ಭಾನುವಾರ, ಏಪ್ರಿಲ್ 11, 2021
28 °C

ಶಿಕ್ಷಕರ ನಡುವೆ ತಾರತಮ್ಯವೇ?

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆಯ ಶಿಕ್ಷಕರಿಗೆ ಪ್ರಸಕ್ತ ವರ್ಷದಿಂದ ಜಾರಿಗೆ ಬರುವಂತೆ ಇಲಾಖೆ ವತಿಯಿಂದ ವಿಶೇಷ ಭತ್ಯೆಯನ್ನಾಗಿ ಕ್ರಮವಾಗಿ ರೂ.300, ರೂ.400 ಹಾಗೂ ರೂ.500 ಗಳನ್ನು ಘೋಷಿಸಿರುವುದು ಸ್ವಾಗತಾರ್ಹ.ಆದರೆ ಈ ಭತ್ಯೆಯನ್ನು ಪಡೆಯುವಲ್ಲಿ ವಿಧಿಸಿರುವ ಷರತ್ತುಗಳು ಆಘಾತಕಾರಿ. ಏಕೆಂದರೆ ಪ್ರಾಥಮಿಕ, ಪ್ರೌಢ, ಹಾಗೂ ಪದವಿಪೂರ್ವ ಶಿಕ್ಷಣ ಶಿಕ್ಷಕರಿಗೆ ಮೂಲವೇತನದಲ್ಲಾದ ವ್ಯತ್ಯಾಸವನ್ನು ಸರಿದೂಗಿಸುವ ಸಲುವಾಗಿ ವಿಶೇಷಭತ್ಯೆ ನೀಡುತ್ತಿದ್ದುದಾಗಿ ನಾವೆಲ್ಲರೂ ಭಾವಿಸಿದ್ದೆವು.ಈ ಭತ್ಯೆ ಪಡೆಯುವ ಫಲಾನುಭವಿ ಶಿಕ್ಷಕರುಗಳು ಆಗಸ್ಟ್ 1,2008ರ ಒಳಗೆ ನೇಮಕಗೊಂಡಿರಬೇಕಾಗಿ ಆದೇಶ ಹೊರಡಿಸಿರುವುದು ಅವೈಜ್ಞಾನಿಕ ಕ್ರಮವಾಗಿರುವುದರಲ್ಲಿ ಆಶ್ಚರ್ಯವಿಲ್ಲ. ವೇತನ ತಾರತಮ್ಯ ನಿವಾರಣೆಗಾಗಿ ಪ್ರತಿಭಟನೆ ಮಾಡುತ್ತಿದ್ದ ಶಿಕ್ಷಕರುಗಳನ್ನು ಓಲೈಸುವ ಸಲುವಾಗಿ, 6ನೇ ವೇತನ ಆಯೋಗದಲ್ಲಿ ಎಲ್ಲವನ್ನೂ ಸರಿಪಡಿಸುವುದಾಗಿ ಹುಸಿ ಭರವಸೆ ನೀಡಿ ಈಗ ವಿಶೇಷ ಭತ್ಯೆ ಸೌಲಭ್ಯವನ್ನು  ಕೆಲವೇ ಶಿಕ್ಷಕರಿಗೆ ಈ ಭತ್ಯೆ ಪಡೆಯಲು ಅನುಕೂಲ ಮಾಡಿಕೊಟ್ಟಿರುವ  ಔಚಿತ್ಯವಾದರೂ ಏನು?

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.