ಶಿಕ್ಷಕರ ನೇಮಕಾತಿ ಪರೀಕ್ಷೆ ಉತ್ತರಗಳನ್ನು ಸರಿಪಡಿಸಿ

7

ಶಿಕ್ಷಕರ ನೇಮಕಾತಿ ಪರೀಕ್ಷೆ ಉತ್ತರಗಳನ್ನು ಸರಿಪಡಿಸಿ

Published:
Updated:

ಸರ್ಕಾರಿ ಪ್ರೌಢಶಾಲೆಗಳಲ್ಲಿ ಸಹಶಿಕ್ಷಕರ ನೇಮಕಾತಿಗಾಗಿ ಶಿಕ್ಷಣ ಇಲಾಖೆಯು ಜುಲೈ ತಿಂಗಳಲ್ಲಿ ನೇಮಕಾತಿ ಪರೀಕ್ಷೆ ನಡೆಸಿ, ವಿಷಯವಾರು ಸರಿ ಉತ್ತರಗಳನ್ನು ಪ್ರಕಟಿಸಿತು. ಅದರಲ್ಲಿಯ ಹಲವಾರು ದೋಷಗಳ ಕುರಿತಂತೆ ಅಭ್ಯರ್ಥಿಗಳು ಸೂಕ್ತ ದಾಖಲೆಗಳೊಂದಿಗೆ ಆಕ್ಷೇಪಣೆ ಸಲ್ಲಿಸಿದ್ದರೂ. ಆದರೆ `ಪರಿಷ್ಕೃತ ಸರಿಉತ್ತರ ಪಟ್ಟಿ~ಯಲ್ಲಿಯೂ ಕೆಲವೊಂದು ದೋಷಗಳು ಹಾಗೆಯೇ ಉಳಿದಿವೆ.ಕನ್ನಡ ಭಾಷಾ ಪತ್ರಿಕೆಯಲ್ಲಿ  `ಅಗಸ~  ಪದದ ಸ್ತ್ರೀವಾಚಕ ರೂಪ  `ಅಗಸಿತಿ~  ಎಂದು ಪ್ರಕಟಿಸಿದ್ದಾರೆ. ಆದರೆ ಖ್ಯಾತ ವಿದ್ವಾಂಸರಾದ ತೀ.ನಂ.ಶ್ರಿಕಂಠಯ್ಯನವರು  ಕನ್ನಡ ಮಧ್ಯಮ ವ್ಯಾಕರಣ  (ಮುದ್ರಣ-2008 ಪು.ಸಂ.- 33)ದಲ್ಲಿ  `ಅಗಸಗಿತ್ತಿ~  ಎಂದು ಹೇಳಿದ್ದಾರೆ.

 

ಹಾಗೆಯೇ  ಅರ್ಥ ಶ್ಲೇಷೆ ಅಲಂಕಾರ  ಎಂದರೆ ಒಂದೇ ಪದಕ್ಕೆ ನಾಲ್ಕಾರು ಅರ್ಥಗಳು ಹೊರಡುವಂತೆ ಹೇಳುವುದು ಎಂಬ ಉತ್ತರವೂ ಸರಿಯಾಗಿದೆ (10ನೇ ತರಗತಿ ಕನ್ನಡ ಪಠ್ಯ ಪುಸ್ತಕದ ಪ್ರಕಾರ). ಕಾರಣ ಈ ದೋಷಗಳನ್ನು ಸರಿಪಡಿಸಿ ಆಯ್ಕೆ ಪಟ್ಟಿ ಪ್ರಕಟಿಸಬೇಕೆಂಬುದು ನಿರುದ್ಯೋಗಿ ಶಿಕ್ಷಕರ ಆಶಯವಾಗಿದೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry