ಶಿಕ್ಷಕರನ್ನು ಮರೆತ ಸರ್ಕಾರ: ಹೊರಟ್ಟಿ

7

ಶಿಕ್ಷಕರನ್ನು ಮರೆತ ಸರ್ಕಾರ: ಹೊರಟ್ಟಿ

Published:
Updated:

 ಹಿರೇಕೆರೂರ: ಹಿಂದೆ ವಿಧಾನ ಮಂಡಲದಲ್ಲಿ ಶಿಕ್ಷಕರ ಸಮಸ್ಯೆಗಳ ಕುರಿತು ಶಿಕ್ಷಕರ ಪ್ರತಿನಿಧಿಗಳು ಪಕ್ಷಾತೀತ ವಾಗಿ ಹೋರಾಟ ನಡೆಸಿದ್ದೇವೆ. ಆದರೆ ಈಗ ಬಿಜೆಪಿ ಸದಸ್ಯರು ತಮ್ಮನ್ನು ಆಯ್ಕೆ ಮಾಡಿದ ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತದೆ  ಸುಮ್ಮನೆ ಕುಳಿತಿದ್ದಾರೆ ಎಂದು ಮಾಜಿ ಶಿಕ್ಷಣ ಸಚಿವ, ವಿಧಾನ ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ದೂರಿದರು.ಇಲ್ಲಿಯ ಗುರುಭವನದಲ್ಲಿ ಭಾನು ವಾರ ಕರ್ನಾಟಕ ಮಾಧ್ಯಮಿಕ ಶಾಲಾ ನೌಕರರ ಸಂಘದ ತಾಲ್ಲೂಕು ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸೇವೆ ಯಿಂದ ನಿವೃತ್ತಿ ಹೊಂದಿದ ಸದಸ್ಯರ ಸನ್ಮಾನ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ ದರು.ತಮ್ಮ ಸಂಘಟನೆ ಶಿಕ್ಷಕರ ಹಲವಾರು ಸಮಸ್ಯೆಗಳ ಕುರಿತು ಹಾಗೂ ಶಿಕ್ಷಕರಿಗೆ ಆದ ಅನ್ಯಾಯಗಳ ಕುರಿತು ಸತತ ಹೋರಾಟ ನಡೆಸಿದೆ. ಶಿಕ್ಷಕರ ಸಮಸ್ಯೆಗಳೇನು ಎಂಬುದನ್ನು ಶಿಕ್ಷಕರು ಅರಿಯಬೇಕು. ಜ. 31ರ `ಪ್ರಜಾವಾಣಿ~ಯ ಅಂತರಾಳ ಪುಟದಲ್ಲಿ  ಮಾಧ್ಯಮಿಕ ಶಿಕ್ಷಣ ಅಭಿಯಾನ ಅನುಷ್ಠಾನದಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಹಾಗೂ ಸರ್ಕಾರ ಪೂರ್ವ ತಯಾರಿ ಮಾಡಿಕೊಳ್ಳದೇ ಇರುವ ಬಗ್ಗೆ ವಿವಿರವಾಗಿ ಬರೆಯ ಲಾಗಿದ್ದು ಇದನ್ನು ಓದಬೇಕು ಎಂದರು.ಚುನಾವಣೆಯಲ್ಲಿ ತಮ್ಮ ವಿರುದ್ಧ ಕೆಲವರು ಇಲ್ಲಸಲ್ಲದ ಪ್ರಚಾರ ಮಾಡಿದ್ದಾರೆ. ಆರೋಪಗಳನ್ನು ಮಾಡುವಾಗ ಸರಿಯಾದ ಆರೋಪ ಮಾಡಬೇಕು ಎಂದ ಹೊರಟ್ಟಿ, ಅನುದಾನ ರಹಿತ ಶಿಕ್ಷಕರಿಗೆ ಅನುದಾನ ಬಿಡುಗಡೆಗಾಗಿ ಒತ್ತಾಯಿಸಿ ನಡೆಸಿರುವ ಹೋರಾಟಕ್ಕೆ ಮುಖ್ಯಮಂತ್ರಿಗಳು ಸ್ಪಂದಿಸಿ ಕೂಡಲೇ ಅನುದಾನ ಬಿಡುಗಡೆಗೆ ಮಾಡಬೇಕು ಎಂದರು.ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಬಿ. ಸಾವಜ್ಜಿಯವರ ಅಧ್ಯಕ್ಷತೆ ವಹಿಸಿದ್ದರು. ನಿವೃತ್ತ ಮುಖ್ಯ ಶಿಕ್ಷಕ ಎಲ್.ಬಿ. ತೆಂಬದ, ಕುಮಾರ ನಾಯ್ಕರ, ಪಿ.ಎಚ್.ಚಪ್ಪರದಹಳ್ಳಿ, ಆರ್.ಬಿ. ಹಂಜಿ, ಬಿ.ಎಸ್. ಚಿಕ್ಕಗೌಡ್ರ  ಉಪಸ್ಥಿತರಿದ್ದರು. ಯು.ಆರ್. ಪಾಟೀಲ ಸ್ವಾಗತಿಸಿದರು. ಆರ್.ಎಂ. ಡಮ್ಮಳ್ಳಿ ಪ್ರಾಸ್ತಾವಿಕ ಮಾತ ನಾಡಿದರು. ಜಿ.ಆರ್. ಕೆಂಚಕ್ಕನವರ ಹಾಗೂ ರಾಜು ಬೆಟ್ಟಳ್ಳೇರ ನಿರೂಪಿಸಿದರು. ಬಿ.ಐ. ಲೆಕ್ಕಪ್ಪಳವರ ವಂದಿಸಿದರು.

