ಶಿಕ್ಷಕರ ಸಮಸ್ಯೆಗೆ ಪರಿಹಾರ ಸೂಚಿಸಿ

7

ಶಿಕ್ಷಕರ ಸಮಸ್ಯೆಗೆ ಪರಿಹಾರ ಸೂಚಿಸಿ

Published:
Updated:

ಕರ್ನಾಟಕದಲ್ಲಿ ಸರ್ಕಾರಿ ಶಾಲೆಗಳ ಜೊತೆಗೆ ಸಾವಿರಾರು ಅನುದಾನಿತ ಕನ್ನಡ ಶಾಲೆಗಳಿವೆ. ಶಿಕ್ಷಣ ಸಚಿವರು  ಕೇವಲ ಸರ್ಕಾರಿ ಶಾಲೆಗಳ ಅಭಿವೃದ್ಧಿ ಬಗ್ಗೆ ಗಮನಹರಿಸುತ್ತ ಅನುದಾನಿತ ಶಾಲೆಗಳನ್ನು ಕಡೆಗಣಿಸಿದ್ದಾರೆ.

 

ಶಿಕ್ಷಣ ಸಚಿವರ ಕಾರ್ಯವ್ಯಾಪ್ತಿ  ಕೇವಲ ಸರ್ಕಾರಿ ಶಾಲೆಗಳಿಗೆ ಸೀಮಿತ ಅಲ್ಲ. ಅನುದಾನಿತ ಶಾಲೆಗಳಲ್ಲಿ ನಿವೃತ್ತರಾದ ಮತ್ತು ಆಕಸ್ಮಿಕವಾಗಿ ಮೃತಪಟ್ಟ ಶಿಕ್ಷಕರಿಂದಾಗಿ ಖಾಲಿಯಾದ ಹುದ್ದೆಗಳು ಹಾಗೆಯೇ ಉಳಿದಿವೆ. ಅನೇಕ ಶಾಲೆಗಳಲ್ಲಿ ಗಣಿತ, ವಿಜ್ಞಾನ, ಹಿಂದಿ ಶಿಕ್ಷಕರಿಲ್ಲದೆ ವಿದ್ಯಾರ್ಥಿಗಳಿಗೆ ತೊಂದರೆಯಾಗಿದೆ.ಗಣಿತ, ವಿಜ್ಞಾನದಂತಹ ವಿಷಯಗಳನ್ನು ಬೇರೆ ಶಿಕ್ಷಕರು ಬೋಧನೆ ಮಾಡಲು ಸಾಧ್ಯವಿಲ್ಲ. ಈ ಹುದ್ದೆಗಳಿಗೆ ಅರ್ಹರನ್ನು ನೇಮಕ ಮಾಡಿಕೊಳ್ಳಲು ಸರ್ಕಾರ ಅನುಮತಿ ನೀಡಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry