ಶಿಕ್ಷಕರ ನೇಮಕಾತಿ ಮಾದರಿ ಪರೀಕ್ಷೆ

ಮಂಗಳವಾರ, ಜೂಲೈ 16, 2019
28 °C

ಶಿಕ್ಷಕರ ನೇಮಕಾತಿ ಮಾದರಿ ಪರೀಕ್ಷೆ

Published:
Updated:

ಗುಲ್ಬರ್ಗ: ಇಲ್ಲಿನ ಜ್ಞಾನಜ್ಯೋತಿ ಕರಿಯರ್ ಆಕಾಡೆಮಿಯು ಪ್ರೌಢಶಾಲಾ ಶಿಕ್ಷಕರ ನೇಮಕಾತಿಗಾಗಿ ಉಚಿತ ಕಾರ್ಯಾಗಾರ ಮತ್ತು ಮಾದರಿ ಪರೀಕ್ಷೆಯನ್ನು ನಗರದ ಕನ್ನಡ ಭವನದಲ್ಲಿ ಸೋಮವಾರ ಹಮ್ಮಿಕೊಂಡಿತ್ತು.ಅಕಾಡೆಮಿ ನಿರ್ದೇಶಕ ಎನ್.ಎಸ್. ಹಿರೇಮಠ ಅವರು ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಎದುರಿಸುವ ಕುರಿತು ಮಾಹಿತಿ ನೀಡಿದರು. ಸುಮಾರು 600ಕ್ಕೂ ಹೆಚ್ಚು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.ಪಾಲಿಕೆಯ ಮೇಯರ್ ಸೋಮಶೇಖರ ಮೇಲಿನಮನಿ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಹಿಪಾಲರೆಡ್ಡಿ ಮನ್ನೂರ್, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ವಿದ್ಯಾಸಾಗರ ಕುಲಕರ್ಣಿ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಉಪನ್ಯಾಸಕರಾದ ರಾಜು,ಗುಂಡಪ್ಪ, ರಾಜು ಪೂಜಾರಿ, ಮಲ್ಲು ಮೊದಲಾದವರು ಇದ್ದರು.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry