ್ಯವಾಗಿ ತಾರೆಯರೆಲ್ಲ, ಶೂಟಿಂಗ್ ನಡುವೆ ಬಿಡುವು ದೊರೆತರೆ ಸಾಕು, ಐಷಾರಾಮಿ ವ್ಯಾನಿಟಿ ವ್ಯಾನುಗಳಲ್ಲಿ ಕಾಲ ಕಳೆಯುತ್ತಾರೆ. ಇಲ್ಲವೇ ಶಾಪಿಂಗ್‌ಗೆ ಹೊರಡುತ್ತಾರೆ. ಚಿತ್ರೀಕರಣ ಮುಗಿದ ತಕ್ಷಣ ಅಲ್ಲಿ ಕಾಲೇ ನಿಲ್ಲದು ಎಂಬಂತೆ ಮನೆಗೆ ಧಾವಿಸುತ್ತಾರೆ. ಆದರೆ ಶಾಹಿದ್ ಕಪೂರ್ ಮಾತ್ರ ಇದಕ್ಕೆಲ್ಲ ಅಪವಾದ.ಬಿಡುವು ದೊರೆತರೆ ಸಾಕು, ತಮ್ಮ ಚಿತ್ರೀಕರಣ ಘಟಕದ ಸದಸ್ಯರೊಡನೆ ಕೇರಂ ಆಡಲು ಕುಳಿತುಕೊಳ್ಳುತ್ತಾರೆ. ಸಂಜೆ ಕೆಲಸ ಮುಗಿದೊಡನೆ ಸಾಮಾನ್ಯರಂತೆ ಗುಂಪುಗೂಡಿ ಪಂದ್ಯ ಕಟ್ಟಿ ಆಟವಾಡುವುದು ಅಭ್ಯಾಸವಾಗಿದೆಯಂತೆ.ರಾಜಕುಮಾರ್ ಸಂತೋಷಿ ನಿರ್ದೇಶನದ `ಫಟಾ ಪೋಸ್ಟರ್, ನಿಕಲಾ ಹೀರೊ' ಚಿತ್ರೀಕರಣದ ಘಟಕದಲ್ಲಿ ಶಾಹಿದ್ ಎಲ್ಲರೊಂದಿಗೆ ಬೆರೆಯುತ್ತಿದ್ದಾರಂತೆ.ವ್ಯಾನಿಟಿ ವ್ಯಾನುಗಳಲ್ಲಿ ಕೆಲವೇ ನಿಮಿಷ ಕಳೆಯುವ ಈ ನಟ, ನಂತರ ಬಿಡುವಾಗಿರುವ ಕಾರ್ಮಿಕರೊಂದಿಗೆ ಹರಟೆಗಿಳಿಯುತ್ತಲೇ ಕೇರಂ ಆಡುತ್ತಾರಂತೆ. ಕೇವಲ ಆಟ ಮಾತ್ರವಲ್ಲ, ಆಟದ ನಡುವೆ ಅವರ ಕ್ಷೇಮ ಸಮಾಚಾರವನ್ನೂ ವಿಚಾರಿಸಿಕೊಳ್ಳುತ್ತಿದ್ದಾರಂತೆ.ಶಾಹಿದ್‌ನ ಈ ವರ್ತನೆ, ಸ್ಟಾರ್‌ಗಿರಿಯಿಂದ ಹೊರತಾಗಿರುವುದು, ಅಲ್ಲಿಯ ಕಾರ್ಮಿಕರ ಮೆಚ್ಚುಗೆಯನ್ನು ಗಳಿಸಿದೆಯಂತೆ.ಪ್ರತಿಯೊಬ್ಬರೂ ಸಂಜೆ ಕೆಲಸ ಮುಗಿಸುವುದನ್ನೇ ಕಾದಿದ್ದು, ಹುಮ್ಮಸ್ಸಿನಿಂದ ಶಾಹಿದ್ ಜೊತೆಗೆ ಆಟವಾಡುತ್ತಿದ್ದಾರೆ ಎಂದು ವರದಿಯಾಗಿದೆ. ಲೈಟ್‌ಮನ್, ಸ್ಪಾಟ್‌ಬಾಯ್ ಹಾಗೂ ತಂಡದ ಇತರ ಸದಸ್ಯರು ಈ ಗುಂಪಿನಲ್ಲಿ ಸೇರ್ಪಡೆಗೊಂಡಿದ್ದಾರಂತೆ. ಶಾಹಿದ್‌ನ ಈ ಪರಿ ಎಲ್ಲರಿಗೂ ಅಚ್ಚರಿ ಮಾತ್ರವಲ್ಲ, ಪ್ರೀತಿಯನ್ನೂ ಹುಟ್ಟಿಸಿದೆಯಂತೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry