ಶಿಕ್ಷಕಿ ವಜಾ: ಆಡಳಿತ ಮಂಡಳಿ ಭರವಸೆ

7

ಶಿಕ್ಷಕಿ ವಜಾ: ಆಡಳಿತ ಮಂಡಳಿ ಭರವಸೆ

Published:
Updated:ಬೆಂಗಳೂರು: ಹೋಮ್ ವರ್ಕ್ ಮಾಡದ ಕಾರಣಕ್ಕೆ ಮೂರನೇ ತರಗತಿ ವಿದ್ಯಾರ್ಥಿ ಮಹಮ್ಮದ್ ಹುಜೈಫ್‌ನ ಕೆನ್ನೆಗೆ ಹೊಡೆದು ಆತನ ಹಲ್ಲು ಮುರಿದಿದ್ದ ಸೇಂಟ್ ಮೇರಿ ಪಬ್ಲಿಕ್ ಶಾಲೆಯ ಶಿಕ್ಷಕಿ ನಿರ್ಮಲಾ ಅವರನ್ನು ಶಾಲೆಯ ಸೇವೆಯಿಂದ ವಜಾಗೊಳಿಸುವುದಾಗಿ ಶಾಲಾ ಆಡಳಿತ ಮಂಡಲಿ ಭರವಸೆ ನೀಡಿದೆ ಎಂದು ಬಾಲಕನ ಪೋಷಕರು ಹೇಳಿದ್ದಾರೆ.`ಗುರುವಾರ ಶಾಲೆಯ ಮುಖ್ಯಸ್ಥರನ್ನು ಭೇಟಿಯಾಗಿ ಹುಜೈಫ್‌ನ ವರ್ಗಾವಣೆ ಪತ್ರವನ್ನು ನೀಡುವಂತೆ ಕೇಳಿದೆವು. ಆದರೆ, ಶಾಲಾ ಆಡಳಿತ ಮಂಡಲಿಯ ಸದಸ್ಯರು ಶಿಕ್ಷಕಿಯನ್ನು ಸೇವೆಯಿಂದ ವಜಾ ಮಾಡುವ ಭರವಸೆ ನೀಡಿದ್ದಾರೆ.

ಹುಜೈಫ್‌ಗೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುಣವಾದ ನಂತರ ಆತ ಶಾಲೆಗೆ ಬರಲಿದ್ದಾನೆ' ಎಂದು ಹುಜೈಫ್‌ನ ತಂದೆ ಮಹಮ್ಮದ್ ಫಯಾಸ್ ತಿಳಿಸಿದರು.ಮುಚ್ಚಿರುವ ಡೈಸಿ ಸ್ಕೂಲ್: ಗಲಾಟೆ ಮಾಡಿದ ಕಾರಣಕ್ಕೆ ದಾದಿಯೊಬ್ಬರು ಆರು ಮಕ್ಕಳಿಗೆ ಬರೆ ಹಾಕಿದ್ದ ಡೈಸಿ ಸ್ಕೂಲ್‌ಗೆ ಗುರುವಾರ ಬೀಗ ಹಾಕಲಾಗಿತ್ತು. `ಘಟನೆಯ ನಂತರ ಶಾಲೆಯ ಬಗ್ಗೆ ಸ್ಥಳೀಯರು ಆಕ್ರೋಶ ಹೊಂದಿದ್ದಾರೆ. ಹೀಗಾಗಿ ಶಾಲೆಗೆ ಬೀಗ ಹಾಕಲಾಗಿದೆ' ಎಂದು ಶಾಲಾ ಆಡಳಿತ ಮಂಡಲಿಯ ಹಿರಿಯ ಸದಸ್ಯ ಜೇಮ್ಸ ಅಂಬಾಟ್ ತಿಳಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry