ಗುರುವಾರ , ನವೆಂಬರ್ 14, 2019
19 °C

ಶಿಕ್ಷಕರ ಕೊರತೆ ನೀಗಿಸದ ಅಧಿಕಾರಿ: ಶಿಕ್ಷಣ ವಂಚಿತ ಮಕ್ಕಳು

Published:
Updated:

ಹಟ್ಟಿ ಚಿನ್ನದ ಗಣಿ: ಸರ್ಕಾರ ಶಿಕ್ಷಣದ ಹಕ್ಕು ಜಾರಿಗೊಳಿಸಿದರೂ ಇಲ್ಲಿಗೆ ಸಮೀಪದ ಗೌಡೂರು ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ಕೊರತೆ ಸೇರಿದಂತೆ ಮೂಲಭೂತ ಸೌಕರ್ಯಗಲ್ಲಿಲ್ಲದೆ ಮಕ್ಕಳು ಪರದಾಡುತ್ತಿದ್ದಾರೆ.ಈ 450 ಜನ ಮಕ್ಕಳ ಹೊಂದಿದೆ. ಇವರಿಗೆ ಪಾಠ ಮಾಡಲು ಕೇವಲ 6 ಜನ ಶಿಕ್ಷಕರಿದ್ದರು ಇವರಲ್ಲಿ ಒಬ್ಬರು ನಿಯೋಜನೆ ಮೇಲೆ ಬಂದಿದ್ದರು. ಅವರು ಮರಳಿ ತಮ್ಮ ಶಾಲೆಗೆ ಹೋಗಿದ್ದಾರೆ. ಈಗ ಸದ್ಯ 5 ಜನ ಶಿಕ್ಷಕರು ಮಾತ್ರ ಇದ್ದಾರೆ. ಹಿಂದಿ, ವಿಜ್ಞಾನ ಮತ್ತು ದೈಹಿಕ ಶಿಕ್ಷಕರ ಕೊರತೆ ಇದೆ.  ಈ ಕುರಿತು ಕ್ಷೇತ್ರ ಶಿಕ್ಷಣಾಧಿಕಾರಿ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ವಿಷಯ ಮತ್ತು ದೈಹಿಕ ಶಿಕ್ಷಕರಿಲ್ಲದೇ ಮಕ್ಕಳು ಗುಣ ಮಟ್ಟದ ಶಿಕ್ಷಣದ ಜೊತೆ ಆಟೋಟಗಳಿಂದ ವಂಚಿತರಾಗುತ್ತಿದ್ದಾರೆ ಎಂದು ಗ್ರಾಮಸ್ಥರ ದೂರಾಗಿದೆ.ಇಷ್ಟು ಜನ ಮಕ್ಕಳ ಸಂಖ್ಯೆ ಹೊಂದಿರುವ ಶಾಲೆಗೆ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಕ್ಕಳು ಮನೆಯಿಂದ ಬಾಟಲಿಗಳಲ್ಲಿ ನೀರು ತುಂಬಿಕೊಂಡು ಬರಬೇಕು. ಶಾಲಾ ಆಡಳಿತ ಪರ್ಯಾಯ ವ್ಯವಸ್ಥೆ ಮಾಡದೆ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದೆ. ಎಲ್ಲ ಶಾಲೆಗಳಲ್ಲಿ ಮಕ್ಕಳಿಗಾಗಿ ಕಡ್ಡಾಯವಾಗಿ ಶೌಚಾಲಯ ವ್ಯವಸ್ಥೆ ಒದಗಿಸಿ ಕೊಡಬೇಕೆಂದು ಸುಪ್ರಿಂ ಕೋರ್ಟ್‌ನ ಆದೇಶವಿದೆ.  ಈ ಶಾಲೆಯಲ್ಲಿ ಕೋರ್ಟ್ ಆದೇಶವನ್ನು ಉಲ್ಲಂಘಿ ಸಲಾಗಿದೆ.  2010-11ನೇ ಸಾಲಿನ ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಮಂಜೂರಾದ ಶೌಚಾಲಯಕ್ಕೆ ಎರಡು ಬಾಗಲಿಗಳು ಮಾತ್ರ ಕೂಡಿಸಿ ಕಾಮಗಾರಿ ಅರ್ಧಕ್ಕೆ ಬಿಡಲಾಗಿದೆ ಎಂದು ರಾಚಯ್ಯ ಸ್ವಾಮಿ, ಸೂಗುರು ಮಾಸ್ತರ್ ಹೇಳುತ್ತಾರೆ.ಆತಂಕದಲ್ಲಿ ಮಕ್ಕಳು: ಶಾಲಾ ಆವರಣದಲ್ಲಿರುವ ನೀರಿನ ತೊಟ್ಟಿ ಸುಮಾರು ಮೂರು ದಶಕ ಹಳೆಯದಾಗಿದೆ. ಇದು ಸಂಪೂರ್ಣ ಶಿಥಿಲಗೊಂಡಿದೆ. ಆತಂಕದಲ್ಲಿ ಮಕ್ಕಳು ಪಾಠ ಕಲಿಯುವಂತಾಗಿದೆ ಎಂದು ಹೇಳಿದರು. ಸಂಬಂಧಿಸಿದ ಶಿಕ್ಷಣ ಅಧಿಕಾರಿಗಳು ಈ ಶಾಲೆಗೆ ಮೂಲ ಸೌಲಭ್ಯಗಳನ್ನು ಒದಗಿಸುವ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದ್ದಾರೆ.ಜಿಲ್ಲಾ ನೇಕಾರರ ಸಮುದಾಯ ಒಕ್ಕೂಟಕ್ಕೆ ಬಿಜ್ಜಳ

ಮಸ್ಕಿ: ದೇವಾಂಗ, ಕುರುವಿನಶೆಟ್ಟಿ, ಪದ್ಮಸಾಲಿ, ಸ್ವಕುಳಸಾಲಿ, ತೋಟವೀರ ಸಮಾಜದ ಮುಖಂಡರು ಭಾನುವಾರ ಇಲ್ಲಿಯ ದೇವಾಂಗ ಸಮಾಜದಲ್ಲಿ ಸಭೆ ಸೇರಿ ಜಿಲ್ಲಾ ನೇಕಾರರ ಸಮುದಾಯಗಳ ಒಕ್ಕೂಟದ ಅಧ್ಯಕ್ಷರನ್ನಾಗಿ ಮಸ್ಕಿಯ ದೇವಾಂಗ ಸಮಾಜದ ಮುಖಂಡ ಮಂಜುನಾಥ ಬಿಜ್ಜಳ ಅವರನ್ನು ನೇಮಕ ಮಾಡಿದ್ದಾರೆ.ಒಕ್ಕೂಟದ ಉಳಿದ ಪದಾಧಿಕಾರಿಗಳನ್ನು ಸಹ ಇದೇ ಸಂದರ್ಭದಲ್ಲಿ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾಪತ್ರಿಕಾ ಕಾರ್ಯದರ್ಶಿ ದೇವೇಂದ್ರಪ್ಪ ಮೇದಕೇರಿ ತಿಳಿಸಿದ್ದಾರೆ.ಶಿವಶಂಕ್ರಪ್ಪ ಹಳ್ಳಿ ಮಸ್ಕಿ (ಗೌರವಾಧ್ಯಕ್ಷ), ಕೆ. ಎಸ್. ರವಿಕುಮಾರ ರಾಯಚೂರು (ಕಾರ್ಯಧ್ಯಕ್ಷ), ಶಿವರಾಜ ಅಕ್ಕಿಕಲ್ ದೇವದುರ್ಗ, ಎಚ್.ಟಿ. ಪ್ರಕಾಶ (ಉಪಾಧ್ಯಕ್ಷ),  ಯಮನಪ್ಪ ದೇವರಡ್ಡಿ ಮಸ್ಕಿ (ಪ್ರಧಾನ ಕಾರ್ಯದರ್ಶಿ), ಶ್ರೀಧರ ಕೊಡಕುಂದಿ ಮಸ್ಕಿ (ಕಾರ್ಯದರ್ಶಿ), ರಮೇಶ ರುಮಾಲದ (ಸಹ ಕಾರ್ಯದರ್ಶಿ), ಲಿಂಗರಾಜ ಸಾಮಲ್, ಮನೋಹರ ಕಾಂಬಳೆ, ಅಮರೇಶ ಹೆಂಬಾ, (ಸಂಘಟನಾ ಕಾರ್ಯದರ್ಶಿ), ವೀರುಪಾಕ್ಷಪ್ಪ ಪರಕಾಳಿ (ಖಜಾಂಚಿ), ದೇವೇಂದ್ರಪ್ಪ ಮೆದಕೇರಿ (ಜಿಲ್ಲಾ ಪತ್ರಿಕಾ ಕಾರ್ಯದರ್ಶಿ), ಶಂಕ್ರಪ್ಪ ಕೊಂಡಕುಂದಿ ನಿವೃತ್ತ ಸರ್ಕಾರಿ ಅಭಿಯೋಜಕರು ಮಸ್ಕಿ (ಕಾನೂನು ಸಲಹೆಗಾರರು)

ಪ್ರತಿಕ್ರಿಯಿಸಿ (+)