 

`ಅಭಿಯಾನ ಅನುಷ್ಠಾನಕ್ಕೆ ತರಾತುರಿ~

ಹಿರೇಕೆರೂರ:
ಯಾವುದೇ ಪೂರ್ವ ತಯಾರಿ ಇಲ್ಲದೇ ಮಾಧ್ಯಮಿಕ ಶಿಕ್ಷಣ ಅಭಿಯಾನ ಅನುಷ್ಠಾನ ಮಾಡಲು ಹೊರಟಿರುವ ರಾಜ್ಯ ಬಿಜೆಪಿ ಸರ್ಕಾರದ ಕ್ರಮ ತರಾತುರಿಯಿಂದ ಕೂಡಿದೆ ಎಂದು ಬಸವರಾಜ ಹೊರಟ್ಟಿ ಆತಂಕ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ದೇಶದಲ್ಲಿ ಏಕರೂಪದ ಶಿಕ್ಷಣ ಜಾರಿಗೆ ತರಬೇಕು ಎಂಬುದು ಕೇಂದ್ರ ಸರ್ಕಾರದ ನಿಲುವು. ಬರುವ ವರ್ಷದಿಂದ 1-5ನೇ ತರಗತಿಯವರೆಗೆ ಪ್ರಾಥಮಿಕ ಶಿಕ್ಷಣ ಎಂದು, 6-8ನೇ ತರಗತಿವರೆಗೆ ಮಾಧ್ಯಮಿಕ ಶಿಕ್ಷಣ ವೆಂದು, 9-12ನೇ ತರಗತಿವರೆಗೆ ಪ್ರೌಢ ಶಿಕ್ಷಣವೆಂದೂ ಕರೆಯಲಾಗು ವುದು.ಆದರೆ ಪ್ರಾಥಮಿಕ ಹಂತದಲ್ಲಿ ಶಿಕ್ಷಕರು ಹೆಚ್ಚುವರಿಯಾಗುವ, ಮಾಧ್ಯಮಿಕ ಮತ್ತು ಪ್ರೌಢ ಹಂತದಲ್ಲಿ ಬೋಧನೆ ಮಾಡಲು ಅರ್ಹ ಶಿಕ್ಷಕರ ಕೊರತೆ ಕಂಡು ಬರುವ ಸಾಧ್ಯತೆ  ಇದೆ. ಇದಕ್ಕೆ ಇಲಾಖೆ ಯಾವ ಸಿದ್ಧತೆ ಮಾಡಿ ಕೊಂಡಿದೆ ಎಂದು ತಿಳಿಯದಾಗಿದೆ ಎಂದರುಶಿಕ್ಷಣ ಸಚಿವರು ಈ ಪದ್ಧತಿಯನ್ನು ಜಾರಿ ಮಾಡುವುದಾಗಿ ಕೇವಲ ಪತ್ರಿಕಾ ಹೇಳಿಕೆಯನ್ನು ನೀಡಿದ್ದಾರೆ ಹೊರತು ಶಿಕ್ಷಕರ ಪ್ರತಿನಿಧಿಗಳನ್ನು, ಶಿಕ್ಷಣ ತಜ್ಞರನ್ನು, ವಿವಿಧ ಶಿಕ್ಷಣ ಸಂಘಟನೆ ಗಳನ್ನು ಕರೆದು ಇಲ್ಲಿಯವರೆಗೆ ಒಂದೂ ಸಭೆ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಸರ್ಕಾರ ಬಿಇಒಗಳ ಮೂಲಕ ಪ್ರಾಥಮಿಕ ಶಾಲೆಗಳಿಗೆ 7ನೇ ತರಗತಿಯ ವಿದ್ಯಾರ್ಥಿಗಳ ವರ್ಗಾವಣೆ ಪತ್ರ ನೀಡದೇ ಅಲ್ಲಿಯೇ 8 ತರಗತಿ ಪ್ರಾರಂಭಿಸುವಂತೆ ಸೂಚಿಸಿದೆ. ಕಾರಣ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದರು. ಇದರಿಂದ ಸಮಸ್ಯೆ ಇತ್ಯರ್ಥವಾಗುವಂತೆ ಕಾಣುತ್ತಿಲ್ಲ ಎಂದರು.ರಾಜ್ಯ ಬಿಜೆಪಿ ಸರ್ಕಾರ ಭ್ರಷ್ಟಾಚಾರ ದಲ್ಲಿ ಮುಳುಗಿದೆ. ಸರ್ಕಾರದಲ್ಲಿ ಹೊಂದಾಣಿಕೆ ಕಾಣುತ್ತಿಲ್ಲ, ಬಿಜೆಪಿಯಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದ್ದು, ಆಡಳಿತದ ಮೇಲೆ ದುಷ್ಟರಿಣಾಮ ಉಂಟಾಗಿದೆ. ಇದರಿಂದ ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಯಾವುದೇ ಪಕ್ಷಕ್ಕೆ ಸ್ಪಷ್ಟ ಬಹುಮತ ಬರಲು ಸಾಧ್ಯವಿಲ್ಲ ಎಂದು  ಬಸವರಾಜ ಹೊರಟ್ಟಿ  ಅಭಿಪ್ರಾಯಪಟ್ಟರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry