ಶಿಕ್ಷಕರ ಥಳಿತದಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಸಾವು

7

ಶಿಕ್ಷಕರ ಥಳಿತದಿಂದ ಗಾಯಗೊಂಡಿದ್ದ ವಿದ್ಯಾರ್ಥಿ ಸಾವು

Published:
Updated:

ಭೂಪಾಲ್ (ಪಿಟಿಐ):  ಬೆತುಲ್ ಜಿಲ್ಲೆಯ ಪಾಥಕೇಡಾ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯ 4ನೇ ತರಗತಿಯ ವಿದ್ಯಾರ್ಥಿಯೊಬ್ಬ ಇಬ್ಬರು ಶಿಕ್ಷಕರ ಥಳಿತದಿಂದ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟಿರುವ ಘಟನೆ ಬುಧವಾರ ನಡೆದಿದೆ.

ನವೆಂಬರ್ 16 ರಂದು ಶಿಕ್ಷಕರಾದ  ಬಿರ್ಜು ಕುಮಾರ್ ಸೊನಾರಿಯ ಹಾಗೂ ವಿಜಯ್ ರಾಮ್ ಭಾಗತ್ ಅವರ ಥಳಿತದಿಂದಾಗಿ ತೀವ್ರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ  4ನೇ ತರಗತಿ ವಿದ್ಯಾರ್ಥಿ 10 ವಯಸ್ಸಿನ ಅಸ್ಲಂ ಅನ್ಸಾರಿ ಬುಧವಾರ ಮೃತಪಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದರು.ಘಟನೆಯ ನಂತರ  ಬಿರ್ಜು ಕುಮಾರ್ ನನ್ನು ಬಂಧಿಸಲಾಗಿದೆ ಮತ್ತೊಬ್ಬ ಅರೋಪಿ ತಲೆಮರಿಸಿಕೊಂಡಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ. 

ಶಾಲೆಯಲ್ಲಿ ಬಕೆಟ್ ಒಡೆದು ಹಾಕಿದ ಘಟನೆಯೊಂದಕ್ಕೆ ಸಂಬಂಧಪಟ್ಟಂತೆ ಶಿಕ್ಷಕರು ಅಸ್ಲಂನನ್ನು ಥಳಿಸಿದ್ದರು ಎನ್ನಲಾಗಿದೆ.

ತೀವ್ರವಾಗಿ ಗಾಯಗೊಂಡಿದ್ದ ಅಸ್ಲಂನನ್ನು ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚೇತರಿಸಿಕೊಳ್ಳದ ಕಾರಣ ಆತನನ್ನು ನಂತರ ಹಮೀದಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಅಸ್ಲಂ ಪೋಷಕರು ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry