ಶಿಕ್ಷಕರ ನಿಯೋಜನೆ ಭರವಸೆ

7

ಶಿಕ್ಷಕರ ನಿಯೋಜನೆ ಭರವಸೆ

Published:
Updated:

ಚಿಂಚೋಳಿ: ಶಿಕ್ಷಕ ಮಂಜುನಾಥ ಆತ್ಮಹತ್ಯೆಯಿಂದ ಇತರ ಶಿಕ್ಷಕರು ಪೊಲೀಸರ ಅತಿಥಿಯಾದ ಪರಿಣಾಮವಾಗಿ ಭಣಗುಡುತ್ತಿರುವ ತಾಲ್ಲೂಕಿನ ಕಲ್ಲೂರು ರೋಡ್ ಸರ್ಕಾರಿ ಪ್ರೌಢ ಶಾಲೆಗೆ ಶೀಘ್ರವೇ ಬೇರೆ ಶಾಲೆಗಳಿಂದ ವಿಷಯ ಶಿಕ್ಷಕರನ್ನು ನಿಯೋಜಿಸುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಅಮೃತರಾವ್ ಬಸಗುಂಡೆ ಪ್ರಜಾವಾಣಿಗೆ ತಿಳಿಸಿದ್ದಾರೆ.ಗುರುವಾರ ಶಾಲೆಗೆ ಭೇಟಿ ನೀಡಿ ಆತ್ಮಹತ್ಯೆ ಮಾಡಿಕೊಂಡ ಶಿಕ್ಷಕ ಮಂಜುನಾಥ ಹಾಗೂ ನ್ಯಾಯಾಂಗ ಬಂಧನದಲ್ಲಿರುವ ಶಿಕ್ಷಕರ ಬಗ್ಗೆ ಮಾಹಿತಿ ಸಂಗ್ರಹಿಸಿ ಮಾತನಾಡಿದರು.ಶಿಕ್ಷಕರ ಸೇವಾ ವಿವರ, ಮಕ್ಕಳ ಸಂಖ್ಯೆ ಹಾಗೂ ವಿದ್ಯಾಭ್ಯಾಸ ನೇಮಕಾತಿಗೆ ಸಂಬಂಧ ಪಟ್ಟಂತೆ ಮಾಹಿತಿ ಸಂಗ್ರಹಿದರು. ಚಿಂಚೋಳಿ(ಚಂದಾಪುರ) ಬಾಲಕರ ಹಾಗೂ ಚಿಂಚೋಳಿ ಕನ್ಯಾ ಪ್ರೌಢ ಶಾಲೆಗಳಿಂದ ತಲಾ ಒಬ್ಬ ಶಿಕ್ಷಕರನ್ನು ವಾರದಲ್ಲಿ ಮೂರು ಅಲ್ಲಿ, ಮೂರು ದಿನ ಕಲ್ಲೂರು ರೋಡ್ ಶಾಲೆಯಲ್ಲಿ ಪಾಠ ಮಾಡುವಂತೆ ಸೂಚಿಸಿ ನಿಯೋಜಿಸುವುದಾಗಿ ತಿಳಿಸಿದ್ದಾರೆ.ಉಪ ನಿರ್ದೇಶಕರು ಹಲವು ಮಾಹಿತಿಗಳನ್ನು ಕೇಳಿದ್ದಾರೆ. ಹೀಗಾಗಿ ತಾವು ಪ್ರೌಢ ಶಾಲೆ ಹಾಗೂ ಪ್ರಾಥಮಿಕ ಶಾಲೆಗಳಲ್ಲಿ ಅಗತ್ಯ ಮಾಹಿತಿ ಸಂಗ್ರಹಿಸುತ್ತಿರುವುದಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ತಿಳಿಸಿದರು.ಶಿಕ್ಷಣ ಸಂಯೋಜಕ ದೇವೇಂದ್ರಪ್ಪ ಹೋಳ್ಕರ್, ಸಿಆರ್‌ಪಿ ಮಹಿಬೂಬ ಅಲಿ ಪಟೇಲ್, ಸಿರಾಜೋದ್ದಿನ್, ಪ್ರಾಥಮಿಕ ಶಾಲೆಯ ಮುಖ್ಯಗುರು ವೀರಶೆಟ್ಟಿ ಸೊಂತ ಅವರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry