ಸೋಮವಾರ, ಮೇ 17, 2021
26 °C

ಶಿಕ್ಷಕ, ವಿಜ್ಞಾನಿ, ರೈತವಿಜ್ಞಾನಿ ಪ್ರಶಸ್ತಿ ಪ್ರದಾನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು: ಅತ್ಯುತ್ತಮ ರೈತ ವಿಜ್ಞಾನಿ ಪ್ರಶಸ್ತಿ ಸೇರಿದಂತೆ 2010-11ನೇ ಸಾಲಿನ ಅತ್ಯುತ್ತಮ ಶಿಕ್ಷಕ, ವಿಜ್ಞಾನಿಗಳು, ಸೇವಾ ಸಿಬ್ಬಂದಿ, ಸಂಶೋಧನಾ ಪ್ರಶಸ್ತಿ ಮತ್ತು ಸಂಶೋಧನಾ ಯೋಜನೆಗಳನ್ನು ಪಡೆದಿರುವ ವಿಜ್ಞಾನಿಗಳಿಗೆ ಪ್ರೋತ್ಸಾಹಧನ ವಿತರಣೆಯನ್ನು ಭಾನುವಾರ ಕೃಷಿ ವಿಶ್ವವಿದ್ಯಾಲಯ ಪ್ರೇಕ್ಷಾಗೃಹದಲ್ಲಿ ಕೃಷಿ ವಿಜ್ಞಾನಿಗಳ ನೇಮಕಾತಿ ಮಂಡಳಿಯ ಅಧ್ಯಕ್ಷ ಡಾ.ಗುರಬಚನ್‌ಸಿಂಗ್ ನೆರವೇರಿಸಿದರು.ಶಿಕ್ಷಕ ಪ್ರಶಸ್ತಿ: ಕೃಷಿ ಮಹಾವಿದ್ಯಾಲಯದ ಸಸ್ಯ ರೋಗಶಾಸ್ತ್ರದ ವಿಭಾಗದ ಮುಖ್ಯಸ್ಥ ಡಾ.ಎಂ.ಕೆ ನಾಯಕರಿಗೆ ಪ್ರಶಸ್ತಿ ಫಲಕ, 10 ಸಾವಿರ ನಗದು ಬಹುಮಾನ ನೀಡಲಾಯಿತು.ಅತ್ಯುತ್ತಮ ವಿಸ್ತರಣಾ ವಿಜ್ಞಾನಿ ಪ್ರಶಸ್ತಿ: ಗುಲ್ಬರ್ಗದ ಕೃಷಿ ವಿಜ್ಞಾನ ಕೇಂದ್ರದ ಬೇಸಾಯ ಶಾಸ್ತ್ರದ ವಿಷಯ ತಜ್ಞ ಡಾ. ಆರ್.ಎಲ್ ಜಾಧವ್ ಅವರಿಗೆ ಪ್ರಶಸ್ತಿ ಫಲಕ, 10 ಸಾವಿರ ನಗದು ಬಹುಮಾನ ಕೊಡಲಾಯಿತು.ಪೋತ್ಸಾಹಧನ, ಪ್ರಶಸ್ತಿ:
ಹೊರಗಿನ ಹಣಕಾಸು ಸಹಾಯದ ಸಂಶೋಧನಾ ಯೋಜನೆಗಳನ್ನು ಕಾರ್ಯಾಚರಣೆಗೊಳಿಸಿವ ವಿಜ್ಞಾನಿಗಳಿಗೆ ಪ್ರೋತ್ಸಾಹ ಧನ ಪ್ರಶಸ್ತಿ ವಿಭಾಗದಲ್ಲಿ ಗುಲ್ಬರ್ಗ ಕೃಷಿ ಸಂಶೋಧನಾ ಕೇಂದ್ರದ ಯೋಜನಾ ನಿರ್ದೇಶಕ ಡಾ.ಸುಹಾಸ ಯಲಶೆಟ್ಟಿ ಅವರಿಗೆ ಪ್ರಶಸ್ತಿ ಫಲಕ, 25 ಸಾವಿರ ಪೋತ್ಸಾಹಧನ ನೀಡಲಾಯಿತು. ಬೀದರ್ ಕೃಷಿ ವಿಜ್ಞಾನ ಕೇಂದ್ರ ಕಾರ್ಯಕ್ರಮ ಸಂಯೋಜಕ ಡಾ.ಆರ್.ಸಿ ದೇಶಮುಖ ಪ್ರಶಸ್ತಿ ಫಲಕ, 25 ಸಾವಿರ ಪೋತ್ಸಾಹಧನ ಪ್ರದಾನ ಮಾಡಲಾಯಿತು.

 

ರಾಯಚೂರು ಕೃಷಿ ತಾಂತ್ರಿಕ ಮಹಾವಿದ್ಯಾಲಯದ ಕೃಷಿ ಸಂಸ್ಕೃರಣ ಮತ್ತು ಆಹಾರ ತಂತ್ರಜ್ಞಾನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಸಿ.ಟಿ ರಾಮಚಂದ್ರ ಅವರಿಗೆ ಪ್ರಶಸ್ತಿ ಫಲಕ, 15 ಸಾವಿರ ಪೋತ್ಸಾಹಧನ ನೀಡಲಾಯಿತು. ಗುಲ್ಬರ್ಗದ ಕೃಷಿ ಸಂಶೋಧನಾ ಕೇಂದ್ರದ ಹಿರಿಯ ವಿಜ್ಞಾನಿ ಡಾ.ಎಂ.ಡಿ ಮಣ್ಣೂರ್ ಅವರಿಗೆ ಪ್ರಶಸ್ತಿ ಫಲಕ ಹಾಗೂ 5 ಸಾವಿರ ಪೋತ್ಸಾಹಧನ ಪ್ರದಾನ ಮಾಡಲಾಯಿತು.ಸಂಶೋಧನಾ ಕೇಂದ್ರಗಳಿಗೆ ಪ್ರಶಸ್ತಿ:  ಹೆಚ್ಚು ಆದಾಯ ಗಳಿಸುವ ಮತ್ತು ಅತ್ಯುತ್ತಮ ಕಾರ್ಯ ನಿರ್ವಹಿಸಿದ ಸಂಶೋಧನಾ ಕೇಂದ್ರದ ಪ್ರಶಸ್ತಿ ಫಲಕ, 25 ಸಾವಿರ ನಗದು ಬಹುಮಾನವನ್ನು ಸಿರಗುಪ್ಪಾದ ಕೃಷಿ ಸಂಶೋಧನಾ ಕೇಂದ್ರಕ್ಕೆ ನೀಡಲಾಯಿತು.ಅತ್ಯುತ್ತಮ ಕ್ಷೇತ್ರ ಸಹಾಯಕ ಪ್ರಶಸ್ತಿ:  ಕವಡಿಮಟ್ಟಿ ಕೃಷಿ ಸಂಶೋಧನಾ ಕೇಂದ್ರದ ಕ್ಷೇತ್ರ ಸಹಾಯಕ ಎಸ್.ಎಸ್ ಮಾಳಗಿ ಅವರಿಗೆ ಪ್ರಶಸ್ತಿ ಫಲಕ, 5 ಸಾವಿರ ನಗದು ಬಹುಮಾನ ಪ್ರದಾನ ಮಾಡಲಾಯಿತು.

ಅತ್ಯುತ್ತಮ ಸಹಾಯಕ ಸಿಬ್ಬಂದಿ ಪ್ರಶಸ್ತಿ:  ರಾಯಚೂರು ಕೃಷಿ ವಿವಿ ಹಣಕಾಸು ನಿಯಂತ್ರಣಾಧಿಕಾರಿಗಳ ಕಚೇರಿಯ ಅಧೀಕ್ಷಕರಾದ ಉಮಾದೇವಿ ಅವರಿಗೆ ಪ್ರಶಸ್ತಿ ಫಲಕ, 5 ಸಾವಿರ ನಗದು ಬಹುಮಾನ ಪ್ರದಾನ ಮಾಡಲಾಯಿತು.ಕೃಷಿ ಕಾರ್ಮಿಕ ಪ್ರಶಸ್ತಿ: ಭೀಮರಾಯಗುಡಿ ಕೃಷಿ ಸಂಶೋಧನಾ ಕೇಂದ್ರದ ಕೃಷಿ ಕಾರ್ಮಿಕ ಕುಬೇರ ಅವರಿಗೆ ಪ್ರಶಸ್ತಿ ಫಲಕ ಹಾಗೂ 5 ಸಾವಿರ ನಗದು ಬಹುಮಾನ ಪ್ರದಾನ ಮಾಡಲಾಯಿತು. ರೈತ ವಿಜ್ಞಾನಿ ಪ್ರಶಸ್ತಿ: ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲ್ಲೂಕಿನ ಮಟ್ಟೂರು ಗ್ರಾಮದ ಮಲ್ಲೇಶ ಗೌಡ ಪಾಟೀಲ್ ಅವರಿಗೆ ಪ್ರಶಸ್ತಿ ಫಲಕ, 50 ಸಾವಿರ ನಗದು ಬಹುಮಾನ ಪ್ರದಾನ ಮಾಡಲಾಯಿತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.