ಶಿಕ್ಷಣಕ್ಕೆ ನೆರವು ಕಾರ್ಯಕ್ರಮ

7

ಶಿಕ್ಷಣಕ್ಕೆ ನೆರವು ಕಾರ್ಯಕ್ರಮ

Published:
Updated:

ಯುನೈಟೆಡ್ ವೇ ಬೆಂಗಳೂರು ಆರ್ಥಿಕವಾಗಿ ಹಿಂದುಳಿದ ವರ್ಗಗಳ ಶಿಕ್ಷಣಕ್ಕೆ ನೆರವು ನೀಡಲು ಮುಂದಾಗಿದ್ದು ಅರ್ಹರಿಂದ ಅರ್ಜಿ ಆಹ್ವಾನಿಸಿದೆ.ಈ ಸಂಸ್ಥೆ ನಗರದ ಮುನ್ಸಿಪಲ್ ವಾರ್ಡುಗಳ್ಲ್ಲಲಿ ವಾಸಿಸುತ್ತಿರುವ ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ನೆರವಾಗುವಂತಹ ಕಾರ್ಯಕ್ರಮಗಳನ್ನು ಪ್ರತಿವರ್ಷ ಆಯೋಜಿಸಿಕೊಂಡು ಬರುತ್ತಿದೆ. ಈ ಕಾರ್ಯಕ್ರಮದ ಅಡಿಯಲ್ಲಿ ಆಯ್ಕೆಯಾದ 60 ವಿದ್ಯಾರ್ಥಿಗಳಿಗೆ ಸಂಸ್ಥೆ ಸೆಂಟ್ ಜೋಸೆಫರ ಕಾಲೇಜಿಗೆ ಸೇರಲು ನೆರವು ನೀಡಲಿದೆ.ಈ ನೆರವು ಪಿಯುಸಿ (ಕಲೆ, ಮತ್ತು ವಾಣಿಜ್ಯ ವಿಭಾಗ) ವಿದ್ಯಾರ್ಥಿಗಳ ಶಿಕ್ಷಣದ ಖರ್ಚುವೆಚ್ಚಗಳನ್ನು ಒಳಗೊಂಡಿರುತ್ತದೆ. ಈ ಕಾರ್ಯಕ್ರಮದಲ್ಲಿ ಆಂಗ್ಲ ಭಾಷೆ, ಗಣಕಯಂತ್ರ ಕಲಿಕೆ, ಮತ್ತು ಮೌಲ್ಯ ಶಿಕ್ಷಣ, ಜೀವನ ಕೌಶಲ್ಯಗಳು ಮತ್ತು ವ್ಯಕ್ತಿತ್ವ ವಿಕಸನ ಅವಕಾಶಗಳನ್ನು ಕಲಿಸಲಾಗುತ್ತದೆ.ವಾರ್ಷಿಕ ಆದಾಯ 60 ಸಾವಿರಕ್ಕಿಂತ ಕಡಿಮೆ ಇರುವ ಕುಟುಂಬಗಳ ಮತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ 55ಕ್ಕಿಂತ ಹೆಚ್ಚು ಅಂಕಗಳನ್ನು ಗಳಿಸಿದ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು.

 

ಆಯ್ಕೆಯಾದ ವಿದ್ಯಾರ್ಥಿಗಳು ತಜ್ಞರ ತಂಡವೊಂದು ನಡೆಸುವ ಸಂದರ್ಶನದ ಸುತ್ತಿನಲ್ಲಿ ತೇರ್ಗಡೆಯಾಗಬೇಕು. ಅರ್ಜಿ ಸಲ್ಲಿಸಲು ಮೇ 19 ಕೊನೆಯ ದಿನಾಂಕ. ಮಾಹಿತಿಗೆ: 99029 37642. ಠಿಠಿ://ಡಿಡಿಡಿ.್ಠಡಿಚಿಛ್ಞಿಜಚ್ಝ್ಠ್ಟ್ಠ.ಟ್ಟಜ/

ಯುನೈಟೆಡ್ ವೇ ಬೆಂಗಳೂರು, ನಗರದ ಸುತ್ತಮುತ್ತಲಿನ ಸಮುದಾಯಗಳ ಶೈಕ್ಷಣಿಕ, ಆರೋಗ್ಯ ರಕ್ಷಣೆ, ಜೀವನೋಪಾಯಗಳ ಮಟ್ಟ ಹಾಗೂ ಪರಿಸರ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಸಿಕೊಂಡಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry