ಬುಧವಾರ, ಏಪ್ರಿಲ್ 21, 2021
30 °C

ಶಿಕ್ಷಕರ ನೇಮಕಕ್ಕೆ ಮುಂದಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಾಲೆಗಳಲ್ಲಿ ಕೊರತೆ ಇರುವ 20,000 ಪ್ರಾಥಮಿಕ ಶಾಲಾ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ತಯಾರಿಲ್ಲ.ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 82 ಸಾವಿರ ಶಿಕ್ಷಕರು ಇರಬೇಕಾಗಿದ್ದು ಈಗ ಕೇವಲ 62,000 ಶಿಕ್ಷಕರು ಮಾತ್ರ ಇದ್ದಾರೆ. ಆದರೆ ಈ ನಮ್ಮ ಸರ್ಕಾರ ಅತಿಥಿ ಶಿಕ್ಷಕರನ್ನು ನೇಮಕಾತಿ ಮಾಡುವುದಾಗಿ ಹೇಳುತ್ತಿದೆ.  ಹಿಂದಿನ ಮೂರು ವರ್ಷಗಳಿಂದ ಶಿಕ್ಷಕರ ನೇಮಕಾತಿಯೇ ಆಗಿಲ್ಲ.

 

ಆದ್ದರಿಂದ ಈಗ ಈ ನಮ್ಮ ರಾಜ್ಯದಲ್ಲಿ ಕೊರತೆ ಇರುವಂಥ 20,000 ಪ್ರಾಥಮಿಕ ಶಿಕ್ಷಕರನ್ನು ಖಾಯಂ ನೇಮಕಾತಿ ಮಾಡಿಕೊಳ್ಳಬೇಕೆಂದು ಒತ್ತಾಯಿಸುತ್ತಿದ್ದೇವೆ ಮತ್ತು ಈಗ ಡಿ.ಇಡಿ. ಟ್ರೀನಿಂಗ್ ಮಾಡಿಕೊಂಡು ಖಾಸಗಿ ಶಾಲೆಗಳಲ್ಲಿ ಬೋಧನೆ ಮಾಡುವಂಥ ಶಿಕ್ಷಕರಿಗೆ ಕೇವಲ 1500 ರಿಂದ 2500 ರೂ.ಗಳ ವೇತನ ನೀಡುತ್ತಿದ್ದು ಜೀತದ ಆಳುಗಳಂತೆ ದುಡಿಸಿಕೊಳ್ಳುತ್ತಿದ್ದಾರೆ.ಆದರೆ ಸರ್ಕಾರ ಖಾಸಗಿ ಶಾಲೆ ಶಿಕ್ಷಕರಿಗೆ ರೂ. 6,000/-ಗಳ ವೇತನ ಕೊಡಬೇಕೆಂಬ ಕಾನೂನು ಇದ್ದರೂ ಕೂಡ ಯಾವ ಶಿಕ್ಷಣ ಸಂಸ್ಥೆಗಳು ಈ ವೇತನ ಕೊಡುತ್ತಿಲ್ಲ. ಆದ್ದರಿಂದ ಸರ್ಕಾರ ಈ ಖಾಸಗಿ ಶಿಕ್ಷಣ ಶಾಲೆಗಳಲ್ಲಿರುವ ಶಿಕ್ಷಕರಿಗೆ ಕನಿಷ್ಠ 6 ಸಾವಿರ ರೂಪಾಯಿ ವೇತನ ನೀಡುವಂತೆ ಆದೇಶ ಹೊರಡಿಸಬೇಕು. ಆ ವೇತನ ಕೊಡಲಾರದ ಶಿಕ್ಷಣ ಸಂಸ್ಥೆಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು.   -ಎಸ್.ಪಿ. ನಾಯಕ,ಚಿತ್ರದುರ್ಗ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.