ಶಿಕ್ಷಕರ ನೇಮಕಕ್ಕೆ ಆಗ್ರಹ

7

ಶಿಕ್ಷಕರ ನೇಮಕಕ್ಕೆ ಆಗ್ರಹ

Published:
Updated:

ಶಿಡ್ಲಘಟ್ಟ: ತಾಲ್ಲೂಕಿನ ಮಳಮಾಚನ­ಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶಾಲೆ ಪ್ರಾರಂಭವಾಗಿ ಮೂರು ತಿಂಗಳಾ­ದರೂ ಆಂಗ್ಲ ಭಾಷೆ ಬೋಧಿಸಲು ಶಿಕ್ಷಕ­ರನ್ನು ನಿಯೋಜಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರು ಬುಧವಾರ ಶಾಲೆಗೆ ಬೀಗ ಹಾಕಿ, ಪ್ರತಿಭಟಿಸಿದರು.ಮುಖ್ಯ ಶಿಕ್ಷಕರಿಗೆ ಈ ಬಗ್ಗೆ ನಾಲ್ಕಾರು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಶಿಕ್ಷಕ­ರಿಲ್ಲದೆ ಮಕ್ಕಳಿಗೆ ಪಾಠ ನಡೆಯದೆ ತೊಂದರೆಯಾಗಿದೆ. ಸರ್ಕಾರಿ ಶಾಲೆ­ಗಳಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಸರ್ಕಾರ ಹಲವಾರು ಸೌಲಭ್ಯ­ಗಳನ್ನು ನೀಡುತ್ತಿರುವುದಾಗಿ ಹೇಳು­ತ್ತಾರೆ. ಆದರೆ ಗ್ರಾಮಗಳಲ್ಲಿ ಸೌಲಭ್ಯ ಸಿಗದೆ ಖಾಸಗಿ ಶಾಲೆಗಳತ್ತ ಮಕ್ಕಳು ಹೋಗುವಂತಾಗಿದೆ ಎಂದು ಗ್ರಾಮ­ಸ್ಥರು ಆರೋಪಿಸಿದರು.ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನು ಸಂಪರ್ಕಿ­ಸಿ­ದಾಗ ಇದು ನಮ್ಮ ವ್ಯಾಪ್ತಿಗೆ ಬರು­ವುದಿಲ್ಲ. ಮೇಲಧಿಕಾರಿಗಳಿಗೆ ತಿಳಿಸು­ತ್ತೇನೆ ಎಂದು ಹೇಳುತ್ತಾರೆ. ಪ್ರತಿ­ಯೊಬ್ಬರೂ ತಮ್ಮ ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಶಾಲೆಗೆ ಆಂಗ್ಲ ಭಾಷೆ ಬೋಧಿಸಲು ಶಿಕ್ಷರನ್ನು ನಿಯೋಜಿಸುವವರೆಗೂ ನಾವು ಪ್ರತಿ­ಭಟನೆ ನಿಲ್ಲಿಸೆವು ಎಂದು ತಿಳಿಸಿದರು.ಅಶೋಕ್‌, ಸುನಿಲ್‌, ಸುಧಾಕರ್‌, ನವೀನ್‌, ಬೈರೇಗೌಡ, ಮಾರೇಗೌಡ ಮತ್ತಿ­ತರರು ಪಾಲ್ಗೊಂಡಿ­ದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry