ಭಾನುವಾರ, ಆಗಸ್ಟ್ 18, 2019
22 °C

ಶಿಂಧೆಗೆ ಶಸ್ತ್ರಚಿಕಿತ್ಸೆ

Published:
Updated:

ಮುಂಬೈ (ಪಿಟಿಐ): ಶ್ವಾಸಕೋಶ ಸಂಬಂಧಿ ತೊಂದರೆಯಿಂದ ಬಳಲುತ್ತಿರುವ ಕೇಂದ್ರ ಗೃಹ ಸಚಿವ ಸುಶೀಲ ಕುಮಾರ ಶಿಂಧೆ ಅವರಿಗೆ ಇಲ್ಲಿಯ ಬ್ರೀಚ್ ಕ್ಯಾಂಡಿ ಆಸ್ಪತ್ರೆಯೊಂದರಲ್ಲಿ ಭಾನುವಾರ ಶಸ್ತ್ರಚಿಕಿತ್ಸೆ ನಡೆಸಲಾಯಿತು.ಶನಿವಾರ ರಾತ್ರಿಯೇ ಶಿಂಧೆ ಆಸ್ಪತ್ರೆಗೆ ದಾಖಲಾಗಿದ್ದು ಒಂದೆರಡು ದಿನಗಳಲ್ಲಿ ಬಿಡುಗಡೆಯಾಗಲಿದ್ದಾರೆ ಎಂದು ಅವರು ನಿಕಟವರ್ತಿಗಳು ತಿಳಿಸಿದರಾದರೂ ಕೈಗೊಳ್ಳಲಾದ ಚಿಕಿತ್ಸೆಯ ವಿವರಗಳ ಬಗ್ಗೆ ಮಾಹಿತಿ ನೀಡಲಿಲ್ಲ.`ಇದೊಂದು ಸಣ್ಣ ಶಸ್ತ್ರಚಿಕಿತ್ಸೆಯಾಗಿದ್ದು, ಸಂಸತ್ತಿನ ಮುಂಗಾರು ಅವಧಿವೇಶನದಲ್ಲಿ ಸಚಿವ ಶಿಂಧೆ ಅವರು ಪಾಲ್ಗೊಳ್ಳಲಿದ್ದಾರೆ' ಎಂದು ತಿಳಿಸಲಾಗಿದೆ. ಚಿಕಿತ್ಸೆಯ ನಂತರ ತಮ್ಮ ತಂದೆ ಚೇತರಿಸಿಕೊಂಡಿದ್ದಾರೆ ಎಂದು ಶಿಂಧೆ ಪುತ್ರಿ, ಶಾಸಕಿ ಪ್ರಣತಿ ಅವರು ಇಲ್ಲಿ ಸುದ್ದಿಗಾರರಿಗೆ ತಿಳಿಸಿದರು.

Post Comments (+)