ಶಿಕ್ಷಕ ಮೈಮರೆತರೆ ಮಕ್ಕಳ ಭವಿಷ್ಯ ನಾಶ

7

ಶಿಕ್ಷಕ ಮೈಮರೆತರೆ ಮಕ್ಕಳ ಭವಿಷ್ಯ ನಾಶ

Published:
Updated:

ದೊಡ್ಡಬಳ್ಳಾಪುರ: ಒಂದು ಬಸ್ಸು ಅಥವಾ ವಿಮಾನ ಅಪಘಾತವಾದರೆ 50 ರಿಂದ 100 ಜನ ಮರಣ ಹೊಂದಬಹುದು. ಆದರೆ ಒಬ್ಬ ಶಿಕ್ಷಕ ತನ್ನ ಕರ್ತವ್ಯದಲ್ಲಿ ಉದಾಸೀನ ತೋರಿದರೆ ಲಕ್ಷಾಂತರ ಮಕ್ಕಳ ಭವಿಷ್ಯವೇ ಹಾಳಾಗುತ್ತದೆ. ಅವರೆಲ್ಲಾ ಜೀವಂತ ಶವಗಳಾಗುತ್ತಾರೆ ಎಂದು ಲೇಖಕ ಡಾ.ಗುರುರಾಜ ಕರ್ಜಗಿ ಹೇಳಿದರು.ಇಲ್ಲಿನ ನವೋದಯ ವಿದ್ಯಾಲಯದ್ಲ್ಲಲಿ ಮುಖ್ಯ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಶೈಕ್ಷಣಿಕ ನಾಯಕತ್ವ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.ಶಾಲೆಯ ಶೈಕ್ಷಣಿಕ ವಾತಾವರಣ ಉತ್ತಮವಾಗಲು ಅಲ್ಲಿನ ಮುಖ್ಯ ಶಿಕ್ಷಕನ ವರ್ತನೆ ಮಹತ್ತರ ಪಾತ್ರ ವಹಿಸುತ್ತದೆ. ಮುಖ್ಯ ಶಿಕ್ಷಕ ಮೊದಲು ಉತ್ತಮವಾಗಿರಬೇಕು. ತನ್ನ ಸಿಬ್ಬಂದಿ ಮತ್ತು ಮಕ್ಕಳ ನಡುವಿನ ಸಂಬಂಧವನ್ನು ಉದಾತ್ತ ರೀತಿಯಲ್ಲಿ ನಿಭಾಯಿಸಬೇಕು ಎಂದು ಹೇಳಿದರು. ಶಿಕ್ಷಕರೂ ಸದಾ ವಿದ್ಯಾಥಿಗಳಾಗಿದ್ದು ಜಾಗೃತಾವಸ್ಥೆಯಲ್ಲಿ ಇರಬೇಕಾಗುತ್ತದೆ. ತಮ್ಮನ್ನು ತಾವು ಅರಿತುಕೊಳ್ಳಬೇಕಾಗುತ್ತದೆ. ಇಡೀ ಸಮಾಜವೇ ಶಿಕ್ಷಕನ ಆದರ್ಶಗುಣಗಳ ಮೇಲೆ ನಿಂತಿರುತ್ತದೆ ಎಂಬುದನ್ನು ಮರೆಯಬಾರದು. ಸಜ್ಜನಿಕೆ ಮತ್ತು ಮಕ್ಕಳ ಮುಂದೆ ಸದಾ ಹಸನ್ಮುಖನಾಗಿ ಇರಬೇಕಾದ ಗುಣಗಳನ್ನು ರೂಢಿಸಿಕೊಳ್ಳಬೇಕಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಹುಲಿಕಲ್ ನಟರಾಜ್ ಅವರನ್ನು ಅಭಿನಂದಿಸಲಾಯಿತು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಚ್.ವಿ.ವೆಂಕಟೇಶಪ್ಪ ಮತ್ತಿತರರು ಭಾಗವಹಿಸಿದ್ದರು.ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ವತಿಯಿಂದ ಶಿಬಿರವನ್ನು ಆಯೋಜಿಸಲಾಗಿದೆ. ಇದು ಐದು ದಿನಗಳ ಕಾಲ ನಡೆಯಲಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry