ಶಿಂಧೆ ಬೆಂಬಲಕ್ಕೆ ಧಾವಿಸಿದ ಖುರ್ಷಿದ್‌

7

ಶಿಂಧೆ ಬೆಂಬಲಕ್ಕೆ ಧಾವಿಸಿದ ಖುರ್ಷಿದ್‌

Published:
Updated:
ಶಿಂಧೆ ಬೆಂಬಲಕ್ಕೆ ಧಾವಿಸಿದ ಖುರ್ಷಿದ್‌

ನವದೆಹಲಿ (ಐಎಎನ್‌ಎಸ್): `ಹಿಂದೂ ಭಯೋತ್ಪಾದನೆ'ಯ ವಿವಾದಾತ್ಮಕ ಹೇಳಿಕೆಯ ಮೂಲಕ ಆರ್‌ಎಸ್‌ಎಸ್ ಹಾಗೂ ಬಿಜೆಪಿ ಕೆಂಗಣ್ಣಿಗೆ ಗುರಿಯಾಗಿರುವ ಕೇಂದ್ರ ಗೃಹ ಸಚಿವ ಸುಶೀಲ್ ಕುಮಾರ್ ಶಿಂಧೆ ಅವರ ನೆರವಿಗೆ ಮಂಗಳವಾರ ಧಾವಿಸಿದ ವಿದೇಶಾಂಗ ಸಚಿವ ಸಲ್ಮಾನ್ ಖುರ್ಷಿದ್ ಅವರು `ತನಿಖಾ ಸಂಸ್ಥೆಗಳು ಬಹಿರಂಗಪಡಿಸಿರುವ ಆಧಾರಾಂಶಗಳ ಮೇಲೆ ಶಿಂಧೆ ಹಾಗೇ ಹೇಳಿದ್ದಾರೆ' ಎಂದು ಸಮರ್ಥಿಸಿಕೊಂಡರು.`ನಾವು ಹೇಳಿರುವ ಅಂಶಗಳು ಸಂಪೂರ್ಣವಾಗಿ ಸರ್ಕಾರಕ್ಕೆ ತನಿಖಾ ಸಂಸ್ಥೆಗಳು ಸಲ್ಲಿಸಿರುವ ವರದಿಗಳ ಆಧಾರದಿಂದ ಕೂಡಿವೆ. ದಾಖಲೆಗಳು ಲಭ್ಯವಿದ್ದರೂ ಇದನ್ನು ತಳ್ಳಿಹಾಕುವ ಕೆಲ ಜನರು ಗಮನ ಬೇರೆಡೆ ಸೆಳೆಯಲು ಪ್ರಯತ್ನಿಸುತ್ತಿದ್ದಾರೆ' ಎಂದು ಖುರ್ಷಿದ್ ತಿಳಿಸಿದರು.`ದೇಶಕ್ಕೆ ಅಪಾಯ ಒಡ್ಡುವ ಹಿಂಸಾಚಾರವನ್ನು ನಡೆಸುವವರು ಯಾವುದೇ ಧರ್ಮ,ಗುಂಪಿಗೆ ಸೇರಿದರೂ ಉಗ್ರರೆ, ಉಗ್ರರಿಗೆ ಯಾವುದೇ ಧರ್ಮವಿಲ್ಲ ಎನ್ನುವುದನ್ನು ನಾವು ಅನೇಕ ಬಾರಿ ಮುಚ್ಚುಮರೆಯಿಲ್ಲದೆ ಹೇಳಿದ್ದೇವೆ'  ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry