ಶನಿವಾರ, ಮೇ 8, 2021
27 °C

ಶಿಕ್ಷಕ ಹರೋನಹಳ್ಳಿ ಸ್ವಾಮಿಗೆ ರಾಷ್ಟ್ರೀಯ ವಿಜ್ಞಾನ ಶಿಕ್ಷಕ ಪ್ರಶಸ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಭದ್ರಾವತಿ: ಇಲ್ಲಿನ ಹಿರಿಯೂರು ಎಸ್‌ಬಿಎಂಆರ್ ಪ್ರೌಢಶಾಲೆ ಶಿಕ್ಷಕ ಹರೋನಹಳ್ಳಿ ಸ್ವಾಮಿ ಅವರಿಗೆ ರಾಷ್ಟ್ರಮಟ್ಟದ ವಿಶೇಷ ವಿಜ್ಞಾನ ಶಿಕ್ಷಕ ಪ್ರಶಸ್ತಿಗೆ ಭಾಜನರಾಗಿದ್ದಾರೆ.ಕಳೆದ 25ವರ್ಷದಿಂದ ಪವಾಡಗಳ ರಹಸ್ಯ ಬಯಲು, ಬೀದಿ ನಾಟಕ, ಆಕಾಶ ವೀಕ್ಷಣೆ, ವಿಜ್ಞಾನ ಮತ್ತು ಪರಿಸರ ಗೀತೆಗಳ ಗಾಯನ, ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ, ವೈಚಾರಿಕ ಮತ್ತು ವೈಜ್ಞಾನಿಕ ಉಪನ್ಯಾಸ ನೀಡಿ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುತ್ತಿರುವ ಸ್ವಾಮಿ ಅವರು ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ.ಈಗಾಗಲೇ ರಾಜೀವ್‌ಗಾಂಧಿ ಸ್ಮಾರಕ ರಾಜ್ಯ ವಿಜ್ಞಾನ ಪ್ರಶಸ್ತಿ, ಗುರು ಪುರಸ್ಕಾರ ಪ್ರಶಸ್ತಿ, ಬೋಲ್ಟ್ ಪ್ರಶಸ್ತಿ ಪಡೆದಿರುವ ಸ್ವಾಮಿ ಅವರಿಗೆ ಜೂನ್ 28ರಂದು ಬೆಂಗಳೂರಿನ ಸಿಎನ್‌ಆರ್ ರಾವ್ ಭವನದಲ್ಲಿ ನಡೆಯುವ ರಾಷ್ಟ್ರೀಯ ವಿಜ್ಞಾನ ಸಮಾವೇಶದಲ್ಲಿ ಈ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ಬೆಂಗಳೂರಿನ ಜವಾಹರಲಾಲ್ ನೆಹರು ಸೆಂಟರ್ ಫಾರ್ ಅಡ್‌ವಾನ್ಸ್‌ಡ್ ಸೈಂಟಿಫಿಕ್ ಆಂಡ್ ರಿಸರ್ಚ್ ಸಂಸ್ಥೆ ಸ್ಥಾಪಿಸಿರುವ ಸಿಎನ್‌ಆರ್ ರಾವ್ ಫೌಂಡೇಷನ್ ವತಿಯಿಂದ ಈ ಪ್ರಶಸ್ತಿ ನೀಡಲಾಗುವುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.