ಬುಧವಾರ, ಮೇ 18, 2022
25 °C

ಶಿಕ್ಷಕರ ಕಲಹ: ತಾ.ಪಂನಲ್ಲಿ ಅಸಮಾಧಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರೋಣ: ತಾಲ್ಲೂಕಿನ ಹಿರೇಹಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಪರಸ್ಪರ ಕಲಹದಲ್ಲಿ ತೊಡಗುವು ದರಿಂದ ಮಕ್ಕಳ ಪಾಠಕ್ಕೆ ತೊಂದರೆ ಉಂಟಾಗಿ ಕಲಿಕೆ ಕುಂಠಿತವಾಗಿದೆ ಎಂದು ತಾ.ಪಂ. ಅಧ್ಯಕ್ಷ ಹಿರೇಹಾಳ ತಾ.ಪಂ.ಸದಸ್ಯ ಶಿವಕುಮಾರ ಸಾಲಮನಿ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರಿದರು. ಇಲ್ಲಿಯ ತಾ.ಪಂ. ಸಭಾಭವನದಲ್ಲಿ ಈಚೆಗೆ ಜರುಗಿದ ತಾಲ್ಲೂಕು ಪಂಚಾಯ್ತಿ ಮೊದಲ ಸಭೆಯಲ್ಲಿ  ಅವರು ಈ ಆರೋಪ ಮಾಡಿದರು.ವಿವಿಧ ಇಲಾಖೆಗಳಿಗೆ ಸಂಬಂಧಿಸಿ  ಚರ್ಚೆಯಲ್ಲಿ ಭಾಗವಹಿಸಿ ಸದಸ್ಯರು ಮಾತನಾಡಿದಾಗ ಹಿರೇಹಾಳ ತಾ.ಪಂ. ಸದಸ್ಯರು ಕೇಳಿದ ಪ್ರಶ್ನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಎಸ್.ಗುಡ್ಲಾನೂರ ಉತ್ತರಿಸಿ,  ಕಲಹ ಉಂಟುಮಾಡಿದ ಶಿಕ್ಷಕರಿಗೆ ಕಾರಣ ಕೇಳಿ ನೋಟಿಸ್ ನೀಡಲಾಗಿದ್ದು ಅವರ ವಾರ್ಷಿಕ ಬಡ್ತಿಯನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದರು.ಉಪಾಧ್ಯಕ್ಷ ಶಿವಕುಮಾರ ನೀಲಗುಂದ ಮಾತನಾಡಿ, ‘ಮೆಣಸಗಿ ಗ್ರಾಮದ ಪ್ರೌಢಶಾಲೆಯಲ್ಲಿ ಆಡಳಿತ ಮಂಡಳಿಯ ಭಿನ್ನಾಭಿಪ್ರಾಯಗಳಿಂದ ಐವರು ಶಿಕ್ಷಕರಿಗೆ ಪ್ರತಿ ತಿಂಗಳು ನಿಯಮಿತವಾಗಿ ವೇತನ ದೊರಕದೆ ಸಮಸ್ಯೆ ಉಂಟಾಗಿದೆ ಸಮಸ್ಯೆಯನ್ನು ಕೂಡಲೇ ನಿವಾರಿಸಬೇಕು ಎಂದು ಆಗ್ರಹಿಸಿದರು. ಜಿ.ಪಂನಿಂದ ಅನುದಾನ ಬಿಡುಗಡೆ ಯಾಗುವುದು ವಿಳಂಬವಾಗುವುದ ರಿಂದ ವೇತನ ಬಟಾವಡೆಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಸಮಸ್ಯೆಯನ್ನು ಶೀಘ್ರದಲ್ಲಿ  ಪರಿಹರಿಸುವುದಾಗಿ ಅಧಿಕಾರಿಗಳು ತಿಳಿಸಿದರು.ಹುನಗುಂಡಿ ಸದಸ್ಯ ಜಂಗಣ್ಣವರ ಹಾಗೂ ಮುಶಿಗೇರಿ ತಾ.ಪಂ. ಸದಸ್ಯ ರಾಮಪ್ಪ ಚವ್ಹಾಣ ಮಾತನಾಡಿದರು. ಯೋಜನೆಯಡಿ ಹೊಲಗಳಿಗೆ ಒಡ್ಡು, ಬದು ಕೃಷಿ ಹೊಂಡಗಳ ನಿರ್ಮಾಣ ಕಾರ್ಯಗಳನ್ನು ಕೈಗೊಳ್ಳಲಾಗುವುದು. ತಾಲ್ಲೂಕಿನ 14 ಗ್ರಾ.ಪಂ. ವ್ಯಾಪ್ತಿಯಲ್ಲಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆ ಕಾರ್ಯಕ್ರಮಗಳು ಜಾರಿಯಲ್ಲಿವೆ ಪ್ರಸ್ತುತ ಕೂಲಿಕಾರರ ಕೊರತೆಯಿಂದಾಗಿ ಕಾಮಗಾರಿಗಳು ನಿಧಾನ ಗತಿಯಲ್ಲಿ ಸಾಗುತ್ತಿವೆ ಎಂದು ಸಭೆಗೆ ತಿಳಿಸಲಾಯಿತು.ಶಿವಕುಮಾರ ಸಾಲಮನಿ  ಅಧ್ಯಕ್ಷತೆ ವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.